ಸ್ವರ್ಣೋದ್ಯಮದಲ್ಲಿ 64 ವರ್ಷಗಳಿಂದ ಜನಮನ ಗೆದ್ದು, ಚಿನ್ನಾಭರಣ ಪ್ರಿಯರ ಮನೆಮಾತಾಗಿ ಕರಾವಳಿ, ಮಲೆನಾಡುಗಳಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಇದೀಗ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅಭೂತಪೂರ್ವ ಸಂಗ್ರಹಗಳೊಂದಿಗೆ ಗ್ರಾಹಕರ ಅಭಿರುಚಿ ತಣಿಸಲು ‘ಲಕ್ಕಿ ಲಕ್ಷ್ಮೀ’ ಕೊಡುಗೆ ಏರ್ಪಡಿಸಿದ್ದಾರೆ.
ನವೆಂಬರ್ 1ರಿಂದ 9ರ ತನಕ ಪುತ್ತೂರು, ಸುಳ್ಯ, ಹಾಸನ ಮತ್ತು ಕುಶಾಲನಗರ ಮಳಿಗೆಗಳಲ್ಲಿ ‘ಲಕ್ಕಿ ಲಕ್ಷ್ಮೀ’ ಕೊಡುಗೆಗಳು ಈ ಸಂಭ್ರಮವನ್ನು ಇಮ್ಮಡಿಗೊಳಿಸಲಿವೆ.
‘ಲಕ್ಕಿ ಲಕ್ಷ್ಮೀ ’ ಕೊಡುಗೆಯಾಗಿ ಚಿನ್ನಾಭರಣ ಖರೀದಿಗೆ ಪ್ರತಿ ಗ್ರಾಂ ಗೆ ರೂ. 75 ರಿಂದ ರೂ. 125/- ರ ವರೆಗೆ ರಿಯಾಯಿತಿಯನ್ನು ಲಕ್ಕಿ ಕೂಪನ್ ಮೂಲಕ ಗ್ರಾಹಕರೇ ಆಯ್ಕೆ ಮಾಡುವ ಅವಕಾಶ, ವಜ್ರಾಭರಣ ಖರೀದಿಗೆ ಪ್ರತೀ ಕ್ಯಾರೇಟ್‌ಗೆ ರೂ. 5000/- ನೇರ ರಿಯಾಯಿತಿ ಮಾತ್ರವಲ್ಲದೆ 15 ಚಿನ್ನದ ನಾಣ್ಯಗಳನ್ನು ಗೆಲ್ಲುವ ಅವಕಾಶವಿದೆ.

ವಿಶಾಲವಾದ ವಿಶಿಷ್ಟ ಮಳಿಗೆ:
ಪುತ್ತೂರು ಮುಖ್ಯ ರಸ್ತೆಯಲ್ಲಿ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಕಳೆದ 9 ತಿಂಗಳಿಂದ ಹೊಸ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. 3 ಮಹಡಿಗಳ ಈ ಸುಂದರ ಕಟ್ಟಡದಲ್ಲಿ 9000 ಚದರ ಮೀಟರ್ ಸ್ಥಳಾವಕಾಶವನ್ನು ಆಭರಣ ಮಾರಾಟ, ಪ್ರದರ್ಶನಕ್ಕಾಗಿ ಮೀಸಲಿಡಲಾಗಿದೆ. ವಿಶಾಲ ಪಾರ್ಕಿಂಗ್, ಲಿಫ್ಟ್ ವ್ಯವಸ್ಥೆಯ ಜತೆಗೆ ಸಂಪೂರ್ಣ ಹವಾನಿಯಂತ್ರಿತ ಮಳಿಗೆ ಇದಾಗಿದೆ.
ಗ್ರಾಹಕರಿಗೆ ಆಹ್ಲಾದಕರ ವಾತಾವರಣ ಇಲ್ಲಿದ್ದು, ಪ್ರತೀ ವಯಸ್ಸಿನ, ಪ್ರತೀ ಅಭಿರುಚಿಯ ಗ್ರಾಹಕರಿಗೂ ಒಪ್ಪುವ ಸಂಗ್ರಹಗಳು ಇಲ್ಲಿದೆ. ‘ಪ್ರತೀ ಪೀಳಿಗೆಯ ಚಿನ್ನದ ಮಳಿಗೆ’ ಎಂಬ ಜಿ.ಎಲ್.ನ ಘೋಷ ವಾಕ್ಯ ಇಲ್ಲಿ ಪರಿಪೂರ್ಣ ಸಾರ್ಥಕತೆ ಪಡೆದಿದೆ.

750 ಕ್ಕೂ ಮಿಕ್ಕಿದ ಹೊಸ ಹೊಸ ಬಗೆಯ ವಿನ್ಯಾಸದ ನೆಕ್ಲೆಸ್‌ಗಳು, ಪ್ರಾಚಿ ಎಂಬ ಹೆಸರಿನ ಆ್ಯಂಟಿಕ್ ಆಭರಣಗಳು, ಮಕ್ಕಳ, ಮಹಿಳೆಯರ, ಹಾಗೂ ಪುರುಷರ ನಾನಾ ಅಭಿರುಚಿಗೆ ಒಪ್ಪುವ ಆಭರಣಗಳ ಮಹಾಪೂರ ಇಲ್ಲಿದೆ. ಮಕ್ಕಳಿಗಾಗಿ ಪ್ರತ್ಯೇಕ ಚೈಲ್ಡ್ ಕೇರ್ ರೂಂ ವ್ಯವಸ್ಥೆ ಮಾಡಲಾಗಿದೆ.
ಡಿಜಿಟಲ್ ವ್ಯವಹಾರಕ್ಕೆ ಪ್ರೋತ್ಸಾಹ:
ವ್ಯವಹಾರದಲ್ಲಿ ಸಂಪೂರ್ಣ ಪಾರದರ್ಶಕತೆ ಹೊಂದಿರುವ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್, ಪ್ರತೀ ಆಭರಣಗಳ ಜೊತೆಗೆ ನೀಡುವ ದರಪಟ್ಟಿಯಲ್ಲಿ ಆಭರಣದ ತೂಕ, ಕಲ್ಲಿನ ತೂಕ, ಮಜೂರಿ, ತೇಮನ್ ಇತ್ಯಾದಿ ವಿವರಗಳನ್ನು ಪ್ರತ್ಯೇಕವಾಗಿ ತೋರಿಸುತ್ತದೆ. ಚಿನ್ನದ ಪರಿಶುದ್ಧತೆ ಪರೀಕ್ಷಿಸುವ ಎಕ್ಸ್ಆರ್‌ಎಫ್-ಸ್ಪಕ್ಟೋ ಮೀಟರ್ ಇಲ್ಲಿದೆ.
ಪುತ್ತೂರು ಹಾಗೂ ಹಾಸನ ಮಳಿಗೆಗಳು ಭಾನುವಾರವೂ ತೆರೆದಿರುತ್ತದೆ. ಸಂಸ್ಥೆಯಲ್ಲಿ ಡಿಜಿಟಲ್ ವ್ಯವಹಾರಕ್ಕೆ ಪ್ರೋತ್ಸಾಹ ನೀಡಲಾಗುತ್ತಿದ್ದು, ಕ್ಯಾಶ್‌ಲೆಸ್ ವ್ಯವಹಾರ ಸುಲಲಿತವಾಗಿ ಮಾಡಬಹುದು.
ಅದ್ಭುತ ಡೈಮಂಡ್ ಕಲೆಕ್ಷನ್:
ರೂ. 3ಸಾವಿರದಿಂದ ರೂ. 15 ಲಕ್ಷದವರೆಗಿನ ಡೈಮಂಡ್ (ವಜ್ರ) ಸೆಟ್‌ಗಳ ಮಹಾ ಸಂಗ್ರಹವೇ ಇಲ್ಲಿದ್ದು, ರಾಜ್ಯದ Exclusive ವಜ್ರಾಭರಣ ಸಂಗ್ರಹದ ಕೆಲವೇ ಮಳಿಗೆಗಳಲ್ಲಿ ಇದೂ ಒಂದಾಗಿದೆ. ಅಂತಾರಾಷ್ಟ್ರೀಯ ಲ್ಯಾಬ್ ನೀಡುವ ಸರ್ಟಿಫಿಕೇಟ್ ಹೊಂದಿರುವ ಡೈಮಂಡ್ ಸಂಗ್ರಹ ಜಿ.ಎಲ್. ನಲ್ಲಿದೆ. ಸಂಸ್ಥೆಯ ಮುಖ್ಯಸ್ಥರಾದ ಬಲರಾಮ ಆಚಾರ್ಯ ಅವರ ನೇತೃತ್ವದಲ್ಲಿ ಸಂಸ್ಥೆ ಮುನ್ನಡೆಯುತ್ತಿದ್ದು, ಲಕ್ಷ್ಮಿಕಾಂತ್ ಆಚಾರ್ಯ ಮತ್ತು ಸುಧನ್ವ ಆಚಾರ್ಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಆರೂವರೆ ದಶಕಗಳ ಹಾದಿ..:
ಪುತ್ತೂರಿನ ಕೋರ್ಟ್ ರಸ್ತೆಯಲ್ಲಿ ಜಿ.ಎಲ್. ಆಚಾರ್ಯ ಅವರು 1957ರಲ್ಲಿ 100 ಚ.ಅಡಿ ವಿಸ್ತೀರ್ಣದ ಅಂಗಡಿಯಲ್ಲಿ ಆರಂಭಿಸಿದ ಚಿನ್ನಾಭರಣ ಮಳಿಗೆ ಇಂದು ಕರಾವಳಿ, ಮಲೆನಾಡಿನ ಗ್ರಾಹಕರ ಮನೆಮಾತಾಗಿದೆ.
ಗುಣಮಟ್ಟ, ನಗುಮುಖದ ಸೇವೆ ಹಾಗೂ ವಿಶ್ವಾಸಾರ್ಹ ವ್ಯವಹಾರದ ಮೂಲಕ ಜನಮನ ಗೆದ್ದ ಸಂಸ್ಥೆ ಕ್ರಮೇಣ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಎಂಬ ಬ್ರಾಂಡ್ ಸಂಪಾದಿಸಿತು. 1988ರಲ್ಲಿ ಪುತ್ತೂರಿನ ಮುಖ್ಯ ರಸ್ತೆಯ ಸ್ವಂತ ಕಟ್ಟಡಕ್ಕೆ ಸಂಸ್ಥೆ ಸ್ಥಳಾಂತರಗೊಂಡು ಈ ಭಾಗದ ಪ್ರಥಮ ಹವಾನಿಯಂತ್ರಿತ ಶೋರೂಂ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ಹಲವು ಜಿಲ್ಲೆಗಳ ಗ್ರಾಹಕರು:
ಸಂಸ್ಥೆಯ ಎಲ್ಲಾ ಮಳಿಗೆಗಳಲ್ಲಿ ಮಾಸಿಕ ಉಳಿತಾಯದ ಸುಲಭ ಕಂತುಗಳ ಸ್ವರ್ಣನಿಧಿ ಯೋಜನೆ ಜಾರಿಯಲ್ಲಿದೆ. ಇಲ್ಲಿನ ಸಿಬ್ಬಂದಿಗಳಿಗೆ ಕೋವಿಡ್ ಲಸಿಕೆ 2 ಡೋಸ್ ಕೂಡ ನೀಡಲಾಗಿದ್ದು, ಗ್ರಾಹಕರ ಸುರಕ್ಷತೆಗೆ ಗಮನ ನೀಡಲಾಗಿದೆ. ದ.ಕ., ಉಡುಪಿ, ಕಾಸರಗೋಡು, ಕೊಡಗು, ಹಾಸನ, ಮೈಸೂರು ಮತ್ತು ಬೆಂಗಳೂರು ಭಾಗದಿಂದಲೂ ಚಿನ್ನಾಭರಣ ಪ್ರಿಯರು ಜಿ.ಎಲ್.ಗೆ ಬರುತ್ತಿದ್ದು, ಸಂಸ್ಥೆಯ ಮೇಲಿನ ವಿಶ್ವಾಸವೇ ಇದಕ್ಕೆ ಕಾರಣ ಎನ್ನುತ್ತಾರೆ ಆಡಳಿತ ನಿರ್ದೇಶಕರು.