Ad Widget

ಮಂಗಳೂರು : ಒಂಟಿ ಮಹಿಳೆಯರನ್ನೆ ಟಾರ್ಗೆಟ್ ಮಾಡಿ ಸರ, ಅಭರಣ ಕಳ್ಳತನ ಮಾಡುತಿದ್ದ, ಜಿಲ್ಲೆಯಲ್ಲಿ ಭಯದ ವಾತವರಣ ಸೃಷ್ಟಿಸಿದ್ದ 7 ಕಳ್ಳರ ಬಂಧನ | ಕಳವಿಗೆ ಹೆಣೆದಿದ್ದರು ವಿಭಿನ್ನ ಪ್ಲ್ಯಾನ್

mangalore
Ad Widget

Ad Widget

Ad Widget

ಮಂಗಳೂರು : ನ 2:  ಮಂಗಳೂರು ಪೊಲೀಸ್ ಕಮಿಷನರೆಟ್‌ ವ್ಯಾಪ್ತಿಯಲ್ಲಿ ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಣಿ ಸರಗಳ್ಳತನ ನಡೆಸುತಿದ್ದ ಖತರ್ನಾಕ್‌ ಗ್ಯಾಂಗ್‌ ವೊಂದನ್ನು ಮಂಗಳೂರು ಪೊಲೀಸರ ತಂಡ ಬಂಧಿಸಿದೆ. ಒಟ್ಟು 7 ಆರೋಪಿಗಳನ್ನು ಬಂಧಿಸಿದ್ದು , ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಇನ್ನಿಬ್ಬರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಮಂಗಳೂರು ಪೊಲೀಸ್‌ ಆಯುಕ್ತ ಎನ್‌ ಶಶಿಕುಮಾರ್‌ ತಿಳಿಸಿದ್ದಾರೆ

Ad Widget

Ad Widget

Ad Widget

Ad Widget

 ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದಿದ್ದ ಸರಗಳ್ಳತನ, ಸುಲಿಗೆ, ದ್ವಿಚಕ್ರಗಳ ಕಳವು, ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಸೇರಿದಂತೆ 24 ಪ್ರಕರಣಗಳ ಸಲುವಾಗಿ ಬೇಕಾಗಿದ್ದ ಈ ಗ್ಯಾಂಗಿನ ಸದಸ್ಯರ ಪತ್ತೆ ಹಚ್ಚಲು  60 ಪೊಲೀಸರ ತಂಡ  ಹಗಳಿರುಳು ಶ್ರಮಿಸಿದೆ. ಆರೋಪಿಗಳನ್ನು ಸೆರೆಹಿಡಿದ ಪೊಲೀಸ್ ತಂಡಕ್ಕೆ ಪೊಲೀಸ್ ಕಮಿಷನರ್ 25 ಸಾವಿರ ರೂ. ಬಹುಮಾನ ನೀಡಿ ಶ್ಲಾಘಿಸಿದ್ದಾರೆ. ಮಹಿಳೆಯರು ಒಬ್ಬಂಟಿಯಾಗಿ ನಿರ್ಜನ ಪ್ರದೇಶಗಳಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಸರ ಸೇರಿದಂತೆ ಆಭರಣಗಳನ್ನು ಈ ತಂಡ ದರೋಡೆ ಮಾಡುತಿತ್ತು.  

Ad Widget

Ad Widget

Ad Widget

Ad Widget

ಮಂಗಳೂರು ನಗರ ವ್ಯಾಪ್ತಿಯ   ಕಾವೂರು ನಿವಾಸಿಗಳಾದ ಅಬ್ದುಲ್ ಇಶಾಮ್(26), ಮೊಹಮ್ಮದ್ ತೌಸೀಫ್(30), ಪಂಜಿಮೊಗರು ನಿವಾಸಿ ಸಫ್ವಾನ್(29), ಶಾಂತಿನಗರ ನಿವಾಸಿ ಅಬ್ದುಲ್ ಖಾದರ್ ಸಿನಾನ್(30), ಮಲ್ಲೂರು ನಿವಾಸಿ ಮೊಹಮ್ಮದ್ ಫಜಲ್(32), ಚೊಕ್ಕಬೆಟ್ಟು ನಿವಾಸಿ ಅರ್ಷಾದ್(34), ಉಡುಪಿ‌ಜಿಲ್ಲೆಯ ಕುಂದಾಪುರ ತಾಲೂಕಿನ ಕುಂಭಾಶಿ‌ ನಿವಾಸಿ ಮುಜಾಹಿದುರ್ ರೆಹಮಾನ್(23) ಬಂಧಿತ ಆರೋಪಿಗಳು.

ವಶಪಡಿಸಿಕೊಂಡ ಸೊತ್ತುಗಳು

ಆರೋಪಿಗಳಿಂದ  ರಸ್ತೆಯಲ್ಲಿ ಸಂಚರಿಸುತ್ತಿದ್ದ ಮಹಿಳೆಯರಿಂದ ಎಳೆದೊಯ್ದ ಸುಮಾರು 10 ಲಕ್ಷ ರೂ. ಮೌಲ್ಯದ 210 ಗ್ರಾಂ ತೂಕದ ಚಿನ್ನದ ಸರ, ಕರಿಮಣಿ ಸರ ಹಾಗೂ 3 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 15 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

Ad Widget

Ad Widget

ವಿವಿಧ ಠಾಣೆಗಳಲ್ಲಿ 24 ಪ್ರಕರಣ

ಆರೋಪಿಗಳ ವಿರುದ್ಧ ಬಜಪೆ ಪೊಲೀಸ್ ಠಾಣೆ, ಬಂದರು ಠಾಣೆ, ಬರ್ಕೆ ಠಾಣೆ, ಕಾವೂರು ಠಾಣೆ, ಉರ್ವ ಠಾಣೆ, ಮಂಗಳೂರು ಪೂರ್ವ ಠಾಣೆ, ಕಂಕನಾಡಿ ನಗರ ಠಾಣೆ, ಉಳ್ಳಾಲ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ. ಅಲ್ಲದೆ ನಗರದ ಶಕ್ತಿನಗರ ದತ್ತ ನಗರದಲ್ಲಿ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿ ವಾಹನ ನಿಲ್ಲಿಸದೆ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದು ಪೊಲೀಸ್ ಹೆಡ್ ಕಾನ್‌ಸ್ಟೇಬಲ್‌ಗೆ ತಾಗಿಸಿಕೊಂಡ ಹೋಗಿರುವುದು ಸೇರಿ 24 ಪ್ರಕರಣಗಳು ದಾಖಲಾಗಿವೆ.

ಇಬ್ಬರು ಆರೋಪಿಗಳು ವಿದೇಶದಲ್ಲಿ

ಪ್ರಕರಣದಲ್ಲಿ ಇನ್ನೂ ಇಬ್ಬರು ಆರೋಪಿಗಳನ್ನು ಬಂಧಿಸಬೇಕಾಗಿದ್ದು, ಅವರಿಬ್ಬರೂ ಕತಾರ್ ಹಾಗೂ ಸೌದಿ ಅರೇಬಿಯಾದಲ್ಲಿದ್ದಾರೆ‌ ಎಂಬ ಮಾಹಿತಿಯಿದೆ. ಅಲ್ಲದೆ ಪ್ರಕರಣದಲ್ಲಿ ಕಳವುಗೈದ ಆಭರಣಗಳನ್ನು ಆರೋಪಿಗಳು ಬಂಟ್ವಾಳದ  ಜ್ಯುವೆಲ್ಲರಿ ಮಳಿಗೆಯೊಂದಕ್ಕೆ  ಮಾರಿರುವುದಾಗಿ  ಆರೋಪಿಗಳು ಬಾಯ್ಬಿಟ್ಟಿದ್ದಾರೆ.

ಕದ್ದ ಮಾಲು ಎಂದು ತಿಳಿದೇ ಖರಿದೀಸಿದ್ದರು…!

ಈ ಜ್ಯುವೆಲ್ಲರಿ ಮಳಿಗೆಯವರಿಗೂ ಕಳವುಗೈದ ಮಾಲು ಎಂಬ ಮಾಹಿತಿಯಿದ್ದೇ ಅವರ ಒಡವೆಗಳನ್ನು ಪಡೆಯುತ್ತಿದ್ದರು. ಆದ್ದರಿಂದ ಅವರ ಮೇಲೆಯೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಇದೊಂದು ಜಾಲವಾಗಿದ್ದು, ಎಲ್ಲರೂ ಇದರಲ್ಲಿ ನೇರವಾಗಿ ಭಾಗಿಯಾಗಿದ್ದಾರೆ.

ಕೃತ್ಯ ನಡೆಸುತಿದ್ದದ್ದು ಹೀಗೆ …!   ಆರೋಪಿಗಳು ಸರಗಳವು ಮಾಡಲು ಸ್ವಂತ ವಾಹನಗಳನ್ನು ಬಳಸತ್ತಿರಲಿಲ್ಲ. ಬದಲಾಗಿ ನಗರದ ಕುಂಟಿಕಾನ ಹಾಗೂ ಕೊಟ್ಟಾರ ಚೌಕಿಯಲ್ಲಿ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನಗಳನ್ನು ಕಳವುಗೈದು ಅದನ್ನೇ ದುಷ್ಕೃತ್ಯ ಎಸಗಲು ಬಳಸುತ್ತಿದ್ದರು.ಅದಕ್ಕಾಗಿ ಕೀ ಇಲ್ಲದೆ ಡೈರೆಕ್ಟ್ ಮಾಡಿ ವಾಹನವನ್ನು ಸ್ಟಾರ್ಟ್ ಮಾಡಲು‌ ಮೆಕ್ಯಾನಿಕ್  ಓರ್ವನಿಂದ ತರಬೇತಿಯನ್ನು ಪಡೆದಿದ್ದರು. ಅಲ್ಲದೆ ಸಿಸಿ ಕ್ಯಾಮೆರಾಗಳು ಇಲ್ಲದ ಪ್ರದೇಶಗಳನ್ನು ಗುರುತಿಸಿಯೇ ಕಳುವು ಕೃತ್ಯವನ್ನು ನಡೆಸು

Ad Widget

Leave a Reply

Recent Posts

ಯುವಕರಿಗೆ ಉದ್ಯೋಗ ಸೃಷಿಸಿಲು ಇಂಡಸ್ಟ್ರೀಯಲ್ ಏರಿಯಾಕ್ಕೆ 100 ಎಕ್ರೆ ಜಾಗ ಗುರುತಿಸಲಾಗಿದೆ : ಮಠಂದೂರು | ಮುಂದಿನ ಬಾರಿ ತ್ರಿಬಲ್‌ ಇಂಜಿನ್‌ ಸರಕಾರ ಕೆಲಸ ಮಾಡಬೇಕು : ಡಾ| ಎಂ.ಕೆ .ಪ್ರಸಾದ್‌ | ವಾಹನ ಜಾಥ ನೋಡಿ ಕಾಂಗ್ರೆಸ್ಸಿಗರಿಗೆ ನಡುಕ ಹುಟ್ಟಿದೆ : ಸಹಜ್‌ ರೈ

error: Content is protected !!
%d bloggers like this: