ಕುಂಬಳೆ, 27: ಅರಾಧನ ಪದ್ದತಿಯಲ್ಲಿ ಮಹತ್ತರ ಬದಲಾವಣೆ ಕಾಣಿಸಿಕೊಂಡಿದ್ದ ಹಾಗೂ ಇದ್ದಕ್ಕಿದ್ದಂತೆ ನಿಗೂಢವಾಗಿ ನಾಪತ್ತೆಯಾಗಿರುವ ಕಾಸರಗೋಡಿನ ಪುತ್ತಿಗೆಯ ಹಿಂದೂ ಧರ್ಮದ ಯುವಕನ ಮನೆಯ ಕೋಣೆಯಲ್ಲಿ ನಮಾಜ್ ಮಾಡಲು ವ್ಯವಸ್ಥೆ ಕಲ್ಪಿಸಿರುವುದು, ಅನ್ಯ ಧರ್ಮದ ಧರ್ಮಗ್ರಂಥ ಪತ್ತೆಯಾಗಿದೆ.
ಪುತ್ತಿಗೆ ಗ್ರಾಮ ಪಂಚಾಯತ್‌ನ ಬಾಡೂರು ಚಾಕಟೆಜಾಲಿನ ರಾಮಣ್ಣ ಪೂಜಾರಿ ಅವರ ಪುತ್ರ ಪ್ರವೀಣ್ ಕುಮಾರ್ ಅ. 22ರಂದು ರಾತ್ರಿ ಕಾರಿನಲ್ಲಿ ಆಗಮಿಸಿದ ತಂಡದೊಂದಿಗೆ ತೆರಳಿದ್ದವರು ಮನೆಗೆ ಮರಳಿ ಬಂದಿಲ್ಲ. ನಾಪತ್ತೆಯಾಗಿ ವಾರ ಕಳೆದರೂ ಆತ ಮನೆಯವರ ಜತೆ ಸಂಪರ್ಕ ಸಾಧಿಸಿಲ್ಲ ಎಂದು ಹೇಳಲಾಗಿದೆ.
ಪ್ರವೀಣ್ ಕುಮಾರ್ ನೆಲ್ಲಿಕಟ್ಟೆಯಲ್ಲಿ ಅನ್ಯಮತೀಯ ರೋರ್ವರ ಮಾಲಕತ್ವದ ಪೆಟ್ರೋಲ್ ಬಂಕ್‌ನಲ್ಲಿ ಮ್ಯಾನೇಜರ್ ಆಗಿದ್ದರು. ಕಳೆದ ಕೆಲ ತಿಂಗಳುಗಳಿಂದ ಆತನ ನಡವಳಿಕೆಯಲ್ಲಿ ಮಹತ್ತರ ಬದಲಾವಣೆ ಕಾಣಿಸಿಕೊಂಡಿತ್ತು. ಧಾರ್ಮಿಕ ಅಚರಣೆಯಲ್ಲೂ ಭಾರೀ ವ್ಯತ್ಯಾಸ ಕಾಣಿಸಿಕೊಂಡಿದ್ದು ಯುವಕ ಮತಾಂತರಗೊಂಡಿದ್ದಾನೆ ಎಂಬ ಶಂಕೆಗೂ ಕಾರಣವಾಗಿದೆ.
ಮಧ್ಯಮ ವರ್ಗದ ಮನೆಯವರಾಗಿರುವ ಪ್ರವೀಣ್ ಕುಮಾರ್ ಅವರಿಗೆ ಐಷಾರಾಮಿ – ಜೀವನದ ಆಮಿಷವೊಡ್ಡಿ ಮತಾಂತರಕ್ಕೆಒಯ್ದಿರುವುದಾಗಿ ಶಂಕೆ ಮೂಡಿದೆ. ಈತನಿಗೆ ಕಾರು, ಸ್ಕೂಟಿ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ನೀಡಿ ಮತಾಂತರಗೊಳಿಸಿರುವುದಾಗಿ ತಿಳಿದುಬಂದಿದೆ.

ಈತನ ಮನೆಯ ಕೋಣೆಯೊಂದಕ್ಕೆ ಎಸಿ ಅಳವಡಿಸಿ ಅದರೊಳಗೆನಮಾಜು ಮಾಡಲು ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಕೋಣೆಯೊಳಗೆ ಕುರಾನ್, ಬೆಲೆಬಾಳುವ ಸುಗಂಧ ದ್ರವ್ಯಗಳು ಪತ್ತೆಯಾಗಿವೆ. ಪ್ರವೀಣ್ ತಾಯಿ ಪ್ರೇಮಾ ತನ್ನ ಪುತ್ರನನ್ನು ಪತ್ತೆ ಹಚ್ಚಿ ಕೊಡಬೇಕೆಂದು ಹಾಗೂ ನನ್ನ ಪುತ್ರನನ್ನು ಒಯ್ದ ತಂಡದವರು ಬೆದರಿಸುತ್ತಿ ರುವುದಾಗಿ ದೂರು ನೀಡಿದ್ದಾರೆ.
ಇದನ್ನೂ ಓದಿ : ಬದಿಯಡ್ಕ : ಯುವಕ ನಾಪತ್ತೆ – ಮತಾಂತರ ಶಂಕೆ | ತಾಯಿಯಿಂದ ಅಪಹರಣ ದೂರು – ಶೀಘ್ರ ಪತ್ತೆ ಹಚ್ಚಿ ಇಲ್ಲದಿದ್ರೆ ಉಗ್ರ ಹೋರಾಟ : ಹಿಂದೂ ಸಂಘಟನೆ