ಮಂಗಳೂರು, ಅ. 31: ಮಂಗಳೂರಿನ ಬಳ್ಳಾಲ್ ಭಾಗ್ ಬಳಿ ಶನಿವಾರ ರಾತ್ರಿ ಎರಡು ತಂಡಗಳ ನಡುವೆ ಮಾರಕಾಯುಧಗಳಿಂದ ಹೊಡೆದಾಟ ನಡೆದಿದ್ದು ಘಟನೆಗೆ ಸಂಬಂಧಿಸಿದಂತೆ ಒಟ್ಟು 15 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಇತ್ತಂಡಗಳ ನಡುವೆ ಈ ಹಿಂದೆ ನಡೆದ ಹೊಡೆದಾಟದ ಪ್ರಕರಣದಲ್ಲಿ ಆರೋಪಿಯೊಬ್ನ ಖುಲಾಸೆಗೊಂಡ ಖುಷಿಯಲ್ಲಿ ತಂಡವೊಂದರ ಸದಸ್ಯರ ಮಧ್ಯೆ ನಡೆಯುತಿದ್ದ ಸಂತೋಷಕೂಟದ ವೇಳೆ ಮತ್ತೂಂದು ತಂಡ ಆಗಮಿಸಿ ಮತ್ತೆ ಹೊಡೆದಾಟ ನಡೆದಿತ್ತು. ಎರಡು ಗ್ಯಾಂಗ್ ಗಳ ನಡುವಿನ ಬಡಿದಾಟ ಅಕ್ಷರಶ: ಸಿನಿಮೀಯ ಶೈಲಿಯಲ್ಲಿ ನಡೆದಿತ್ತು.
ಶನಿವಾರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ನಡೆದ ಈ ಗ್ಯಾಂಗ್ ವಾರ್ ನಲ್ಲಿ ಒರ್ವನಿಗೆ ಚೂರಿ ಇರಿತ , ವಾಹನಗಳಿಗೆ ಹಾನಿ ಹಾಗೂ ಮಹಿಳಾ ಪೊಲೀಸ್ ಅಧಿಕಾರಿಗೆ ಹಲ್ಲೆ ನಡೆಸಿದ ಘಟನೆಯೂ ನಡೆದಿದೆ.
ಹೊಡೆದಾಟದ ವೇಳೆ ವಿಕೆಟ್, ಪೈಪ್, ಕಲ್ಲುಗಳಿಂದ ಪರಸ್ಪರ ಹಲ್ಲೆ ಮಾಡಿದ್ದಾರೆ. ಈ ಸಂದರ್ಭ ಒಂದು ಕಾರು ಮತ್ತು 6 ದ್ವಿಚಕ್ರ ವಾಹನ ಜಖಂಗೊಂಡಿವೆ. ಘಟನೆಗೆ ಸಂಬಂಧಿಸಿ ಬರ್ಕೆ ಠಾಣೆ ಪೊಲೀಸರು 15 ಮಂದಿಯನ್ನು ಬಂಧಿಸಿ 5ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಧೀರಜ್ ಶೆಟ್ಟಿ, ರಕ್ಷಿತ್ ಕೆ., ರೋಹಿತ್ ಶೆಟ್ಟಿ ಹರ್ಷಿತ್, ಕೀರ್ತಿರಾಜ್, ವಿವೇಕ್ ಮತ್ತು ರಾಹುಲ್, ಅಫಾರ್, ತಿಲಕ್ ರಾಜ್, ಜಲೀಲ್, ನಿತಿನ್ ಶೆಟ್ಟಿ ನವಾಲ್, ನಿನಾನ್, ಬಂಧಿತರು. ಇನ್ನಿಬ್ಬರು ಆರೋಪಿಗಳ ಹೆಸರು ತಿಳಿದು ಬರಬೇಕಷ್ಟೆ . ಆರೋಪಿಗಳಿಗೆ ನ್ಯಾಯಾಲಯವು ನ. 10ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಹಳೇ ಪ್ರಕರಣದ ದ್ವೇಷ
ಹಳೇ . ದ್ವೇಷದ ಹಿನ್ನೆಲೆಯಲ್ಲಿ ಮಾರಾಮಾರಿ ನಡೆದಿದೆ ಎನ್ನಲಾಗಿದೆ. ಹೊಡೆದಾಡಿಕೊಂಡಿರುವ ತಂಡಗಳು ಈ ಹಿಂದೆ ಒಂದೇ ಆಗಿದ್ದವು. 2017ರಲ್ಲಿ ನಡೆದಿದ್ದ ಧಾರ್ಮಿಕ ಕಾರ್ಯಕ್ರಮ ವೊಂದರ ಸಂದರ್ಭ ಭಿನ್ನಾಭಿಪ್ರಾಯ ಉಂಟಾಗಿ ಎರಡು ಗುಂಪುಗಳಾಗಿ ಹೊಡೆದಾಡಿಕೊಂಡಿದ್ದರು.
ಈ ಸಂದರ್ಭ ಹಲವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಆ ಪ್ರಕರಣದಲ್ಲಿ ಓರ್ವನನ್ನು ನ್ಯಾಯಾಲಯ ಇತ್ತೀಚೆಗೆ ಪ್ರಕರಣದಿಂದ ಖುಲಾಸೆಗೊಳಿಸಿ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಆ ಗುಂಪಿನವರು, ಶನಿವಾರ ರಾತ್ರಿ ವಿಜಯೋತ್ಸವ ಪಾರ್ಟಿ ಆಯೋಜಿ ಸಿದ್ದರು. ಇದನ್ನು ತಡೆಯಲು ಇನ್ನೊಂದು ಗುಂಪು ಮುಂದಾಗಿತ್ತು. ಇದರಿಂದ ಘರ್ಷಣೆ ಸಂಭವಿಸಿ ಹೊಡೆದಾಟವಾಗಿದೆ ಎಂದು ಘಟನ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ಅನಂತರ ಪೊಲೀಸ್ ಆಯುಕ್ತ ಎನ್, ಶಶಿಕುಮಾರ್ ತಿಳಿಸಿದ್ದಾರೆ.
ಪೊಲೀಸರಿಗೂ ಹಲ್ಲೆ
ಘಟನೆ ನಡೆದ 5 ನಿಮಿಷದಲ್ಲೇ ಪೊಲೀಸರು ಸ್ಥಳಕ್ಕೆ ತೆರಳಿದ್ದರು. ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದ ಬರ್ಕೆ 2 ಪಿಎಸ್‌ಐ ಠಾಣೆಯ ಅವರು ಪೊಲೀಸ್ ಶೋಭಾ ಸಿಬಂದಿ ಯೊಂದಿಗೆ ಘಟನಾ ಸ್ಥಳಕ್ಕೆ ತೆರಳಿ ಗಲಾಟೆಯಲ್ಲಿ ತೊಡಗಿದ್ದವರನ್ನು ಸಮಾಧಾನಪಡಿಸಿ ಪರಿಸ್ಥಿತಿ ನಿಯಂತ್ರಿ ಸಲು ಮುಂದಾದರು. ಆ ಸಂದರ್ಭ ಅವರನ್ನು ತಳ್ಳಿ ಅವರ ವಾಕಿಟಾಕಿ ಯನ್ನು ಕಿತ್ತು ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿರುವ ಘಟನೆಯೂ ನಡೆದಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಸ್ವಯಂಪ್ರೇರಿತ ಪ್ರಕರಣ
ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಬಗ್ಗೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ಅಲ್ಲಿ ಸೇರಿದ್ದವರು ಪರಸ್ಪರ ಹಲ್ಲೆ ಮಾಡಿದ್ದಾರೆ.
ವಾಹನಗಳಿಗೆ ಹಾನಿಯಾದ ಬಗ್ಗೆ ಸಾರ್ವಜನಿಕರು ಪ್ರತ್ಯೇಕವಾಗಿ ದೂರು ನೀಡಿದರೆ ಆ ಬಗ್ಗೆಯೂ ಕ್ರಮ, ಕೈಗೊಳ್ಳಲಾಗುವುದು.ಹೊಡೆದಾಟದಲ್ಲಿ ಪಾಲ್ಗೊಂಡವರ ವಿರುದ್ಧ ರೌಡಿಶೀಟ್, ತೆರೆಯುವುದು ಸೇರಿದಂತೆ ಕಠಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.