ಪುತ್ತೂರು: ಬಡಗನ್ನೂರು ಗ್ರಾಮದ ಮೈಂದನಡ್ಕದಲ್ಲಿ ಆಟೋ ರಿಕ್ಷಾದಲ್ಲಿ ಸಂಚರಿಸುತಿದ್ದ ಮಹಿಳೆಗೆ ಸಹ ಪ್ರಯಾಣಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಗೆ ಪುತ್ತೂರಿನ ಹೆಚ್ಚುವರಿ ಸಿವಿಲ್ ಮತ್ತು ಜೆಎಫ್‌ಎಂಸಿ ನ್ಯಾಯಾಲಯವೂ ಅ 27ರಂದು ಜಾಮೀನು ಮಂಜೂರು ಮಾಡಿದೆ
ಪದಡ್ಕ ನಿವಾಸಿ ಅನಿಲ್ ಜಾಮೀನಿನಲ್ಲಿ ಬಿಡುಗಡೆಯಾದ ಆರೋಪಿ. ಇವರ ವಿರುದ್ದ ಸಂಪ್ಯ ಠಾಣೆಯಲ್ಲಿ ಆ 26 ರಂದು ಪ್ರಕರಣ ದಾಖಲಾಗಿತ್ತು. ಅ.27ರಂದು ಮಧ್ಯಾಹ್ನ ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆರೋಪಿ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದು ವಿಚಾರಣೆ ನಡೆಸಿದ ನ್ಯಾಯಾಲಯವೂ ಜಾಮೀನು ಮಂಜೂರು ಮಾಡಿದೆ.
ಆರೋಪಿ ಪರ ಚಾಣಕ್ಯ ಲಾ ಚೇಂಬರ್ಸ್‌ನ ನ್ಯಾಯವಾದಿಗಳಾದ ಶ್ಯಾಮ್ ಪ್ರಸಾದ್ ಕೈಲಾರ್, ಚೇತನಾ ವಿ.ಎನ್, ವಿಮಲೇಶ್ ಸಿಂಗಾರಕೋಡಿ, ಅಂಕಿತಾ ಶರ್ಮ ವಾದಿಸಿದರು.
