ನವ ದೆಹಲಿ : ನ 3 : ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತ್ರತ್ವದ ಸರಕಾರವು ದೇಶದ ಜನತೆಗೆ ಭರ್ಜರಿ ಕೊಡುಗೆ ನೀಡಿದೆ. ತೈಲಗಳ ಮೇಲೆ ಕೇಂದ್ರ ಸರಕಾರವು ತಾನು ವಿಧಿಸುತ್ತಿರುವ ಅಬಕಾರಿ ಸುಂಕ (Excise duty ) ವನ್ನು ಗಣನೀಯ ಪ್ರಮಾಣದಲ್ಲಿ ಕಡಿತಗೊಳಿಸುವುದಾಗಿ ತಿಳಿಸಿದೆ.
ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು 5 ರೂಪಾಯಿ ಹಾಗೂ ಡೀಸೆಲ್ ಮೇಲಿನ ಸುಂಕವನ್ನು ರೂ. 10 ರಷ್ಟು ಕೇಂದ್ರ ಸರಕಾರ ಇಳಿಸಿರುವುದಾಗಿ ಅಂಗ್ಲ ವಾರ್ತಾವಾಹಿನಿ ANI ವರದಿ ಮಾಡಿದೆ. ಹೀಗಾಗಿ ನಾಳೆಯಿಂದ ಪ್ರತಿ ಲೀಟರ್ ಪೆಟ್ರೋಲ್ ನ ದರ 5 ಹಾಗೂ ಡೀಸೆಲ್ ನ ದರ 10 ರಷ್ಟು ಇಳಿಕೆಯಾಗಲಿದೆ.
ಕಳೆದೆರಡು ವರ್ಷಗಳಿಂದ ನಿರಂತರವಾಗಿ ಈ ಎರಡು ತೈಲಗಳ ಬೆಲೆಯಲ್ಲಿ ಏರಿಕೆ ಕಂಡಿತ್ತು. ಕಳೆದ ಮೂರು ತಿಂಗಳಿನಲ್ಲಿ ಇದು ರೂ 100 ರ ಗಡಿಯನ್ನು ದಾಟಿ ಮುನ್ನಡೆದಿತ್ತು. ಇದರಿಂದಾಗಿ ಇತರ ದಿನ ಬಳಕೆಯ ವಸ್ತುಗಳ ಬೆಲೆಯ ಮೇಲೂ ತೀವ್ರ ಪರಿಣಾಮ ಬೀರಿತ್ತು.
On eve of #Diwali, Government of India announces excise duty reduction on petrol and diesel. Excise duty on Petrol and Diesel to be reduced by Rs 5 and Rs 10 respectively from tomorrow pic.twitter.com/peYP1fA4gO
— ANI (@ANI) November 3, 2021
ಪೆಟ್ರೋಲ್ ಹಾಗೂ ಡಿಸೀಲ್ ಮೇಲೆ ರಾಜ್ಯ ಹಾಗೂ ಕೇಂದ್ರ ಎರಡು ಸರಕಾರಗಳು ತೆರಿಗೆ ವಿಧಿಸುತ್ತವೆ . ಒಂದು ಲೀಟರ್ ಪೆಟ್ರೋಲ್ ಬೆಲೆಯಲ್ಲಿ ರೂ 65-70 ರೂಪಾಯಿಯಷ್ಟು ತೆರಿಗೆ ಸೇರಿದೆ ಎಂದು ವಿಷಯ ತಜ್ಣರು ತಿಳಿಸುತ್ತಾರೆ . ಹೀಗಾಗಿ ಇದರ ಮೇಲಿನ ತೆರಿಗೆಯನ್ನು ಇಳಿಸಬೇಕೆಂದು ಕಳೆದ ಕೆಲ ತಿಂಗಳುಗಳಿಂದ ಜನ ಸಾಮಾನ್ಯರಿಂದ ಬೇಡಿಕೆ ಕೇಳಿ ಬರುತಿತ್ತು