‘ಮೆಟಾ’ ಆಗಿ ಬದಲಾದ ಖ್ಯಾತ ಸಾಮಾಜಿಕ ಜಾಲತಾಣ ಫೇಸ್ಬುಕ್

FB_IMG_1635482634450
Ad Widget

Ad Widget

Ad Widget

ನ್ಯೂಯಾರ್ಕ್, ಅ.29 : “ಸಾಮಾಜಿಕ ಜಾಲತಾಣ ಫೇಸ್‌‌ಬುಕ್‌‌ನ ಹೆಸರು ಬದಲಾವಣೆ ಮಾಡಲಾಗಿದ್ದು, ಮೆಟಾ ಎಂದು ಮರುನಾಮಕರಣ ಮಾಡಲಾಗಿದೆ” ಎಂದು ಫೇಸ್ ಬುಕ್ ಸಿಇಒ ಮಾರ್ಕ್ ಜುಕರ್ ಬರ್ಗ್ ತಿಳಿಸಿದ್ದಾರೆ.

Ad Widget

ಮಾರ್ಕ್ ಜುಕರ್ ಬರ್ಗ್ ತನ್ನ ಫೇಸ್ಬುಕ್ ಬಯೋದಲ್ಲಿ ceo of meta ಎಂದು ಬರೆದಿದ್ದಾರೆ.

Ad Widget

Ad Widget

Ad Widget

“ನಮ್ಮ ಅಪ್ಲಿಕೇಷನ್‌ಗಳು ಹಾಗೂ ಅವರ ಬ್ರ್ಯಾಂಡ್‌ಗಳು ಬದಲಾಗುತ್ತಿಲ್ಲ. ಆದರೆ, ಫೇಸ್‌‌ಬುಕ್‌ ಕಾರ್ಪೊರೇಟ್‌ ಕಂಪೆನಿಯ ಹೆಸರನ್ನು ಬದಲಾಯಿಸಲಾಗಿದೆ” ಎಂದು ಹೇಳಿದ್ದಾರೆ.

Ad Widget

ಕಂಪೆನಿಯು ತನ್ನ ಮಾರುಕಟ್ಟೆ ಶಕ್ತಿ, ಅದರ ಅಲ್ಗಾರಿದಮಿಕ್‌ ತೀರ್ಮಾನಗಳು ಹಾಗೂ ಅದರ ಫ್ಲಾಟ್‌‌ಫಾರ್ಮ್‌‌ಗಳಲ್ಲಿನ ದುರುಪಯೋಗಗಳ ಪೋಲಿಸಿಂಗ್‌ ಮೇಳೆ ಜನಪ್ರತಿನಿಧಿಗಳು ಹಾಗೂ ನಿಯಂತ್ರಕರಿಂದ ಟೀಕೆಗಳನ್ನು ಎದುರಿಸುತ್ತಿರುವ ಕಾರಣ ಈ ಹೆಸರು ಬದಲಾವಣೆಯಾಗಿದೆ.

Ad Widget

Ad Widget

ಮೆಟಾವರ್ಸ್‌ ಎನ್ನುವ ಪದವು ಮೂರು ದಶಕಗಳ ಹಿಂದೆ ಡಿಸ್ಟೋಪಿಯನ್‌‌ ಕಾದಂಬರಿಯಲ್ಲಿ ಮೊದಲ ಬಾರಿಗೆ ಸೃಷ್ಟಿಸಲ್ಪಟ್ಟಿದೆ. ಈಗ ಸಿಲಿಕಾನ್‌ ವ್ಯಾಲಿಯಲ್ಲಿ ಬಜ್‌ ಅನ್ನು ಆಕರ್ಷಿಸುತ್ತದೆ. ಇದು ವಿಭಿನ್ನ ಸಾಧನಗಳನ್ನು ಬಳಸುವ ಜನರು ಪ್ರವೇಶಿಸಬಹುದಾದ ಹಂಚಿಕೆಯ ವರ್ಚುವಲ್‌‌‌ ಪರಿಸರದ ಕಲ್ಪನೆಯನ್ನು ಉಲ್ಲೇಖಿಸುತ್ತದೆ.

“ಮುಂದಿನ ದಶಕದಲ್ಲಿ ಮೆಟಾವರ್ಸ್ ಒಂದು ಶತಕೋಟಿ ಜನರನ್ನು ತಲುಪುವ ನಿರೀಕ್ಷೆಯಿದೆ” ಎಂದು ತಿಳಿಸಿದ್ದಾರೆ.
“ಮೆಟಾ ಸಾಮಾಜಿಕ ಜಾಲತಾಣವನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯಲಿದೆ. ಸಾಮಾಜಿಕ ವಿಚಾರಗಳೊಂದಿಗಿನ ಜಂಜಾಟಗಳಿಂದ ಸಾಕಷ್ಟು ಕಲಿತಿದ್ದೇವೆ. ಇದು ಹೊಸ ಅಧ್ಯಾಯವನ್ನು ರೂಪಿಸಲು ನೆರವಾಗಲಿದೆ” ಎಂದಿದ್ದಾರೆ.

Leave a Reply

Recent Posts

error: Content is protected !!
%d bloggers like this: