ಪಣಜಿ: ಮುಂದಿನ ಹಲವು ದಶಕಗಳ ಕಾಲ ರಾಷ್ಟ್ರಮಟ್ಟದಲ್ಲಿ ಪ್ರಭಲ ಶಕ್ತಿಯಾಗಿ ಉಳಿಯಲಿದೆ. ಅದು ಎಲ್ಲಿಯೂ ಹೋಗುವುದಿಲ್ಲ. ಅಡಳಿತ ವಿರೋಧಿ ಅಲೆ ಮೋದಿ ಹಾಗೂ ಬಿಜೆಪಿಯನ್ನು ಕಿತ್ತೊಗೆಯಲಿದೆ ಎನ್ನುವುದು ರಾಹುಲ್ ಗಾಂಧಿಯವರ ಭ್ರಮೆ ಎಂದು ಖ್ಯಾತ
ಚುನಾವಣಾ ತಂತ್ರಗಾರಿಕ ನಿಪುಣ ಪ್ರಶಾಂತ್ ಕಿಶೋರ್ ಗೋವಾದಲ್ಲಿ ಹೇಳಿದ್ದಾರೆ.
ಚುನಾವಣಾ ತಂತ್ರಗಾರಿಕೆಯನ್ನೇ ಕಸುಬಾಗಿಸಿಕೊಂಡಿರುವ ಐ ಪ್ಯಾಕ್ ನ ಮುಂದಾಳು ಆಗಿರುವ ಪ್ರಶಾಂತ್ ಕಿಶೋರ್
ಮುಂಬರುವ ಗೋವಾ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ನ ಅವಕಾಶಗಳನ್ನು ಗೋವಾದಲ್ಲಿ ಹುಡುಕಲು ಅ. 28 ರಂದು ಗೋವಾಕ್ಕೆ ಆಗಮಿಸಿದ್ದಾರೆ.
ಮೋದಿ ನೇತ್ರತ್ವದ ಕೇಂದ್ರ ಸರಕಾರವನ್ನು ಜನರೇ ಕಿತ್ತೊಗೆಯುತ್ತಾರೆ ಎಂಬ ಭ್ರಮೆಯಲ್ಲಿ ಕಾಂಗ್ರೇಸ್ ಮುಖಂಡ ರಾಹುಲ್ ಗಾಂಧಿ ಇದ್ದಾರೆ ಎಂದು ಅವರು ವಾಗ್ದಾಳಿ ಮಾಡಿದ್ದಾರೆ
ಬಿಜೆಪಿ ಗೆಲ್ಲಲಿ ಅಥವಾ ಸೋಲಲಿ, ಕಾಂಗ್ರೆಸ್ ಗೆ ಮೊದಲ 40 ವರ್ಷವಿದ್ದ ಹಾಗೆ, ರಾಷ್ಟ್ರ ರಾಜಕೀಯದಲ್ಲಿ ಬಿಜೆಪಿ ಇರಲಿದ್ದು, ಅದು ಎಲ್ಲಿಯೂ ಹೋಗಲ್ಲ ಎಂದು ಅವರು ಹೇಳಿದ್ದಾರೆ.

ಮೋದಿ ಅಡಳಿತದ ವಿರುದ್ದ ಜನರು ಬೇಸತ್ತಿದ್ದು ಅದು ಅಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದೆ. ಆ ಮೂಲಕ ಜನರು ಮೋದಿಯನ್ನು ಕಿತ್ತೊಗೆಯಲಿದ್ದಾರೆಂದು ರಾಹುಲ್ ನಂಬಿದ್ದಾರೆ. ಕೆಲವೇ ಸಮಯದಲ್ಲಿ ಮೋದಿ ಪದಚ್ಯುತಿಯಾಗಲಿದೆ ಎಂದು ಅವರು ತಿಳಿದುಕೊಂಡಿದ್ದಾರೆ. ಅದರೆ ಇದು ಕೇವಲ ಅವರ ಭ್ರಮೆ ಎಂದು ಕಿಶೋರ್ ತಿಳಿಸಿದ್ದಾರೆ.
ಒಂದು ಬಾರಿ ರಾಷ್ಟ್ರ ಮಟ್ಡದಲ್ಲಿ ಶೇಕಡಾ 30 ಕ್ಕೂ ಹೆಚ್ಚು ಮತಗಳನ್ನು ಪಡೆದರೆ, ಮತ್ತೆ ಅಷ್ಟು ಅವಸರದಲ್ಲಿ ಅಲ್ಲಿಂದ ಅವರು ಕೆಳಗಿಳಿಯುವುದಿಲ್ಲ.
ಆದ್ದರಿಂದ ಜನರು ಕೋಪಗೊಂಡು, ಪ್ರಧಾನಿ ಮೋದಿಯನ್ನು ಕಿತ್ತೊಗೆಯುವುದಿಲ್ಲ, ಮೋದಿಯನ್ನು ಕಿತ್ತೊಗೆದರೂ, ಬಿಜೆಪಿ ಎಲ್ಲಿಯೂ ಹೋಗಲ್ಲ. ಅವರು ಇಲ್ಲಿಯೇ ಇರುತ್ತಾರೆ. ಮುಂದಿನ ಹಲವು ದಶಕಗಳ ಕಾಲ ಅವರೊಂದಿಗೆ ನೀವು ಹೋರಾಟ ನಡೆಸಬೇಕಾಗಿದೆ ಎಂದು ಕಿಶೋರ್ ಕಾಂಗ್ರೇಸ್ ಗೆ ಕಿವಿ ಮಾತು ಹೇಳಿದ್ದಾರೆ.
ಮೋದಿಯ ಸಾಮರ್ಥ್ಯ ಹಾಗೂ ತಾಕತ್ತನ್ನು ನೀವು ಅಭ್ಯಸಿಸದೆ ಹೋದರೆ, ನೀವು ಅವರನ್ನು ಎದುರಿಸಲಾರಿರಿ… ಸೋಲಿಸಲಾರಿರಿ. ಕಾಂಗ್ರೇಸ್ಸಿನ ಹಲವು ನಾಯಕರು ಸೇರಿದಂತೆ ಬಹಳಷ್ಟು ವಿರೋಧ ಪಕ್ಷದ ನಾಯಕರು, ಮೋದಿಯ ಸಾಮರ್ಥ್ಯ, ಅವರ ಜನಪ್ರಿಯತೆಗೆ ಕಾರಣವಾಗಿರುವ ಅಂಶಗಳನ್ನು ಅಭ್ಯಸಿಸುತಿಲ್ಲ ಎಂದು ಅವರು ಹೇಳಿದರು.
ತೈಲ ಬೆಲೆಯಲ್ಲಿ ಇಷ್ಟು ಅಗಾಧ ಏರಿಕೆಯಾದರೂ ಮೋದಿಯ ಜನಪ್ರಿಯತೆಗೆ ಕುಂದುಂಟಾಗಿಲ್ಲ ಎಂದು ಅವರು ಉದಾಹರಿಸಿದರು.
ಭಾರತದಲ್ಲಿ ಚುಣಾವಣೆ 3/1 ಮತದಾರರು ಹಾಗೂ 3/2 ಮತದಾರರ ಮಧ್ಯೆ ನಡೆಯುತ್ತಿದೆ. ಬಿಜೆಪಿಗೆ ದೇಶದ ಕೇವಲ 3/1 ಭಾಗದಷ್ಟು ಜನರು ಮಾತ್ರ ಓಟು ಹಾಕುತಿದ್ದಾರೆ. ಆದರೆ, ಬಿಜೆಪಿ ವಿರೋಧಿ ಮತಗಳು 3/2 ರಷ್ಟಿದ್ದು ಅದು 10-12 ಪಕ್ಷಗಳ ಮಧ್ಯೆ ಹಂಚಿ ಹೋಗಿದೆ. ಬಿಜೆಪಿ ವಿರೋಧಿ ಮತಗಳು ಇಷ್ಟು ಪಕ್ಷಗಳ ಮಧ್ಯೆ ಹಂಚಿ ಹೋಗಲು ಕಾಂಗ್ರೇಸ್ ದುರ್ಬಲಗೊಂಡಿರುವುದೇ ಕಾರಣ ಎಂದು ಅವರು ವಿವರಿಸಿದರು.