ಕಡಬ ತಾಲೂಕಿನ ಕೋಡಿಂಬಾಳದ ಗುರಿಯಡ್ಕ ಬಳಿ ರಾಜರೋಷವಾಗಿ ಶಾಮಿಯಾನ ಅಳವಡಿಸಿ ಕೋಳಿ ಅಂಕ ನಡೆಯುತ್ತಿರುವುದು ಅ .31 ರಂದು ವರದಿಯಾಗಿದೆ. ಹಾಡು ಹಗಲೇ ಜನದಟ್ಟಣೆಯಲ್ಲಿ ಕೋಳಿ ಅಂಕ ನಡೆಯುತ್ತಿದ್ದು , ಇದನ್ನು ನೋಡಿದ ಜನ ಸಾಮನ್ಯರಿಗೆ ರಾಜ್ಯದಲ್ಲಿ ಈಗ ಕೋಳಿ ಅಂಕ ಅಧಿಕೃತಗೊಂಡಿದೆಯೊ ಎಂಬ ಸಂಶಯ ಕಾಡುತ್ತಿದೆ.
ಆದರೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಪೊಲೀಸ್ ಇಲಾಖೆ ಮಾತ್ರ ಕಣ್ಣು ಮುಚ್ಚಿ ಹಾಲು ಕುಡಿಯುತ್ತಿರುವ ಬೆಕ್ಕಿನ ರೀತಿ ಆಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ಸ್ಥಳೀಯ ವರದಿಗಾರರು ಕಡಬ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದರೇ ತಮಗದೂ ಗೊತ್ತೆ ಇಲ್ಲ ಎನ್ನುವ ರೀತಿ ಜಾಣ ಕಿವುಡು ಪ್ರದರ್ಶಿಸಿದ್ದಾರೆಂದು ವರದಿಯಾಗಿದೆ.
ಕೋಳಿ ಅಂಕ ಪೊಲೀಸರ ಕೃಪಾಕಟಾಕ್ಷದಲ್ಲಿಯೇ ನಡೆಯುತ್ತಿದೆ, ಪ್ರತಿ ವಾರ ನಡೆಯುತ್ತಿದೆ ಎಂದು ಸ್ಥಳಿಯರು ಆರೋಪಿಸಿದ್ದಾರೆ.
ಕೋಳಿ ಅಂಕ ನಡೆಯುತ್ತಿರುವ ಸ್ಥಳದಲ್ಲಿ ನೂರಾರು ಜನರು ಸೇರಿರುವ ವಿಡೀಯೊ ವೈರಲ್ ಆಗಿದೆ. ದೊಡ್ಡ ಸಂಖ್ಯೆಯಲ್ಲಿ ಕಾರು , ಬೈಕ್ ಗಳು ಸ್ಥಳದಲ್ಲಿ ಪಾರ್ಕ್ ಮಾಡಲಾಗಿದೆ. ಸಾವಿರಾರು ರೂಪಾಯಿ ಬೆಟ್ಟಿಂಗ್ ಕೂಡ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಯಾರ ಭಯವೂ ಇಲ್ಲದೇ, ಸ್ಥಳದಲ್ಲಿ ಶಾಮಿಯಾನ ಹಾಕಿ ನೂರಾರು ಜನ ಸೇರಿಸಿ ಕೋಳಿ ಅಂಕ ಕಡಬ ಪೊಲೀಸರ ಮೂಗಿನಡಿಯೇ ನಡೆಯುತ್ತಿರುವುದು ಮತ್ತು ಆ ಬಗ್ಗೆ ಯಾವುದೇ ಕ್ರಮ ಕೈ ಗೊಳ್ಳದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ಹುಟ್ಟು ಹಾಕಿದೆ.



