Ad Widget

Big Breaking : ಪುತ್ತೂರು : ದಲಿತ ಬಾಲಕಿ ಅತ್ಯಾಚಾರ ಪ್ರಕರಣ – ನ್ಯಾಯಾಲಯಕ್ಕೆ ಶರಣಾದ ಕುದ್ಕಾಡಿ ನಾರಾಯಣ ರೈ

InShot_20211027_151237625
Ad Widget

Ad Widget

Ad Widget

ಪುತ್ತೂರು :ಅ. 27 : ಪುತ್ತೂರು ತಾಲೂಕಿನ ಬಡಗನ್ನೂರಿನ ಅಪ್ರಾಪ್ತ ದಲಿತ ಬಾಲಕಿಯ ಅತ್ಯಾಚಾರ ಹಾಗೂ ಆಕೆ ಮಗುವಿಗೆ ಜನ್ಮ ನೀಡಿದ ಪ್ರಕರಣದಲ್ಲಿ ಆರೋಪಿ ಎಂದು ಬಾಲಕಿ ಹೆಸರಿಸಿರುವ ಕುದ್ಕಾಡಿ ನಾರಾಯಣ ರೈ ಯವರು ಇಂದು ಪುತ್ತೂರಿನ ನ್ಯಾಯಾಲಯಕ್ಕೆ ಶರಣರಾಗಿದ್ದಾರೆ.

Ad Widget

Ad Widget

Ad Widget

Ad Widget

ನಾರಾಯಣ ರೈ ಯವರು ತನ್ನ ಪರ ವಕೀಲರಾದ ಮಹೇಶ್ ಕಜೆಯವರ ಜತೆ ನ್ಯಾಯಾಲಯಕ್ಕೆ ಹಾಜರಾಗಿ ನ್ಯಾಯಾಧೀಶರ ಮುಂದೆ ಶರಣರಾದರು.

Ad Widget

Ad Widget

Ad Widget

Ad Widget

ಬಡಗನ್ನೂರಿನ 17ರ ಹರೆಯದ ಅಪ್ರಾಪ್ತ ದಲಿತ ಸಮುದಾಯದ ಬಾಲಕಿಯು ಸೆ.5 ರಂದು ಮಗುವಿಗೆ ಜನ್ಮ ನೀಡಿದ್ದರು . ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಂತ್ರಸ್ತೆಯ ಸಹೋದರನನ್ನೆ ಈ ಪ್ರಕರಣದ ಆರೋಪಿ ಎಂದು ಬಂಧಿಸಲಾಗಿತ್ತು.

ಸೆ. 23ರಂದು ಸಂತ್ರಸ್ತೆಯು ನ್ಯಾಯಾಲಯಕ್ಕೆ ಹಾಜರಾಗಿ 164ರಡಿ ಹೇಳಿಕೆ ನೀಡಿದ್ದು ಅದರಲ್ಲಿ ಕುದ್ಕಾಡಿ ನಾರಾಯಣ ರೈಯವರೇ ಅತ್ಯಾಚಾರ ಎಸಗಿರುವುದಾಗಿ ಆರೋಪಿಸಿದ್ದರು.

Ad Widget

Ad Widget

ಆ ಬಳಿಕ ಬಂಧನ ಭೀತಿ ಎದುರಿಸುತ್ತಿದ್ದ ನಾರಾಯಣ ರೈ ತಲೆಮರೆಸಿಕೊಂಡಿದ್ದು ತನ್ನ ವಕೀಲ ಮಹೇಶ್ ಕಜೆಯವರ ಮೂಲಕ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.

ಕೆಲ ದಿನಗಳ ಹಿಂದೆ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿತ್ತು.

ಆ ಬಳಿಕ ಅವರು ಅಡಗಿಕೊಂಡಿದ್ದರು ಎಂದು ಶಂಕಿಸಲಾಗಿದ್ದ ಈಶ್ವರಮಂಗಲದ ಮನೆಯೊಂದರ ಯಜಮಾನನ ಮನೆಗೆ ಪೋಲಿಸರು ನೊಟೀಸ್ ಜಾರಿ ಮಾಡಿದ್ದರು ಎಂದು ಹೇಳಲಾಗತ್ತಿದೆ.

ಬಳಿಕದ ಬೆಳವಣಿಗೆಯಲ್ಲಿ ನಾರಾಯಣ ರೈಯವರು ಇಂದು ನ್ಯಾಯಾಲಯಕ್ಕೆ ಹಾಜರಾದರು. ಏತನ್ಮಧ್ಯೆ ನಾರಾಯಣ ರೈ ಬಂಧನಕ್ಕೆ ಆಗ್ರಹಿಸಿ ದಲಿತ ಸಂಘಟನೆಗಳು ಹಾಗೂ ವಿಪಕ್ಷ ಕಾಂಗ್ರೇಸ್ ಆಗ್ರಹಿಸಿತ್ತು.

ದಲಿತ ಸಮನ್ವಯ ಸಮಿತಿಯೂ ಅ. 21 ರಂದು ಸಂಪ್ಯ ಠಾಣೆ ಚಲೋ ಬೃಹತ್ ಪ್ರತಿಭಟನೆ ಕೂಡ ಮಾಡಿತ್ತು.

Ad Widget

Leave a Reply

Recent Posts

ಯುವಕರಿಗೆ ಉದ್ಯೋಗ ಸೃಷಿಸಿಲು ಇಂಡಸ್ಟ್ರೀಯಲ್ ಏರಿಯಾಕ್ಕೆ 100 ಎಕ್ರೆ ಜಾಗ ಗುರುತಿಸಲಾಗಿದೆ : ಮಠಂದೂರು | ಮುಂದಿನ ಬಾರಿ ತ್ರಿಬಲ್‌ ಇಂಜಿನ್‌ ಸರಕಾರ ಕೆಲಸ ಮಾಡಬೇಕು : ಡಾ| ಎಂ.ಕೆ .ಪ್ರಸಾದ್‌ | ವಾಹನ ಜಾಥ ನೋಡಿ ಕಾಂಗ್ರೆಸ್ಸಿಗರಿಗೆ ನಡುಕ ಹುಟ್ಟಿದೆ : ಸಹಜ್‌ ರೈ

error: Content is protected !!
%d bloggers like this: