ಮಂಗಳೂರು : ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಮುಖ ಆರೋಪಿ ರಾಜೇಶ್ ಭಟ್ ಎಂಬವರು ತಲೆಮರೆಸಿಕೊಳ್ಳಲು ಸಹಕರಿಸಿದ ಆರೋಪದಡಿ ಮಂಗಳೂರಿನ ನಿವಾಸಿಯೊಬ್ಬರನ್ನು ಪೊಲೀಸರು ಅ 27 ರಂದು ಬಂಧಿಸಿದ್ದಾರೆ.
ಆರೋಪಿ ರಾಜೇಶ್ ಭಟ್ ಅವರ ಸಹಾಯಕರಾಗಿದ್ದ ಮಂಗಳೂರಿನ ಬೊಂದೇಲ್ ನಿವಾಸಿ ಅನಂತ ಭಟ್ (48) ಬಂಧಿತ ಆರೋಪಿ. ಅ 18 ರಂದು ಸಂತ್ರಸ್ತ ವಿದ್ಯಾರ್ಥಿನಿಯೂ ರಾಜೇಶ್ ಭಟ್ ವಿರುದ್ದ ಮಹಿಳಾ ಠಾಣೆಗೆ ದೂರು ನೀಡಿದ್ದರು. ಆ ಬಳಿಕ ಆರೋಪಿಯೂ ಪೊಲೀಸರಿಗೆ ಸಿಗದೇ ತಲೆಮರೆಸಿಕೊಂಡಿದ್ದಾರೆ.
ಸದ್ಯ ಪೊಲೀಸರು ಬಂಧಿಸಿರುವ ಆರೋಪಿ ಅನಂತಭಟ್ ಆರೋಪಿ ರಾಜೇಶ್ ಭಟ್ ರವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ, ಪ್ರಕರಣ ದಾಖಲಾಗುತ್ತಲೇ, ಆತನನ್ನು ವಾಹನದಲ್ಲಿ ದೂರದ ಸ್ಥಳಕ್ಕೆ ಬಿಟ್ಟು ತಲೆಮರೆಸಿಕೊಳ್ಳಲು ಸಹಕರಿಸಿದ್ದಾರೆ. ಅಲ್ಲದೇ, ರಾಜೇಶ್ ಭಟ್ ಬಳಸುತ್ತಿದ್ದ ಕಾರು ಮತ್ತು ಮೊಬೈಲ್ ಫೋನ್ ಬಚ್ಚಿಟ್ಟಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.

ಅನಂತ್ ಭಟ್ ಬಂಧನದ ಬಳಿಕ ಆತನ ಮೂಲಕ ರಾಜೇಶ್ ಭಟ್ ರವರ Toyota Etios ಕಾರು ಮತ್ತು ಮೊಬೈಲ್ ಫೋನ್ ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಇಡೀ ಪ್ರಕರಣದಲ್ಲಿ ಅನಂತ್ ಭಟ್ ರವರ ಪಾತ್ರವನ್ನು ತಿಳಿದುಕೊಳ್ಳಲು ಹಾಗೂ ಪ್ರಮುಖ ಆರೋಪಿ ರಾಜೇಶ್ ಭಟ್ ರವರನ್ನು ಪತ್ತೆ ಹಚ್ಚುವ ಸಲುವಾಗಿ ದಸ್ತಗಿರಿ ಮಾಡಲಾಗಿರುತ್ತದೆ ಎಂದು ಹೇಳಲಾಗಿದೆ.

ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪವಿತ್ರಾ ಅಚಾರ್ಯ ಎಂಬ ಮಹಿಳೆಯ ಸಹಿತ ಮೂವರನ್ನು ಬಂಧಿಸಿದು , ಅನಂತ್ ಭಟ್ ದಸ್ತಗಿರಿ ನಾಲ್ಕನೇಯದಾಗಿರುತ್ತಾದೆ. ಜೊತೆಗೆ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ತನಿಖೆಯಲ್ಲಿ ನಿರ್ಲಕ್ಷ್ಯ ವಹಿಸಿದ ಆರೋಪದಡಿ ಅಮಾನತುಗೊಳಿಸಲಾಗಿದೆ