ಕಾರ್ಕಳ : ಐದು ದಿನಗಳ ಹಿಂದೆ ತನ್ನ ಮನೆಯಿಂದ ಯುವತಿಯೊಬ್ಬಳು ಕಾಣೆಯಾಗಿರುವ ಬಗ್ಗೆ ಕಾರ್ಕಳ ಠಾಣೆಯಲ್ಲಿ ದೂರು ದಾಖಲಾಗಿದೆ. ಶಿರ್ವಗ್ರಾಮದ ಕೋಡುಗುಡ್ಡೆ ಹೌಸ್ನ ಪವಿತ್ರಾ(26)ನಾಪತ್ತೆಯಾದ ಯುವತಿ.
ಇವರು ಅ.26ರ ಬೆಳಗ್ಗೆ ಯಿಂದ ಕೋಡುಗುಡ್ಡೆ ಹೌಸ್ ಮನೆಯಿಂದ ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಯುವತಿಯ ಚಹರೆ:
5 ಅಡಿ 2 ಇಂಚು ಎತ್ತರವಿದ್ದು, ಬಿಳಿ ಮೈ ಬಣ್ಣ, ಸಪೂರ ಶರೀರ, ಮೂಗಿನ ಮೇಲೆ ಹಳೆ ಗಾಯದ ಗುರುತು ಇದ್ದು, ಕನ್ನಡ ಭಾಷೆ ಮಾತನಾಡುತ್ತಾರೆ.ನಾಪತ್ತೆಯಾದ ವೇಳೆ ಆಕೆ ಕೇಸರಿ ಬಣ್ಣದ ಚೂಡಿದಾರ, ಹಸಿರು ಬಣ್ಣದ ಪ್ಯಾಂಟ್ ಧರಿಸಿದ್ದರು.
ಮಾಹಿತಿ ದೊರೆತಲ್ಲಿ ತಿಳಿಸಬೇಕಾದ ವಿವರ:

ಪೋಲಿಸ್ ಉಪಾಧೀಕ್ಷಕರು, ಕಾರ್ಕಳ ವಿಭಾಗ, ಕಾರ್ಕಳ ದೂ.ಸಂಖ್ಯೆ: 08258-231333 9480805421, ಪೋಲಿಸ್ ವೃತ್ತ ನೀರೀಕ್ಷಕರು ಕಾಪು, ವೃತ್ತ ಕಚೇರಿ ದೂ.ಸಂಖ್ಯೆ: 0820- 2552133,94808054431 ಅಥವಾ ಶಿರ್ವ ಪೋಲಿಸ್ ಠಾಣೆ ದೂ.ಸಂಖ್ಯೆ: 0820 2554139, 9480805451ನ್ನು ಸಂಪರ್ಕಿಸಬಹುದು ಎಂದು ಶಿರ್ವಾ ಪೋಲಿಸ್ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.