Ad Widget

ಎಂ.ಡಿ ಪೀಡಿಯಾಟ್ರಿಕ್ಸ್ ಪರೀಕ್ಷೆಯಲ್ಲಿ ಪುತ್ತೂರಿನ ವಿದ್ಯಾರ್ಥಿನಿ ಚೈತ್ರಾ .ಪಿ ಗೆ ಪ್ರಥಮ ರ್ಯಾಂಕ್ -ತನ್ನ ಹಿರಿಯ ವಿದ್ಯಾರ್ಥಿನಿಯ ಅದ್ಭುತ ಸಾಧನೆಗೆ ವಿವೇಕಾನಂದ ಕಾಲೇಜಿನಿಂದ ಅಭಿನಂದನೆ

Chaitra-P
Ad Widget

Ad Widget

Ad Widget

ಪುತ್ತೂರು: ಕರ್ನಾಟಕ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ನಡೆಸಿದ ಎಂ.ಡಿ ಪೀಡಿಯಾಟ್ರಿಕ್ಸ್ ಪರೀಕ್ಷೆಯಲ್ಲಿ  ಪುತ್ತೂರು ತಾಲೂಕಿನ ದೇಲಂಪಾಡಿಯ ಪಡಾರು ನಿವಾಸಿ ಚೈತ್ರಾ ಪಿಯವರು ಪ್ರಥಮ ರ್ಯಾಂಕ್ ನ್ನು ಗಳಿಸಿ ಚಿನ್ನದ ಪದಕವನ್ನು ಪಡೆದಿರುತ್ತಾರೆ.

Ad Widget

Ad Widget

Ad Widget

Ad Widget

Ad Widget

 ಈಕೆ ವಿವೇಕಾನಂದ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿನಿ .  ಚೈತ್ರಾ ಪಿ ರವರು ತನ್ನ ಪಿಯುಸಿ ಶಿಕ್ಷಣವನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ 2010ರಲ್ಲಿ ಪೂರೈಸಿದರು.  ಬಳಿಕ ಎಂಬಿಬಿಎಸ್ ಪದವಿಯನ್ನು ಹಾಸನ ಮೆಡಿಕಲ್ ಕಾಲೇಜಿನಲ್ಲಿ ಪಡೆದು ಎಂ.ಡಿ ಪೀಡಿಯಾಟ್ರಿಕ್ಸ್‍ನ್ನು ಮಂಗಳೂರಿನ ಎ.ಜೆ ಸಂಸ್ಥೆಯಲ್ಲಿ ಪೂರೈಸಿರುತ್ತಾರೆ.

Ad Widget

Ad Widget

Ad Widget

Ad Widget

Ad Widget

ಪ್ರಸ್ತುತ ಯೆನೆಪೋಯಾ ಮೆಡಿಕಲ್ ಕಾಲೇಜಿನಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಕೆ ದೇಲಂಪಾಡಿಯ ಪಡಾರು ತಿರುಮಲೇಶ್ವರ ಭಟ್ ಮತ್ತು ಜಯಶ್ರೀ ಟಿ ಭಟ್ ದಂಪತಿಗಳ ಪುತ್ರಿ. ವಿದ್ಯಾರ್ಥಿನಿಯ ಸಾಧನೆಗೆ ವಿವೇಕಾನಂದ  ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.

Ad Widget

Leave a Reply

Recent Posts

5 guarantee | ಖಚಿತವಾದ ಪಂಚ ಯೋಜನೆಗಳು: ಬಡವರ-ಮಧ್ಯಮ ವರ್ಗದವರ ಕಲ್ಯಾಣಕ್ಕೆ ಕ್ರಾಂತಿಕಾರಕ ಮುನ್ನುಡಿ ಬರೆದ ಕಾಂಗ್ರೆಸ್ ಸರ್ಕಾರ – ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯರಿಂದ ಘೋಷಣೆ : 5 ಯೋಜನೆಗಳ ಪೂರ್ತಿ ವಿವರ ಇಲ್ಲಿದೆ : ನಳಿನ್, ಸಿ.ಟಿ.ರವಿ, ಬಜರಂಗದಳದ ಪದವಿದರರಿಗೂ ನಮ್ಮ ಯೋಜನೆ ಫ್ರೀ ಎಂದು ಕಾಲೆಳೆದ ಕಾಂಗ್ರೇಸ್..!

error: Content is protected !!
%d bloggers like this: