ಪುತ್ತೂರು : ಹಿಂದೂ ಸಂಘಟನೆಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಹಿಂದೂ ಜಾಗರಣ ವೇದಿಕೆಯ ಪುತ್ತೂರು ತಾಲೂಕು ಕಾರ್ಯದರ್ಶಿ ಹರೀಶ್ಚಂದ್ರ ನ.1 ರಂದು ನಿಧನ ಹೊಂದಿದರು.
ಬಾಯಿ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರನ್ನು ಇತ್ತೀಚೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಅವರು ನಿಧನ ಹೊಂದಿದ್ದರು ಎಂದು ತಿಳಿದು ಬಂದಿದೆ.
ಮೃತರು ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಪಡುಮಲೆ ಮೈಂದನಡ್ಕ ನಿವಾಸಿಯಾಗಿದ್ದರು. ವೃತ್ತಿಯಲ್ಲಿ ಇಲೆಕ್ಟ್ರೀಷಿಯನ್ ಆಗಿದ್ದ ಅವರು ಹಿಂದೂ ಜಾಗರಣೆ ವೇದಿಕೆಯ ಹಲವು ಸಮಾಜಮುಖಿ ಚಟುವಟಿಕೆಯಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದರು.
ಹರೀಶ್ಚಂದ್ರರವರು ತಂದೆ, ತಾಯಿ , ಮೂವರು ಸಹೋದರರು, ಹಿಂಜಾವೇಯ ಅಪಾರ ಗೆಳೆಯರ ಬಳಗವನ್ನು ಅಗಲಿದ್ದಾರೆ