ಬೆಂಗಳೂರು: ನ 1 : ವಾರ್ಷಿಕವಾಗಿ ಕೇಂದ್ರ ಗೃಹ ಸಚಿವಾಲಯದಿಂದ ವಿಶೇಷ ತನಿಖಾ ಕಾರ್ಯಾಚರಣೆಗೆ ಕೊಡ ಮಾಡುವ ಗೃಹಮಂತ್ರಿ ಪ್ರಶಸ್ತಿಗೆ ಮಂಗಳೂರಿನ ಸಿಸಿಬಿ ಪೊಲೀಸ್ ಇನ್ ಸ್ಪೆಕ್ಟರ್ ಮಹೇಶ್ ಪ್ರಸಾದ್ ಸಹಿತ ರಾಜ್ಯದ ಒಟ್ಟು 11 ಮಂದಿ ಪೊಲೀಸರು ಭಾಜನರಾಗಿದ್ದಾರೆ.
ಉಗ್ರರ ವಿರುದ್ದ ಕಾರ್ಯಾಚರಣೆ ಗಾಗಿ ಈ ಪ್ರಶಸ್ತಿ ಕೂಡಮಾಡಲಾಗುತಿದ್ದು, ಕೆಲವು ತಿಂಗಳುಗಳ ಹಿಂದೆ ಮಂಗಳೂರಿನಲ್ಲಿ ಉಗ್ರ ಚಟುವಟಿಕೆಯಲ್ಲಿ ನಿರತ ಶಂಕೆಯಲ್ಲಿ ಯುವಕನೊಬ್ಬನ ವಿರುದ್ದ ನಡೆದ ಕಾರ್ಯಚರಣೆಯ ಭಾಗವಾಗಿ ಈ ಪುರಸ್ಕರ ಲಭಿಸಿದೆ.
ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ದೇಶದ ಒಟ್ಟು 260 ಪೊಲೀಸರಿಗೆ ಈ ಪ್ರಶಸ್ತಿ ಲಭಿಸಿದೆ. ಅ. 31 ರಂದು ಕೇಂದ್ರ ಗೃಹ ಸಚಿವಾಲಯಯೂ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ ಮಾಡಿದೆ.
ಕರ್ನಾಟಕ ರಾಜ್ಯದಿಂದ
ಪದಕ ಪಡೆದವರು :
ಬೆಂಗಳೂರು ನಗರ ಗುಪ್ತಚರ ವಿಭಾಗ ಹಾಗು ಭಯೋತ್ಪಾದನಾ ನಿಗ್ರಹ ದಳದ ಡಿಸಿಪಿ ಐಪಿಎಸ್ ಅಧಿಕಾರಿ ಸಂತೋಷ್ ಬಾಬು,
ಎಟಿಸಿ ವಿಭಾಗದ ಫಕ್ರುದ್ದೀನ್ ಕುಂದಿ
ಇನ್ಸ್ಪೆಕ್ಟರ್ ಗಳಾದ ಜಿ.ಬಾಲರಾಜು,
ಶಿವಕುಮಾರ್, ಸುದರ್ಶನ್ ಮಹೇಶ್ ಪ್ರಸಾದ್, ಎಸ್.ಆರ್.ಶ್ರೀದರ್,
ಎಎಸ್ಐ ಶೌಕತ್ ಆಲಿ,
ಹೆಡ್ ಕಾನ್ಸ್ಟೇಬಲ್ ಗಳಾದ, ಪಿ.ಸೋಮಶೇಖರ್ , ಕೃಷ್ಣ ದೇವಿಗೌಡ ಹಾಗೂ ಅಕ್ಬರ್ ಯದ್ರಾಮಿ
ಕಳೆದ ತಿಂಗಳು ಬೆಂಗಳೂರಿನ ಹೂಡಿ ನಿವಾಸಿ ಶಂಕಿತ ಉಗ್ರ ವೆಂಕಟೇಶ್ ಪೆರುಮಾಳ್ ಎಂಬಾತನನ್ನು ಎನ್ಐಎದೊಂದಿಗೆ ಎಟಿಸಿ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿತ್ತು. ಈತ ಐಸಿಸ್ ಸಂಘಟನೆ ಮುಖಂಡ ಕೇರಳ ಮೂಲದ ಮೊಹಮ್ಮದ್ ಅಮಿನ್ ಅಲಿಯಾಸ್ ಅಬು ಯಹಾಯ್ ಮತ್ತು ಆತನ ಸಹಚರರ ಜತೆ ನಿರಂತರ ಸಂಪರ್ಕದಲ್ಲಿದ್ದ. ಅಲ್ಲದೇ ಅವರ ಆನ್‌ಲೈನ್ ಚಾನಲ್ಗಳು ಮತ್ತು ವಿವಿಧ ಗ್ರೂಪ್‌ಗಳಲ್ಲಿ ನಿರಂತರ ಚಾಟ್ ಮಾಡುತ್ತಿದ್ದ. ಈ ಮೂಲಕ ರಾಜ್ಯದಲ್ಲಿ ಐಸಿಸ್ ಸಂಘಟನೆಗೆ ಹಣ ಸಂಗ್ರಹಿಸುತ್ತಿದ್ದ ಎಂಬುದಾಗಿ ಬಗ್ಗೆ ಪತ್ತೆ ಹಚ್ಚಿತ್ತು.
ಆರೋಪಿಯ ಸಹಚರರು ಜಿಹಾದ್ ಮತ್ತು ವಿಧ್ವಂಸಕ ಚಟುವಟಿಕೆ ನಡೆಸುವ ಉದ್ದೇಶದಿಂದ ನಿರ್ದಿಷ್ಟ ಧರ್ಮದ ಯುವಕರನ್ನು ಉಗ್ರ ಸಂಘಟನೆಗೆ ನೇಮಕ ಮಾಡುತ್ತಿದ್ದರು. ಅಲ್ಲದೇ ಕಾಶ್ಮೀರ, ಕೇರಳ ಹಾಗು ಕರ್ನಾಟಕದ ಕೆಲವು ಭಾಗಗಳಲ್ಲಿ ಜಾಲವನ್ನು ವಿಸ್ತರಿಸುವಲ್ಲಿ ಯಶಸ್ವಿಯಾಗಿದ್ದರು ಎನ್ನಲಾಗ್ತಿದೆ.
ಇದರ ಭಾಗವಾಗಿ ಮಂಗಳೂರಿನ ಉಳ್ಳಾಲದಲ್ಲೂ ಪ್ರತಿಷ್ಟಿತ ಕುಟುಂವೊಂದರ ಮನೆಯಲ್ಲೂ ಕಾರ್ಯಾಚರಣೆ ನಡೆದಿತ್ತು.
ಮಹೇಶ್ ಪ್ರಸಾದ್ ಪರಿಚಯ:

ಮಹೇಶ್ ಪ್ರಸಾದ್ ರವರು ಉಡುಪಿ ಜಿಲ್ಲೆ ಚೇರ್ಕಾಡಿ ನಿವಾಸಿ. ಇವರು ಕಾರವಾರ, ಪುತ್ತೂರು, ಮಣಿಪಾಲ, ಕಾಪು ಠಾಣೆಗಳಲ್ಲಿ ಇನ್ಸ್ ಪೆಕ್ಟರ್ ಅಗಿ ಸೇವೆ ಸಲ್ಲಿಸಿದ್ದರು.