ಮಡಿಕೇರಿ: ಗರಿಷ್ಠ ಸಂಖ್ಯೆಯ ಪ್ರಾಣಿಗಳು ಮತ್ತು ಅವುಗಳ ಮರಿಗಳನ್ನು ಗುರುತಿಸಿ ಹೇಳುವುದರ ಮೂಲಕ 6 ವರ್ಷದ ವೈಷ್ಣವಿ.ಕೆ.ಡಿ. ಇಂಡಿಯಾ ಬುಕ್ ಆಫ್ ರೆಕಾರ್ಡ್ ಲ್ಲಿ ಸ್ಥಾನ ಪಡೆದಿದ್ದಾಳೆ.

ಚಿಕ್ಕ ವಯಸ್ಸಿನಲ್ಲಿ ಅಭೂತಪೂರ್ವ ಸಾಧನೆ ಮಾಡಿದ ಕೊಡಗಿನ ಬಾಲಕಿ ವೈಷ್ಣವಿ ಕೆ.ಡಿ ಕೇವಲ 2 ನಿಮಿಷ 18 ಸೆಕೆಂಡ್ ಗಳಲ್ಲಿ 120 ಪ್ರಾಣಿ ಪಕ್ಷಿಗಳು ಮತ್ತು ಅವುಗಳ ಮರಿಗಳ ಹೆಸರನ್ನು ಗುರುತಿಸಿ ಹೇಳಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ
ಆ ಮೂಲಕ ಪ್ರತಿಷ್ಠಿತ ಇಂಡಿಯನ್ ಬುಕ್ಸ್ ಆಫ್ ರೆಕಾರ್ಡ್ಸ್ ನಲ್ಲಿ ಹೆಸರು ದಾಖಲಿಸಿದ್ದಾಳೆ.
ಇವಳು ಕೂಡಕಂಡಿ ಶ್ರೀಮತಿ ಓಂಶ್ರೀ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು,ಮಡಿಕೇರಿಯ ಸಹ ಪ್ರಾಧ್ಯಾಪಕ ಡಾ.ದಯಾನಂದ. ಕೆ.ಸಿ ಯವರ ಪುತ್ರಿ. ವೈಷ್ಣವಿ ಮಡಿಕೇರಿ ಸಂತ ಜೋಸೆಫರ ಶಾಲೆಯ ಒಂದನೆ ತರಗತಿಯ ವಿದ್ಯಾರ್ಥಿನಿ.