ಪುತ್ತೂರು: ಅಕ್ಕಸಾಲಿಗರೊಬ್ಬರು ಮನೆಯಿಂದ ತಾನು ಕೆಲಸ ಮಾಡುವ ಸ್ಥಳಕ್ಕೆ ತೆಗೆದುಕೊಂಡು ಹೋಗುತಿದ್ದ ಅಂದಾಜು ಐದು ಲಕ್ಷ ಮೌಲ್ಯದ ಚಿನ್ನ ಹಾಗೂ ಅಭರಣಗಳನ್ನು ದಾರಿ ಮಧ್ಯೆ ಕಳಕೊಂಡಿರುವ ಬಗ್ಗೆ ಅ 28 ರಂದು ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ.
ಪುತ್ತೂರು ತಾಲೂಕಿನ ಮುಂಡೂರು ಗ್ರಾಮದ ಪುತ್ತಿಲ ನಿವಾಸಿ ವಾದಿರಾಜ ದೂರು ನೀಡಿದವರು.
ವಾದಿರಾಜ ರವರು ಅ.28 ರಂದು ತನ್ನ ಮೊಟ್ಟೆತ್ತಡ್ಕ ಆಗಿ ಪುತ್ತೂರಿಗೆ ಬರುತ್ತಿರುವ ವೇಳೆ ಚಿನ್ನದ
ಒಡವೆಗಳನ್ನು ಒಳಗೊಂಡ ಪ್ಲಾಸ್ಟಿಕ್ ತೊಟ್ಟೆ ಕಳೆದ ಹೋಗಿದೆ.
ಆ ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಕರಿಮಣಿ ಸರ, ಗುಂಡುಗಳು, ಚೌಕ ಪೀಸು, ಚೈನು, ಕರಿಮಣಿ ನೇಯಿಗೆ, ಚಿನ್ನದ ಚೂರುಗಳು, ದೊಡ್ಡ ಗುಂಡು, ಸರಿಗೆ, ಕೊತ್ತಂಬರಿ ಗುಂಡುಗಳು ಸೇರಿದಂತೆ ಒಟ್ಟು ಐದು ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳಿದ್ದವು ಎಂದು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ವಾದಿರಾಜರವರು ಪುತ್ತೂರಿನ ಕೋರ್ಟು ರಸ್ತೆಯ ಬಳಿರುವ ಅಕ್ಷಯ ಕಾಂಪ್ಲೆಕ್ಸ್ ನಲ್ಲಿ ಚಿನ್ನದ ಕೆಲಸ ಮಾಡುವ ವರ್ಕ್ ಶಾಪ್ ಹೊಂದಿದ್ದು ಚಿನ್ನ ಸಿಕ್ಕಿದವರು ಅವರನ್ನು ಅಲ್ಲಿ ಸಂಪರ್ಕಿಸಬಹುದು ಅಥಾವ ಪುತ್ತೂರು ಪೊಲೀಸ್ ಠಾಣೆಗೆ ನೀಡಬಹುದಾಗಿದೆ