ಯುವತಿಯೊಬ್ಬಳ ಮೃತ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕಾಸರಗೋಡು ಜಿಲ್ಲೆಯ ಪೆರ್ಲದಲ್ಲಿ ಅ . 29 ರಂದು ನಡೆದಿದೆ.
ವಿಟ್ಲದ ಪದವಿ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿನಿ ಹಾಗೂ ಕಾಸರಗೋಡು ಜಿಲ್ಲೆಯ ಪೆರ್ಲ ನಿವಾಸಿ ಶ್ರಾವ್ಯ ( 18) ಮೃತಪಟ್ಟಿರುವ ಯುವತಿ.
ಈಕೆ ಪೆರ್ಲ ಸಮೀಪದ ಬಜಕೂಡ್ಲು ನಿವಾಸಿ ಮಹಾಲಿಂಗ ನಾಯ್ಕ – ಕುಮುದಾಕ್ಷಿ ದಂಪತಿಗಳ ಪುತ್ರಿ.
ಶುಕ್ರವಾರ ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಈಕೆ ತನ್ನ ಕೋಣೆಯಲ್ಲಿ ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕಿಸಲಾಗಿದೆ.
ಇವರದು ಕೃಷಿ ಕುಟುಂಬವಾಗಿದ್ದು ತಂದೆ ತಾಯಿ ಮಧ್ಯಾಹ್ನ ತೋಟದ ಕೆಲಸ ಮುಗಿಸಿ ವಾಪಸ್ಸು ಬಂದಾಗ ಕೃತ್ಯ ಬೆಳಕಿಗೆ ಬಂದಿದೆ.
ಈ ದಂಪತಿಗಳಿಗೆ ಮೂವರು ಹೆಣ್ಣುಮಕ್ಕಳು. ಇವರ ಪೈಕಿ ದೊಡ್ಡ ಮಗಳು ಪೆರ್ಲ ಪೇಟೆಯಲ್ಲಿ ಮೆಡಿಕಲ್ ಒಂ೧ದರಲ್ಲಿ ಉದ್ಯೋಗಿಯಾಗಿದ್ದು ಅವಳು ಮಧ್ಯಾಹ್ನದ ವೇಳೆ ಮನೆಯಲ್ಲಿರಲಿಲ್ಲ.

ಇನ್ನೊಬ್ಬಳು ಸಹೋದರಿ ಸಮೀಪದ ಮನೆ ಮಕ್ಕಳಿಗೆ ಟ್ಯೂಶನ್ ಶಿಕ್ಷಣ ನೀಡಲು ಹೋಗಿದ್ದರು. ಬದಿಯಡ್ಕ ಪೋಲಿಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.