Ad Widget

ಜನ ಸಾಮಾನ್ಯರಿಗೆ ಬೆಲೆಏರಿಕೆಯ ಬಹುದೊಡ್ಡ ಹೊಡೆತ : ಶೀಘ್ರ ಪೆಟ್ರೋಲ್@150, ಡಿಸೇಲ್@140 ಮತ್ತು ಗ್ಯಾಸ್ ಬೆಲೆ 100 ರೂ ಏರಿಕೆ

Screenshot_20211028-131754_Thumbnail Maker
Ad Widget

Ad Widget

Ad Widget

ಈಗಾಗಲೇ ಪೆಟ್ರೋಲ್‌, ಡೀಸೆಲ್‌ ಹಾಗೂ ದೈನಂದಿನ ವಸ್ತುಗಳ ದರ ಏರಿಕೆಯಿಂದ ಹೈರಾಣಾಗಿರುವ ಜನರಿಗೆ ಮತ್ತೊಂದು ಆಘಾತಕಾರಿ ಸುದ್ದಿ ಇಲ್ಲಿದೆ.

Ad Widget

Ad Widget

Ad Widget

Ad Widget

ಪೆಟ್ರೋಲ್‌, ಡೀಸೆಲ್‌ ದರ ಸದ್ಯಕ್ಕೆ ಕಡಿಮೆಯಾಗುವ ಮಾತಿರಲಿ, ಅದು ಇನ್ನಷ್ಟು ಹೆಚ್ಚಾಗಲಿದೆ ಎಂದು ಜಾಗತಿಕ ಹಣಕಾಸು ಸಂಸ್ಥೆ ಗೋಲ್ಡ್‌ಮನ್‌ ಸ್ಯಾಕ್ಸ್‌ ತಿಳಿಸಿದೆ. ಪ್ರಸ್ತುತ ಪ್ರತಿ ಬ್ಯಾರೆಲ್‌ಗೆ 85 ಡಾಲರ್‌ ಇರುವ ಬ್ರೆಂಟ್‌ ಕಚ್ಚಾ ತೈಲ ದರ ಮುಂದಿನ ವರ್ಷ ಶೇ.30ರಷ್ಟು ಹೆಚ್ಚಳದೊಂದಿಗೆ 110 ಡಾಲರ್‌ಗೆ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ಸಂಸ್ಥೆಯ ವರದಿ ತಿಳಿಸಿದೆ. ಬ್ರೆಂಟ್‌ ಕಚ್ಚಾ ತೈಲದ ಅಭಾವ ಕಳೆದ 2013ರಿಂದೀಚೆಗೆ ಗರಿಷ್ಠ ಮಟ್ಟಕ್ಕೆ ತಲುಪಿದೆ. ಹೀಗಾಗಿ ಪ್ರತಿ ಬ್ಯಾರೆಲ್‌ಗೆ ಇದರ ದರ ನೂರರ ಗಡಿ ದಾಟುವುದು ಖಚಿತ ಎಂಬ ಭವಿಷ್ಯವನ್ನು ಮಾರುಕಟ್ಟೆ ತಜ್ಞರು ನುಡಿದಿದ್ದಾರೆ. ಬೇಡಿಕೆ ಮತ್ತು ಪೂರೈಕೆಯಲ್ಲಿ ವ್ಯತ್ಯಾಸ ಉಂಟಾಗಿದೆ. ಬೇಡಿಕೆಯು ಬಹುತೇಕ ಕೋವಿಡ್‌ ಪೂರ್ವ ಮಟ್ಟಕ್ಕೆ ತಲುಪಿದೆ. ಹೀಗಾಗಿ ಕಚ್ಚಾ ತೈಲ ದರ ಮುಂದಿನ ವರ್ಷ ಮತ್ತಷ್ಟು ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.

Ad Widget

Ad Widget

Ad Widget

Ad Widget

ಕಚ್ಚಾ ತೈಲ ದರದಲ್ಲಿ ಶೇ.30 ಹೆಚ್ಚಳವಾದರೆ ಪೆಟ್ರೋಲ್‌ ದರ ಲೀಟರ್‌ಗೆ 150 ರೂ.ಗೆ ಹೆಚ್ಚಳವಾಗಲಿದೆ. ಡೀಸೆಲ್‌ ದರ 140 ರೂ.ಗೆ ಜಿಗಿಯಲಿದೆ. ಜಾಗತಿಕ ಮಟ್ಟದಲ್ಲಿ ಪ್ರತಿ ದಿನಕ್ಕೆ 99 ದಶ ಲಕ್ಷ ಬ್ಯಾರೆಲ್‌ (9.9 ಕೋಟಿ ) ತೈಲಕ್ಕೆ ಬೇಡಿಕೆ ಇದೆ. ಇದು 100 ದಶಲಕ್ಷ ಬ್ಯಾರೆಲ್‌ಗೆ (10 ಕೋಟಿ) ಏರಲಿದೆ ಎಂದು ಗೋಲ್ಡ್‌ಮನ್‌ ಸ್ಯಾಕ್ಸ್‌ ತಿಳಿಸಿದೆ.

Ad Widget

Ad Widget

ಈಗಾಗಲೇ ಬ್ಯಾರಲ್ ಗೆ 2020ರ ಎಪ್ರಿಲ್ನಲ್ಲಿ 19 ಡಾಲರ್ ಇರುವಾಗ ಭಾರತದ 3 ಶೇಖರಣಗಾರದಲ್ಲಿ ಶೇಖರಿಸಿಟ್ಟ ತೈಲವನ್ನು ಕೇಂದ್ರ ಸರ್ಕಾರ ಮಾರಟ ಪ್ರಾರಂಭಿಸಿದೆ. ಮಂಗಳೂರು, ಪಾದೂರು, ವಿಶಾಖಪಟ್ಟನ ಭೂಗರ್ಭ ಶೇಖರಣಗಾರದಲ್ಲಿ ಕೋಟ್ಯಾಂತರ ಲೀಟರ್ ಕಚ್ಚಾತೈಲ ಶೇಖರಿಸಿಟ್ಟಿದೆ. ಅದರ ಮಾರಟ ಈಗಾಗಲೇ ಪ್ರಾರಂಭಿಸಿದೆ.

ಮಧ್ಯಪ್ರದೇಶದ ಗಡಿ ಜಿಲ್ಲೆಅನುಪ್ಪುರ್‌ನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ 120 ರೂ.ಗೆ ಹಾಗೂ ಡೀಸೆಲ್‌ ದರ 110 ರೂ.ಗೆ ಜಿಗಿದಿದೆ. ಇದೇ ರೀತಿ ಬಾಲಾಘಾಟ್‌ನಲ್ಲಿ ಪೆಟ್ರೋಲ್‌ ದರ 119 ರೂ.ಗೆ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ 111.70 ರೂ.ಗೆ ಜಿಗಿದಿದೆ. ಬುಧವಾರ 35 ಪೈಸೆ ವೃದ್ಧಿಸಿದೆ. ಡೀಸೆಲ್‌ ದರದಲ್ಲಿ 37 ಪೈಸೆ ಹೆಚ್ಚಳವಾಗಿದ್ದು, 102.60 ರೂ.ಗೆ ತಲುಪಿದೆ.

ಜನತೆಯ ಮೇಲೆ ಪರಿಣಾಮ?
ತೈಲಕ್ಕಾಗಿ ಆಮದು ಅವಲಂಬಿಸಿರುವುದರಿಂದ ಭಾರತದ ರೀಟೇಲ್‌ ದರದಲ್ಲೂ ಹೆಚ್ಚಳವಾಗಲಿದೆ. ದರ ಹೆಚ್ಚಳದ ಹೊರೆಯನ್ನು ನೇರ ಗ್ರಾಹಕರಿಗೆ ತೈಲ ಕಂಪನಿಗಳು ವರ್ಗಹಿಸಲಿದೆ.

ಸಾಗಣೆ ವೆಚ್ಚ, ಕಚ್ಚಾ ವಸ್ತುಗಳ ದರ ಏರಿಕೆಯಿಂದ ಸರಕು-ಸೇವೆಗಳು ದುಬಾರಿಯಾಗಲಿದೆ.

ಇದರಿಂದ ಮಧ್ಯಮ ವರ್ಗದ ಜನತೆ, ಜನ ಸಾಮಾನ್ಯರಿಗೆ ದೈನಂದಿನ ಬದುಕು ದುಸ್ತರವಾಗಲಿದೆ.

ಪೆಟ್ರೋಲ್‌- ಡೀಸೆಲ್‌ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಒತ್ತಡ ಸರ್ಕಾರದ ಮೇಲೆ ಹೆಚ್ಚಬಹುದು.

ಗ್ಯಾಸ್ @1000: ದೀಪಾವಳಿಗೂ ಮುನ್ನವೇ ಅಡುಗೆ ಅನಿಲ ದರ ಭಾರಿ ಏರಿಕೆಯಾಗುವ ಸಾಧ್ಯತೆಯಿದೆ. ಪ್ರಸ್ತುತ ತೈಲ ಕಂಪನಿಗಳು ಎಲ್‌ಪಿಜಿ ಪೂರ್ಣ ಪ್ರಮಾಣದ ದರ ಏರಿಕೆಯನ್ನು ತಡೆ ಹಿಡಿದಿದ್ದು, ಸರಕಾರದ ಅನುಮತಿಸಿದರೆ ನ.1ಕ್ಕೆ 100ರೂ. ಏರಿಕೆ ಪ್ರಕಟಿಸುವ ಸಾಧ್ಯತೆಯಿದೆ.

ಈ ಏರಿಕೆಯೊಂದಿಗೆ ವರ್ಷದಲ್ಲಿ 5ನೇ ಬಾರಿ ಎಲ್‌ಪಿಜಿ ದರ ಹೆಚ್ಚಳವಾದಂತಾಗಲಿದೆ. ಕಳೆದ ಜುಲೈನಿಂದ ಗೃಹ ಬಳಕೆ ಸಿಲಿಂಡರ್‌ ದರ 90 ರೂ. ಹೆಚ್ಚಳವಾಗಿದ್ದು, 900 ರೂ. ದಾಟಿದೆ. ಸದ್ಯದಲ್ಲೇ 1,000ಗೆ ತಲುಪಿದರೆ ಅಚ್ಚರಿಯಿಲ್ಲ.

Ad Widget

Leave a Reply

Recent Posts

Belthangady | ಕುತಂತ್ರಿ ಬುದ್ದಿ ಬಿಟ್ಟು ಚುನಾವಣೆಯನ್ನು ಚುನಾವಣೆಯ ರೀತಿ ಎದುರಿಸಿ – ಜನಾರ್ಧನ ಪೂಜಾರಿಗೆ ಹಿಂದೂ ವಿರೋಧಿಯೆಂದು ಅಪಪ್ರಚಾರ ಮಾಡಿದ ತಂಡವೇ ಬೆಳ್ತಂಗಡಿಯ ರಕ್ಷಿತ್ ಶಿವರಾಂ ಗೂ ಮಾಡುತ್ತಿದೆ : ಖಡಕ್ ಎಚ್ಚರಿಕೆ ಕೊಟ್ಟ ‘ನಮ ಬಿಲ್ಲವೆರ್’

error: Content is protected !!
%d bloggers like this: