ಕೊಡಗು: ಕೊಡಗು ಜಿಲ್ಲೆಯ ಬಿ.ಶೆಟ್ಟಿಗೇರಿ ಗ್ರಾಮದಲ್ಲಿ ಇಬ್ಬರು ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಿಕೊಂಡ ಘಟನೆ ಅ.31 ರಂದು ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ಸಹೋದರಿಯರಾಗಿದ್ದು ದಮಯಂತಿ(20) ಹರ್ಷಿತಾ(18) ಎಂದು ಗುರುತಿಸಲಾಗಿದೆ.
ಅದೇ ಗ್ರಾಮದ ನಾಮೇರ ಉದಯ ಎಂಬವರ ಪುತ್ರಿಯರಾಗಿದ್ದು ಆತ್ಮಹತ್ಯೆಗೆ ಕೌಟುಂಬಿಕ ಕಲಹ ಕಾರಣ ಎನ್ನಲಾಗಿದೆ .
ಹಳ್ಳಿಗಟ್ಟು ಸಿಇಟಿ ಕಾಲೇಜು ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿನಿ ದಮಯಂತಿ ಹಾಗೂ ಕಾವೇರಿ ಕಾಲೇಜಿನಲ್ಲಿ ಪ್ರಥಮ ಬಿಎ ಮಾಡಿಕೊಂಡಿರುವ ಹರ್ಷಿತಾ ಮೃತ ದುರ್ದೈವಿಗಳು.
ಅಕ್ಕ ತಂಗಿ ಇಬ್ಬರೂ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ . ಗೋಣಿಕೊಪ್ಪಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.