ಪುತ್ತೂರು: ಬಹಳಷ್ಟು ಚರ್ಚೆ , ಪ್ರತಿಭಟನೆ, ಅರೋಪಗಳಿಗೆ ಗ್ರಾಸ ಒದಗಿಸಿದ ಪುತ್ತೂರು ತಾಲೂಕು ಬಡಗನ್ನೂರಿನ ಅಪ್ರಾಪ್ತ ದಲಿತ ಬಾಲಕಿಯ ಅತ್ಯಾಚಾರ ಹಾಗೂ ಆಕೆ ಮಗುವಿಗೆ ಜನ್ಮ ನೀಡಿದ ಪ್ರಕರಣದ ಆರೋಪಿಯನ್ನು ಪುತ್ತೂರು ನ್ಯಾಯಾಲಯವೂ ಎರಡು ದಿನದ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಅ 27 ರಂದು ಆದೇಶಿಸಿತ್ತು.
ಪುತ್ತೂರು ತಾಲೂಕು ಪಡವನ್ನೂರು ಗ್ರಾಮದ ನಿವಾಸಿ ಕುದ್ಕಾಡಿ ನಾರಾಯಣ ರೈ (73) ಜೈಲುಪಾಲಾದ ಆರೋಪಿ. ಇವರ ವಿರುದ್ದ ಅವರ ತೋಟಕ್ಕೆ ಕೆಲಸಕ್ಕೆ ಬರುತ್ತಿದ್ದ 17 ರ ಹರೆಯದ ಬಾಲಕಿ ಅತ್ಯಾಚಾರದ ಗಂಭೀರ ಆರೋಪ ಮಾಡಿದ್ದರು. ಸೆ. 5 ರಂದು ಸಂತ್ರಸ್ತ ಬಾಲಕಿಯೂ ಮಗುವಿಗೆ ಜನ್ಮ ನೀಡಿದ್ದರು. ಅದಾದ 18 ದಿನಗಳ ಬಳಿಕ ಸಂತ್ರಸ್ತ ಬಾಲಕಿಯೂ ನ್ಯಾಯಾಲಯದಲ್ಲಿ 164ರಡಿ ನೀಡಿದ ಹೇಳಿಕೆಯಲ್ಲಿ ನಾರಾಯಣ ರೈ ತನ್ನ ಮೇಲೆ ಅತ್ಯಾಚಾರ ಎಸಗಿ ಮಗುವಿನ ಜನನಕ್ಕೆ ಕಾರಣರಾಗಿದ್ದಾರೆ ಎಂದು ಆರೋಪಿಸಿದ್ದರು.
ಅದಾದ ಬಳಿಕ ತಲೆಮರೆಸಿಕೊಂಡಿದ್ದ ರೈಯವರು ತಮ್ಮ ವಕೀಲರ ಮೂಲಕ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಏತನ್ಮಧ್ಯೆ ಅವರ ಬಂಧನಕ್ಕೆ ಒತ್ತಾಯಿಸಿ ದಲಿತ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದವು. ವಿಪಕ್ಷ ಕಾಂಗ್ರೇಸ್ ಕೂಡ ಅವರ ಬಂಧನಕ್ಕೆ ಅಗ್ರಹಿಸಿತ್ತು. ಅಲ್ಲದೇ, ಅವರನ್ನು ರಾಜಕೀಯ ಪ್ರಭಾವ ಬಳಸಿ ಬಂಧನದಿಂದ ರಕ್ಷಿಸಲಾಗುತ್ತಿದೆ ಎಂದು ಆರೋಪಿಸಿತ್ತು.
ಏತನಧ್ಯೆ ಆರೋಪಿಯೂ ಪುತ್ತೂರು ನ್ಯಾಯಾಲಯಕ್ಕೆ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯೂ ನಾಲ್ಕು ದಿನಗಳ ಹಿಂದೆ ತಿರಸ್ಕಾರಗೊಂಡಿತ್ತು. ಇಂದು ಮಧ್ಯಾಹ್ನ ನಾಟಕೀಯ ಬೆಳವಣಿಗೆಯೊಂದರಲ್ಲಿ ನಾರಾಯಣ ರೈಯವರು ತಮ್ಮ ವಕೀಲರ ಜತೆ ಆಗಮಿಸಿ ನ್ಯಾಯಾಲಯಕ್ಕೆ ಶರಣಾದರು . ಬಳಿಕ ಅವರ ವಕೀಲರು ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸಿದರು. ಇದಕ್ಕೆ ಪೊಲೀಸರು ಆಕ್ಷೇಪ ಸಲ್ಲಿಸಿದರು. ತನಿಖೆಗೆ ನಾರಾಯಣ ರೈವರ ಅಗತ್ಯವಿದೆ ಎಂದು ಪೊಲೀಸರು ಮಾಡಿದ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯವೂ ಅವರನ್ನು ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು.
ಇದನ್ನೂ ಓದಿ : Big Breaking : ಪುತ್ತೂರು : ದಲಿತ ಬಾಲಕಿ ಅತ್ಯಾಚಾರ ಪ್ರಕರಣ – ನ್ಯಾಯಾಲಯಕ್ಕೆ ಶರಣಾದ ಕುದ್ಕಾಡಿ ನಾರಾಯಣ ರೈ