ಬೆಂಗಳೂರು: ನ 1 : ನಟ, ಗಾಯಕ, ನಿರ್ಮಾಪಕ ಹೀಗೆ ಚಿತ್ರರಂಗದ ವಿವಿಧ ವಿಭಾಗದಲ್ಲಿ ಸಾಧನೆ ಮಾಡಿದ ದಿ.ಪುನೀತ್ ರಾಜ್ಕುಮಾರ್ ಸಮಾಜ ಮುಖಿ ಚಿಂತನೆಗಳನ್ನು ಒಳಗೊಂಡಿದ್ದ ಅದರ್ಶ ವ್ಯಕ್ತಿಯೂ ಅಗಿದ್ದರು. 46 ವರ್ಷದ ಸಣ್ಣ ಪ್ರಾಯದಲ್ಲೆ 1800 ಬಡ ಮಕ್ಕಳನ್ನು ಓದಿಸುತಿದ್ದರು. ಇದೀಗ ಅವರ ಅಕಾಲಿಕ ಮರಣದ ಬಳಿಕ ಆ ಮಕ್ಕಳ ಭವಿಷ್ಯವೂ ತೂಗು ಉಯ್ಯಾಲೆಯಲ್ಲಿ ಇತ್ತು.
ಆದರೇ ಈಗ ಆ ಮಕ್ಕಳ ಓದಿನ ಜವಬ್ದಾರಿಯನ್ನು ದಕ್ಷಿಣ ಭಾರತದ ಖ್ಯಾತ ಬಹುಭಾಷ ನಟರೊಬ್ಬರು ಹೊತ್ತಿಕೊಳ್ಳುವ ಭರವಸೆ ನೀಡಿದ್ದಾರೆ. ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯ ಚಿತ್ರಗಳಲ್ಲಿ ನಟಿಸಿರುವ ಪ್ರಖ್ಯಾತ ನಟ ವಿಶಾಲ್ ಮಕ್ಕಳ ವಿದ್ಯಾಭ್ಯಾಸ ದ ಜವಬ್ದಾರಿ ಹೊತ್ತ ನಟ.
ಅವರು ಭಾನುವಾರ ಈ ವಿಚಾರ ತಿಳಿಸಿದ್ದು ಪುನೀತ್ ಓದಿಸುತ್ತಿದ್ದ 1800 ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಮುಂದಿನ ವರ್ಷದಿಂದ ನಾನು ವಹಿಸಿಕೊಳ್ಳುತ್ತೇನೆ ಎಂದು ಅವರು ಘೋಷಿಸಿದ್ದರು.

ಪುನೀತ್ ರಾಜ್ಕುಮಾರ್ ಯಾವುದೇ ಪ್ರಚಾರವಿಲ್ಲದೆ, ಬಲಗೈಯಲ್ಲಿ ಕೊಟ್ಟದ್ದು ಎಡಗೈ ಗೆ ತಿಳಿಯಬಾರದು ಎಂಬ ಸಿದ್ದಾಂತೆದಂತೆ ಸದ್ದಿಲ್ಲದೆ ಸಾಕಷ್ಟು ಸಮಾಜಮುಖಿ ಕಾರ್ಯಗಳಲ್ಲಿ ಕೂಡ ತೊಡಗಿಕೊಂಡಿದ್ದರು ಎಂಬ ವಿಚಾರ ಅವರ ನಿಧನಾನಂತರ ಬೆಳಕಿಗೆ ಬರುತ್ತಿದೆ.
