ಕೇರಳ ಭೀಕರ ರಸ್ತೆ ಅಪಘಾತ: ಮಿಸ್ ಸೌತ್ ಇಂಡಿಯಾ – ಮಾಜಿ ಮಿಸ್ ಕೇರಳ ರನ್ನರ್ ಆಫ್ ಸ್ಥಳದಲ್ಲೇ ಸಾವು -ವಿಷಯ ತಿಳಿದು ತಾಯಿಯೂ ವಿಷ ಸೇವನೆ

20211101_231730-1
Ad Widget

Ad Widget

Ad Widget

Ad Widget

ಕೊಚ್ಚಿ: ಕೊಚ್ಚಿಯ ವೈಟ್ಟಿಲ್ಲಾದಲ್ಲಿ ಸೋಮವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮಿಸ್ ಸೌತ್ ಇಂಡಿಯಾ ಹಾಗೂ ಮಾಜಿ ಮಿಸ್ ಕೇರಳ ಆನ್ಸಿ ಕಬೀರ್ ಹಾಗೂ ಮಾಜಿ ಮಿಸ್ ಕೇರಳ ರನ್ನರ್ ಅಪ್ ಅಂಜನಾ ಶಾಜನ್ ಸಾವನ್ನಪ್ಪಿದ್ದಾರೆ.

Ad Widget

Ad Widget

Ad Widget

ವೈಟಿಲ್ಲಾ ಮತ್ತು ಪಲರಿವಟ್ಟಂ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಲಿಡೇ ಇನ್ ಹೋಟೆಲ್ ಬಳಿ ಮಧ್ಯರಾತ್ರಿ 1.30ರ ಸುಮಾರಿಗೆ ಅಪಘಾತ ಸಂಭವಿಸಿದೆ.

Ad Widget

ಆನ್ಸಿ ಮತ್ತು ಅಂಜನಾ ಪ್ರಯಾಣಿಸುತ್ತಿದ್ದ ಕಾರು ವೈಟ್ಟಿಲ್ಲಾ ಕಡೆಯಿಂದ ಬರುತ್ತಿರುವಾಗ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಮರಕ್ಕೆ ಡಿಕ್ಕಿ ಹೊಡೆದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಆನ್ಸಿ ಮತ್ತು ಅಂಜನಾ ಜೊತೆ ತ್ರಿಶೂರ್ ಅಬ್ದುಲ್ ರೆಹೆಮಾನ್ ಮತ್ತು ಮುಹಮ್ಮದ್ ಆಸಿಫ್ ಕೂಡ ಕಾರಿನಲ್ಲಿದ್ದರು. ಗಂಭೀರವಾಗಿ ಗಾಯಗೊಂಡ ಇಬ್ಬರನ್ನೂ ಎರ್ನಾಕುಲಂ ಮೆಡಿಕಲ್ ಸೆಂಟರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆನ್ಸಿ ಮತ್ತು ಅಂಜನಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

Ad Widget

Ad Widget

ಆನ್ಸಿ ತಿರುವನಂತಪುರಂ ಜಿಲ್ಲೆಯ ಅಲಂಕೋಡ್ ಮೂಲದವರಾಗಿದ್ದು, ಅಂಜನಾ ತ್ರಿಶೂರ್ ಮೂಲದವರಾಗಿದ್ದಾರೆ.

ತಾಯಿ ಆತ್ಮಹತ್ಯೆ ಯತ್ನ: ಅನ್ಸಿ ಕಬೀರ್ ತಾಯಿ ರಸೀನಾ ಘಟನೆ ಬಗ್ಗೆ ತಿಳಿದು ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿ ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ಇದ್ದರೆ.

ಅಂಗಡಿಗಳಲ್ಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರೀಶೀಲಿಸಿದಾಗ ಕಾರು ಅತಿ ವೇಗದಲ್ಲಿ ಚಲಿಸುತ್ತಿದ್ದ ವೇಳೆ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಅಪಘಾತ ಸಂಭವಿಸಿರಬಹುದು ಎಂದು ಪೋಲಿಸರು ತಿಳಿಸಿದ್ದಾರೆ.

25 ವರ್ಷ ದಾಟಿದ ಯುವಕ/ಯುವತಿಯರು ತಮ್ಮ ಆರೋಗ್ಯಕ್ಕಾಗಿ ಅನುಸರಿಸಬೇಕಾದ ಅಗತ್ಯ ಕ್ರಮಗಳು ಹಾಗೂ ಹೃದಯಾಘಾತದ ಬಗ್ಗೆ ಪುತ್ತೂರಿನ ಖ್ಯಾತ ಹೃದ್ರೋಗ ತಜ್ಞ ಡಾ. ಶ್ರೀಪತಿ ರಾವ್ ರವರಿಂದ ಯುವಜನತೆಗೆ ಅತ್ಯುಪಯುಕ್ತ ಮಾಹಿತಿ

ಆನ್ಸಿ 2019 ರಲ್ಲಿ ಮಿಸ್ ಕೇರಳ ಪ್ರಶಸ್ತಿಯನ್ನು ಗೆದ್ದಿದ್ದರು ಮತ್ತು ಅಂಜನಾ ಈವೆಂಟ್‍ನಲ್ಲಿ ರನ್ನರ್ ಅಪ್ ಆಗಿದ್ದರು. ಈ ವರ್ಷ ಆಗಸ್ಟ್ ನಲ್ಲಿ ಆನ್ಸಿ ಮಿಸ್ ಸೌತ್ ಇಂಡಿಯಾ ಪ್ರಶಸ್ತಿ ಪಡೆದಿದ್ದರು.

Leave a Reply

Recent Posts

ಮಹಿಳಾ ಪೊಲೀಸ್ ಪೇದೆಯನ್ನು ಹತ್ಯೆಗೈದು ನಾಪತ್ತೆಯಾಗಿದ್ದಳೆ ಎಂದು ಬಿಂಬಿಸಿದ್ದ ಸಹೋದ್ಯೋಗಿ ಎರಡು ವರ್ಷಗಳ ಬಳಿಕ ಅಂದರ್ ! ಚೈತ್ರಾ ಟಿಕೆಟ್‌ ಡೀಲ್ ನಂತೆ ನಕಲಿ ಪಾತ್ರ, ತಿರುಚಿದ ಆಡಿಯೋ, ನಕಲಿ ಕೊವೀಡ್‌ ಸರ್ಟಿಫಿಕೆಟ್‌ – ಅಬ್ಬಾಬ್ಬ ಕೊಲೆಯನ್ನು ಮುಚ್ಚಲು ಈ ಕ್ರಿಮಿನಲ್‌ ಮಾಡಿದ ಪ್ಲ್ಯಾನ್‌ ಒಂದಾ ಎರಡಾ ?

error: Content is protected !!
%d bloggers like this: