ಪುತ್ತೂರು: ಕರ್ನಾಟಕ ರಾಜ್ಯ ವೈಟ್ ಲಿಪ್ಟರ್ಸ್ ಅಸೋಸಿಯೇಷನ್, ದಾವಣಗೆರೆ ಜಿಲ್ಲಾ ವೈಟ್ ಲಿಪ್ಟರ್ಸ್ ಅಸೋಸಿಯೇಷನ್ ಹಾಗೂ ದಾವಣಗೆರೆ ಮಹಾನಗರ ಪಾಲಿಕೆ ಇವರ ಸಂಯುಕ್ತ ಆಶ್ರಯದಲ್ಲಿ
ದಾವಣಗೆರೆಯಲ್ಲಿ ನಡೆದ ರಾಜ್ಯ ಮಟ್ಟದ ವೈಟ್ ಲಿಪ್ಟಿಂಗ್ ನ 45 ಕೆಜಿ ಜೂನಿಯರ್ ವಿಭಾಗದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಪುತ್ತೂರಿನ ಸಂತ ಫಿಲೋಮಿನಾ ವಿದ್ಯಾರ್ಥಿನಿ ಕಾಣಿಯೂರಿನ ಹರ್ಷಿತಾ ಎಲುವೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಪುತ್ತೂರು ಸಂತ ಫಿಲೋಮಿನ ಕಾಲೇಜನ್ನು ಪ್ರತಿನಿಧಿಸಿದ ಇವರು 69 ಕೆಜಿ ಭಾರ ಎತ್ತಿ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ.
ರಾಜ್ಯಮಟ್ಟದ ವೈಟ್ ಲಿಫ್ಟಿಂಗ್ ನಲ್ಲಿ ಪುತ್ತೂರಿನ ಫಿಲೋಮಿನಾ ವಿದ್ಯಾರ್ಥಿನಿ ಹರ್ಷಿತಾ ಎಲುವೆ ಪ್ರಥಮ ಸ್ಥಾನ ಪಡೆದ ದೃಶ್ಯ
ಕಾಣಿಯೂರು ಗ್ರಾಮದ ಎಲುವೆ ಬೆಳಿಯಪ್ಪ ಗೌಡ ಮತ್ತು ಚೇತನಾ ರವರ ಪುತ್ರಿಯಾಗಿರುವ ಇವರು ಪಿಲೋಮಿನಾ ಕಾಲೇಜಲ್ಲಿ ಪದವಿ ವ್ಯಾಸಂಗ ಮಾಡುತಿದ್ದಾರೆ.
ಹರ್ಷಿತಾ ಅವರು ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಹೈಸ್ಕೂಲ್, ಸ.ಹಿ.ಪ್ರಾಥಮಿಕ ಶಾಲೆ ಕಾಣಿಯೂರು ಇಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದಿರುತ್ತಾರೆ.
25 ವರ್ಷ ದಾಟಿದ ಯುವಕ/ಯುವತಿಯರು ತಮ್ಮ ಆರೋಗ್ಯಕ್ಕಾಗಿ ಅನುಸರಿಸಬೇಕಾದ ಅಗತ್ಯ ಕ್ರಮಗಳು ಹಾಗೂ ಹೃದಯಾಘಾತದ ಬಗ್ಗೆ ಪುತ್ತೂರಿನ ಖ್ಯಾತ ಹೃದ್ರೋಗ ತಜ್ಞ ಡಾ. ಶ್ರೀಪತಿ ರಾವ್ ರವರಿಂದ ಯುವಜನತೆಗೆ ಅತ್ಯುಪಯುಕ್ತ ಮಾಹಿತಿ