ಪುತ್ತೂರು: ವಿದೇಶಗಳಿಂದ ಅಮದು ಮಾಡಿಕೊಂಡಿರುವ ಅತ್ಯಾಧುನಿಕ ಉಪಕರಣಗಳ ಮೂಲಕ ತ್ವರಿತ ಹಾಗೂ ನಿಖರ ಫಲಿತಾಂಶ ನೀಡುವ ಖ್ಯಾತಿ ಪಡೆದಿರುವ ಹಾಗೂ 500ಕ್ಕೂ ಹೆಚ್ಚು ವಿವಿಧ ರೀತಿಯ ತಪಾಸಣಾ ಸೌಲಭ್ಯ ಹೊಂದಿರುವ ‘ವಿ ಕೇರ್ ಲ್ಯಾಬೊರೇಟರೀಸ್ ನ ಎರಡನೇ ಶಾಖೆಯೂ ಪುತ್ತೂರಿನ ಕಲ್ಲಾರೆ ಮುಖ್ಯ ರಸ್ತೆಯ ಶ್ರೀನಿವಾಸ ಪ್ಲಾಝಾದಲ್ಲಿ ನ.3 ರಂದು ಲೋಕರ್ಪಾಣೆಗೊಳ್ಳಲಿದೆ. ಇದರ ಮುಖ್ಯ ಶಾಖೆಯೂ ವಿಟ್ಲದ ಮೋತಿ ಸಿಟಿ ಕಾಂಪ್ಲೆಕ್ಸ್ ನಲ್ಲಿ ಕಳೆದೆರಡು ವರ್ಷಗಳಿಂದ ಯಶಸ್ವಿಯಾಗಿ ಕಾರ್ಯಾಚರಿಸುತ್ತಿದೆ.


ಉದ್ಯಮಿ ಕುಂಜೂರುಪಂಜ ನವಾಝ್ ಮಾಲಕತ್ವದ ಈ ಸುಸಜ್ಕಿತ ಲ್ಯಾಬ್
‘ರಿಸಲ್ಟ್ ಯು ಕ್ಯಾನ್ ಬಿಲೀವ್ ಇನ್’ ಎನ್ನುವ ಘೋಷ ವಾಕ್ಯದಡಿ ಗುಣಮಟ್ಟದ ಸೇವೆ ನೀಡುತ್ತಿದೆ. ವಿಟ್ಲದಲ್ಲಿ ಕಾರ್ಯಚರಿಸುತಿದ್ದರೂ ಅದರ ಸೇವೆಯ ಕಂಪು ಪುತ್ತೂರಿಗೆ ಪಸರಿಸಿದೆ. ಹಾಗಾಗಿಯೇ ಸಂಸ್ಥೆಯ ಎರಡನೇ ಶಾಖೆಯೂ ಪುತ್ತೂರಿನಲ್ಲಿ ಕಾರ್ಯಾರಂಭಿಸಲಿದ್ದೂ, ಶುಭಾರಂಭದ ಪ್ರಯುಕ್ತ ರಿಯಾಯಿತಿ ದರದಲ್ಲಿ ಸಂಪೂರ್ಣ ಆರೋಗ್ಯ ತಪಾಸಣಾ ಪ್ಯಾಕ್ ಸಹಿತ ಹಲವು ವಿಶೇಷ ಅಫರ್ ಗಳನ್ಮು ಅದು ತನ್ನ ಗ್ರಾಹಕರಿಗೆ ನೀಡುತ್ತಿದೆ. ಪ್ರಥಮ ದಿನ ಆಗಮಿಸುವ ಗ್ರಾಹಕರಿಗೆ ಉಚಿತ ಶುಗರ್ ಹಾಗೂ ಬಿಪಿ ತಪಾಸಣೆ, ಆರಂಭಿಕ ಕೂಡುಗೆಯಾಗಿ ಪ್ರತಿ ತಪಾಸಣೆಯಲ್ಲೂ 25% ಕಡಿತವನ್ನು ಸಂಸ್ಥೆ ಘೋಷಿಸಿದೆ.

ಉದ್ಘಾಟನಾ ಸಮಾರಂಭ ದ
ಮುಖ್ಯ ಅತಿಥಿಗಳಾಗಿ ಸೈಯ್ಯದ್ ಅಹ್ಮದ್ ಫಕೋಯ ತಂಙಳ್, ಶಾಸಕರಾದ ಸಂಜೀವ ಮಠಂದೂರು, ಸಹಾಯಕ ಆಯುಕ್ತರಾದ ಡಾ. ಯತೀಶ್ ಉಳ್ಳಾಲ್, ನಗರಸಭಾಧ್ಯಕ್ಷ ಕೆ. ಜೀವಂಧರ್ ಜೈನ್, ಪೌರಾಯುಕ್ತ ಮಧು ಎಸ್.ಮನೋಹರ್, ತಹಶೀಲ್ದಾರ್ ಟಿ. ರಮೇಶ್ ಬಾಬು, ಮಾಜಿ ಶಾಸಕರಾದ ಶಕುಂತಳಾ ಶೆಟ್ಟಿ, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮುಳಿಯ ಕೇಶವ ಪ್ರಸಾದ್, ನಗರಸಭಾ ಸದಸ್ಯ ಮನೋಹರ್ ಕಲ್ಲಾರೆ, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ, ಎಸ್ಡಿಪಿಐ ವಿಧಾನಸಭಾ ಕ್ಷೇತ್ರಾಧ್ಯಕ್ಷ ಇಬ್ರಾಹಿಂ ಸಾಗರ್ , ಫಿಲೋಮಿನಾ ಪಿಯು ಕಾಲೇಜು ಪ್ರಾಂಶುಪಾಲ ರೆ.ಫಾ. ವಿಜಯ್ ಲೋಬೋ ಮತ್ತು ದಾವೂದ್ ಕೋಡಿಂಬಾಡಿ ಭಾಗವಹಿಸಲಿದ್ದಾರೆ .
ರಕ್ತ,ಮೂತ್ರ, ಮಲ, ಕಫದ ಮಾದರಿಗಳ 500ಕ್ಕೂ ಹೆಚ್ಚು ವಿಧದ ತಪಾಸಣಾ ಸೌಲಭ್ಯಗಳನ್ನು ಒದಗಿಸುತ್ತಿದೆ.
ಗ್ರಾಹಕರ ಅನುಕೂಲಕ್ಕಾಗಿ ಸಂಸ್ಥೆಯಲ್ಲಿ ವಿವಿಧ ರಕ್ತಪರೀಕ್ಷಾ ಪ್ಯಾಕೇಜ್ಗಳು ರಿಯಾಯಿತಿ ದರದಲ್ಲಿ ಲಭ್ಯವಿದೆ. ತಪಾಸಣೆ ಮಾಡಿದ ರಿಪೋರ್ಟ್ ಗಳು ಎಸ್ ಎಂಎಸ್ ಹಾಗೂ ಇಮೇಲ್ ಮೂಲಕವೂ ಗ್ಯಾಹಕರ ಕೈ ಸೇರಲಿದೆ.
ಬೆಳಗ್ಗೆ 6 ಗಂಟೆಯಿಂದ ರಾತ್ರಿ 8.30ರವರೆಗೆ ಲ್ಯಾಬ್ ಕಾರ್ಯಾಚರಿಸಲಿದೆ. ಮೊದಲೆ ಅಪಾಯಿಂಟ್ಮೆಂಟ್ ಪಡಕೊಳ್ಳುವ ಮತ್ತು ಮನೆಯಿಂದಲೇ ಸ್ಯಾಂಪಲ್ ಕಲೆಕ್ಷನ್ ಮಾಡಿಕೊಳ್ಳುವ ವ್ಯವಸ್ಥೆಯೂ ಇಲ್ಲಿದೆ. ಶುಭಾರಂಭದ ಪ್ರಯುಕ್ತ ಕೊಡುಗೆಯಾಗಿ ಎಲ್ಲಾ ಬಗೆಯ ಟೆಸ್ಟ್ ಗಳ ಮೇಲೆ 25% ರಿಯಾಯಿತಿ ಲಭಿಸಲಿದೆ. ಹೆಚ್ಚಿನ ಮಾಹಿತಿಗೆ ಮೊ.ಸಂ.: 6363695272 ಅನ್ನು ಸಂಪರ್ಕಿಸಬಹುದಾಗಿದೆ.