ಪುತ್ತೂರು : ಅ 31 : ರಸ್ತೆ ದುರಸ್ತಿಗೊಳಿಸುವಂತೆ ಅಗ್ರಹಿಸಿ ಪುತ್ತೂರು ನಗರ ಸಭೆ ವ್ಯಾಪ್ತಿಯ ತಾರಿಗುಡ್ಡೆ ಎಂಬಲ್ಲಿ ಶಾಸಕ ಸಂಜೀವ ಮಠಂದೂರು ಅವರ ಕಾರಿಗೆ ಗ್ರಾಮಸ್ಥರ ತಂಡವೊಂದು ತಡೆಯೊಡ್ಡಿದ, ಬಳಿಕ ಅಲ್ಲಿ ಗದ್ದಲ ಏರ್ಪಟ್ಟ ಹಿನ್ನಲೆಯಲ್ಲಿ ಇಬ್ಬರನ್ನು ಪುತ್ತೂರು ನಗರ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಅ .31 ರಂದು ಮದ್ಯಾಹ್ನ ನಡೆದಿತ್ತು.
ಶಾಸಕ ಮಠಂದೂರುರವರು ನಗರ ಠಾಣೆಗೆ ಸಂಜೆ ಬೇಟಿ ನೀಡಿದ ವೇಳೆ ಪೊಲೀಸರು ವಶಕ್ಕೆ ಪಡೆದ ಆ ಇಬ್ಬರು ಶಾಸಕರ ಕ್ಷಮೆಯಾಚಿಸಿದ್ದಾರೆ. ಇಬ್ಬರು ಸಣ್ಣ ವಯಸ್ಸಿನ ಯುವಕರಾದ ಹಿನ್ನಲೆಯಲ್ಲಿ ಅವರ ಭವಿಷ್ಯದ ಹಿತ ದೃಷ್ಟಿಯಿಂದ ಶಾಸಕರು ಪ್ರಕರಣವನ್ನು ಮುಂದುವರಿಸದೇ ಕೈ ಬಿಡಲು ನಿರ್ಧರಿಸಿದರು . ಹೀಗಾಗಿ ಅವರಿಬ್ಬರನ್ನು ನಗರ ಠಾಣೆ ಪೊಲೀಸರು ಯಾವುದೇ ಪ್ರಕರಣ ದಾಖಲಿಸದೇ ಬಿಟ್ಟು ಕಳುಹಿಸಿದ್ದಾರೆಂದು ಪುತ್ತೂರು ನಗರಸಭೆ ಸದಸ್ಯ ಹಾಗೂ ಬಿಜೆಪಿ ನಗರ ಮಂಡಲ ಅಧ್ಯಕ್ಷ ಪಿ.ಜಿ. ಜಗನ್ನಿವಾಸ್ ರಾವ್ ಅವರು ನಿಖರ ನ್ಯೂಸಿಗೆ ತಿಳಿಸಿದ್ದಾರೆ.
ನಗರ ವ್ಯಾಪ್ತಿಯ ಪಕ್ಷದ ಬೂತ್ ಅಧ್ಯಕ್ಷರ ಮನೆಗಳಿಗೆ ನಾಮಫಲಕ ಅಳವಡಿಸುವ ಅಭಿಯಾನದ ಭಾಗವಾಗಿ ಇಂದು ಬೆಳಿಗ್ಗೆ ಶಾಸಕರು ಹಾಗೂ ನಾನು ಕಾರಿನಲ್ಲಿ ತೆರಳುತ್ತಿದ್ದಾಗ ಒಂದಷ್ಟು ಜನರ ಗುಂಪು ಆ ಕಾರನ್ನು ತಡೆದು ರಸ್ತೆ ದುರಸ್ತಿಗೊಳಿಸುವಂತೆ ಅಗ್ರಹಿಸಿತ್ತು. ಈ ಸಂದರ್ಭ ನಾನು ಹಾಗೂ ಶಾಸಕರು ಅತ್ಯಂತ ವಿನಯದಿಂದ ಮುಂದಿನ ದಿನಗಳಲ್ಲಿ ರಸ್ತೆ ದುರಸ್ತಿಗೊಳಿಸುವ ಭರವಸೆ ನೀಡಿದ್ದೇವು . ಕ್ಷೇತ್ರ ವ್ಯಾಪ್ತಿಯಲ್ಲಿ ದೊಡ್ಡ ಮಟ್ಡದಲ್ಲಿ ಅಭಿವೃದ್ದಿಯಾಗುತ್ತಿದೆ. ಶಾಸಕರ ಅವಧಿ ಇನ್ನೂ ಒಂದೂವರೆ ವರ್ಷ ವಿದ್ದು ಈ ವೇಳೆ ಈ ರಸ್ತೆ ದುರಸ್ತಿಗೂ ಅನುದಾನ ಒದಗಿಸುತ್ತೇವೆ ಎಂದು ತಿಳಿಸಿದ್ದೇವು ಎಂದು ಜಗನ್ನಿವಾಸ ರಾವ್ ತಿಳಿಸಿದ್ದಾರೆ.

ಆದರೇ ಗುಂಪಿನಲ್ಲಿದ್ದ ಕೆಲವರು ” ಇದೇ ರಸ್ತೆಯಲ್ಲಿ ವಾಪಸ್ಸು ಹೇಗೆ ಬರುತ್ತೀರಿ ಅಂತಾ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ನಾನು ಠಾಣೆಗೆ ಕರೆ ಮಾಡಿ ಸೂಕ್ತ ಭದ್ರತೆ ಕೊಡುವಂತೆ ಕೇಳಿಕೊಂಡೆ . ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಬ್ಬರನ್ಮು ವಶಕ್ಕೆ ಪಡೆದಿದ್ದಾರೆ ಬಳಿಕ ನಮಗೆ ತಿಳಿದು ಬಂತು ಎಂದು ರಾವ್ ಹೇಳಿದರು.

ಆದರೇ ಈ ಪ್ರಕರಣವನ್ನು ಕಾಂಗ್ರೇಸ್ ರಾಜಕೀಯಗೊಳಿಸಲು ಪ್ರಯತ್ನಿಸಿತ್ತು. ಹಾಗಾಗಿ ನಾವು ಶಾಸಕರ ಜತೆ ಠಾಣೆಗೆ ತೆರಳಿದ್ದೇವು . ಆಗ ಅಲ್ಲಿದ್ದ ಕಾಂಗ್ರೇಸ್ ನಿಯೋಗವು ವಶಕ್ಕೆ ಪಡೆದಿರುವ ಯುವಕರನ್ನು ಕೂಡಲೇ ಬಿಡುಗಡೆ ಮಾಡುವಂತೆ ತಿಳಿಸಿದ್ದರು . ಆಗ ಆ ಇಬ್ಬರು ಶಾಸಕರಿಗೆ ಅಗೌರವ ತೋರಿದ ಹಿನ್ನಲೆಯಲ್ಲಿ ಶಾಸಕರ ಕ್ಷಮೆಯಾಚಿಸಿದರೇ ಪ್ರಕರಣ ಕೈ ಬಿಡುವುದಾಗಿ ನಾನು ಅವರಲ್ಲಿ ತಿಳಿಸಿದೆ ಎಂದು ಅವರು ತಿಳಿಸಿದರು.
ಬಳಿಕ ಆ ಇಬ್ಬರು ಯುವಕರು ಶಾಸಕರ ಕ್ಷಮೆಯಾಚಿಸಿದ್ದು ಪ್ರಕರಣ ಸುಖಾಂತ್ಯಗೊಂಡಿದೆ ಎಂದು ಜಗನ್ನಿವಾಸ ರಾವ್ ತಿಳಿಸಿದರು.