ಬಂಟ್ವಾಳ: ಇತಿಹಾಸ ಪ್ರಸಿದ್ಧ ಶಿವ ಕ್ಷೇತ್ರ ಮಹಾತೋಬಾರ ಶ್ರೀ ಕಾರಿಂಜೇಶ್ವರ ದೇವಸ್ಥಾನಕ್ಕೆ ಅನ್ಯಮತೀಯ ಯುವಕರು ಚಪ್ಪಲಿ ಧರಿಸಿ ಪ್ರವೇಶಿಸಿ ದೇವಸ್ಥಾನ ಪಾವಿತ್ರ್ಯತೆಗೆ ಅಪವಿತ್ರವೆಸಗಿದ್ದಾರೆ.
ಸಾವಿರಾರು ವರ್ಷಗಳ ಇತಿಹಾಸವಿರುವ ಹಿಂದೂಗಳ ಪವಿತ್ರ ಕ್ಷೇತ್ರ ಕಾರಿಂಜೇಶ್ವರ ದೇವಾಲಯದೊಳಗೆ ಮುಸ್ಲಿಂ ಯುವಕರ ತಂಡವೊಂದು ಚಪ್ಪಲಿ ಹಾಕಿಕೊಂಡು ಒಳಪ್ರವೇಶಿಸಿ, ಅಲ್ಲಿ ಕೆಲ ಅಸಹ್ಯ ರೀತಿಯಲ್ಲಿ ವರ್ತಿಸಿ ವಿಡಿಯೋ ಮಾಡಿ ಹರಿದುಬಿಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು ಇನ್ನೂ ಕೂಡ ಹಿಂದೂಗಳ ಭಾವನೆಗೆ ಧಕ್ಕೆ ತಂದವರನ್ನು ಬಂಧಿಸಿಲ್ಲ.
5 ಜನ ಯುವಕರು ಕೇರಳ ನೊಂದಾಯಿತ ಹೊಂಡಾ ಕಾರೊಂದರಲ್ಲಿ ಕಾರಿಂಜಕ್ಕೆ ಬಂದಿದ್ದು ಅಲ್ಲಿ ವಿಡಿಯೋ ಚಿತ್ರೀಕರಣ ಮಾಡಿಕೊಂಡು ದೇವಸ್ಥಾನದ ಒಳಗೆ, ಹೊರಾಂಗಣದಲ್ಲಿ ಚಪ್ಪಲಿ ಧರಿಸಿಕೊಂಡೇ ತಿರುಗಾಡಿದ್ದಾರೆ. ಇದನ್ನೆಲ್ಲ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿದುಬಿಟ್ಟಿದ್ದಾರೆ. ಈ ಯುವಕರು ಕಾಸರಗೋಡು ಭಾಗದವರು ಎನ್ನಲಾಗಿದೆ.


ಬಂಧಿಸುವಂತೆ ಮನವಿ : ಮಹತೊಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನ ಕಾರಿಂಜ ಕಿಡಿಗೇಡಿಗಳು ಅಕ್ರಮವಾಗಿ ಚಪ್ಪಲಿ ಹಾಕಿ ಪ್ರವೇಶ ಮಾಡಿ ಹಿಂಧೂಗಳ ಭಾವನೆಗಳಿಗೆ ದಕ್ಕೆ ತಂದಿದ್ದು. ಅಲ್ಲದೆ ದೇವಸ್ಥಾನದಲ್ಲಿ ಚಪ್ಪಲಿ ಹಾಕಿ ನಡೆದಾಡುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ವಿಜ್ರಂಭಿಸಿ ಹಿಂದೂಗಳ ಧಾರ್ಮಿಕ ನಂಬಿಕೆಗೂ ಧಕ್ಕೆ ತಂದಿದ್ದು ಇದನ್ನು ದೇವಸ್ಥಾನದ ಆಡಳಿತ ಮಂಡಳಿ ತೀವ್ರವಾಗಿ ಖಂಡಿಸಿದ್ದು ಆರೊಪಿಗಳನ್ನು ಶೀಘ್ರ ಬಂಧಿಸಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕಾಗಿ ಪುಂಜಾಲಕಟ್ಟೆ ಠಾಣೆಗೆ ಮನವಿ ನೀಡಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಗ್ರಾಮಣಿ ವೆಂಕಟ್ರಮಣ ಮುಚ್ಚಿನ್ನಾಯ,
ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಪ್ರವೀಣ ಪೂಜಾರಿ ಪಡಂತ್ರ್ಯಬೆಟ್ಟು, ಕಾವಳ ಮೂಡುರು ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಅಜಿತ್ ಶೆಟ್ಟಿ ಕಾರಿಂಜ, ದೇವಸ್ಥಾನ ದ ಮ್ಯಾನೇಜರ್ ವಿನಯ ಕುಮಾರ್ ಎ
ಶರ್ಮಿತ್ ಜೈನ್ ಕಾರಿಂಜ ಉಪಸ್ಥಿತರಿದ್ದರು.
ಹಿಂದೂ ಜಾಗರಣ ವೇದಿಕೆ ಕೂಡ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪುಂಜಾಲಕಟ್ಟೆ ಠಾಣೆಗೆ ಮನವಿ ಮಾಡಿದೆ.
ಪ್ರಕರಣ ದಾಖಲು: ಅಪರಿಚಿತ ಕಿಡಿಗೇಡಿಗಳು ಬಂಟ್ವಾಳ ತಾಲೂಕು ಕಾವಳಮುಡೂರು ಗ್ರಾಮದ ಶ್ರೀ ಕಾರಿಂಜೇಶ್ವರ ದೇವಾಸ್ಥಾನಕ್ಕೆ ಚಪ್ಪಲಿ ಧರಿಸಿಕೊಂಡು ಪ್ರವೇಶ ಮಾಡಿ ಧಾರ್ಮಿಕ ನಂಬಿಕೆಗೆ ಧಕ್ಕೆ ಉಂಟು ಮಾಡಿ ಪೂಜಾ ಸ್ಥಳವನ್ನು ಅಪವಿತ್ರಗೊಳಿಸಿರುವ ಬಗ್ಗೆ ಕಿಡಿಗೇಡಿ ಆರೋಪಿತರ ವಿರುದ್ಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

One Response
ಅವರನ್ನು ಒಳಗೆ ಬಿಟ್ಟವರು ಯಾರು? ನಿಮಗೆ ತಲೆಯಲ್ಲಿ ಏನಾದರೂ ಇದೆಯಾ? ಅಷ್ಟೇಲ್ಲ ವಿಡಿಯೋ ಮಾಡುವಾಗ ನೀವೆಲ್ಲ ಎಲ್ಲಿದ್ದೀರಿ ?