ಬೆಂಗಳೂರು : ಅ 26 : ಹೊಸ ವಾಹನಗಳನ್ನು ಖರೀದಿಸಿದವರು ಅದರ ನೋಂದಣಿಗೆ ಸಾರಿಗೆ ಇಲಾಖೆ ಕಛೇರಿಗೆ (RTO) ಪದೆ ಪದೆ ಅಲೆಯುವುದು ಇನ್ನು ಮುಂದೆ ತಪ್ಪಲಿದೆ. ಕೇಂದ್ರದ ಮೋದಿ ಸರಕಾರ ಮೋಟಾರು ವಾಹನ ನಿಯಮಾವಳಿಗೆ ತಿದ್ದುಪಡಿ ತಂದಿದ್ದು ಅದರಲ್ಲಿ ಸೂಚಿಸಿದ ನಿಯಾಮವಳಿಯಂತೆ ಹೊಸ ವಾಹನಗಳ ನೋಂದಣಿಗೆ ಅರ್ ಟಿ ಓ ಕಛೇರಿಗೆ ಹಾಜರುಪಡಿಸುವ ಅಗತ್ಯವಿಲ್ಲ ಎಂದು ತಿಳಿಸಿದೆ.
ಈ ನಿಯಮದ ಜಾರಿಗೆ ಸಾರಿಗೆ ಇಲಾಖೆ ಆಯುಕ್ತರು ಸೋಮವಾರ ಆದೇಶ ಹೊರಡಿಸಿದ್ದಾರೆ. ಅಧಿಕೃತ ಮಾರಾಟಗಾರರಿಂದ ಖರೀದಿಸಿದ ಸಂಪೂರ್ಣವಾಗಿ ನಿರ್ಮಿತವಾಗಿರುವ ವಾಹನಗಳನ್ನು ಪ್ರಾದೇಶಿಕ ಸಾರಿಗೆ ಕಚೇರಿಗೆ ಕೊಂಡೊಯ್ಯದೆ ನೋಂದಣಿ ಮಾಡಿಸಿಕೊಳ್ಳುವ ವ್ಯವಸ್ಥೆಯನ್ನು ತಕ್ಷಣದಿಂದಲೇ ಜಾರಿಗೊಳಿಸಿ ಎಂದು ಅದೇಶದಲ್ಲಿ ಅವರು ಉಲ್ಲೇಖಿಸಿದ್ದಾರೆ.
ಮಾರಾಟಗಾರರು (ಡೀಲರ್) ಹೊಸ ವಾಹನದ ಎಲ್ಲ ವಿವರಗಳನ್ನು ವಾಹನ್ -4 ಪೋರ್ಟಲ್ ಗಳಲ್ಲಿ ನಮೊದಿಸಿ ನೋಂದಣಿ ತೆರಿಗೆ ಮತ್ತು ಶುಲ್ಕಗಳನ್ನು ಅನ್ ಲೈನ್ ಮೂಲಕವೇ ಪಾವತಿಸಿ ಅರ್ಜಿಯನ್ನು ಸಂಬಂಧಪಟ್ಟ ನೋಂದಣಿ ಪ್ರಾಧಿಕಾರಕ್ಕೆ ಸಲ್ಲಿಸಬಹುದು. ಆನ್‌ಲೈನ್‌ನಲ್ಲಿ ಸ್ವೀಕರಿಸಿದ ಅರ್ಜಿಗಳನ್ನು ಆನ್‌ಲೈನ್ ನಲ್ಲಿಯೇ ಪರಿಶೀಲಿಸಿ ನೋಂದಣಿ ಪ್ರಾಧಿಕಾರವು ಅನುಮೋದನೆ ನೀಡುತ್ತದೆ ಬಳಿಕ ನೋಂದಣಿ ಸಂಖ್ಯೆಯನ್ನು ಹಂಚಿಕೆ ಮಾಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಯಾರಿಕಾ ಹಂತದಲ್ಲಿಯೇ ರಸ್ತೆ ಬಳಕೆಗೆ ಯೋಗ್ಯವಾಗುವಂತೆ ಸಂಪೂರ್ಣವಾಗಿ ನಿರ್ಮಿತವಾಗಿರುವ ಹಾಗೂ ಅಧಿಕೃತ ಮಾರಾಟಗಾರರಿಂದ ಖರೀದಿಸದ ಹೊಸ ವಾಹನಗಳನ್ನು ಪ್ರಾದೇಶಿಕ ಸಾರಿಗೆ ಕಛೇರಿಗೆ ಕೊಂಡೊಯ್ಯಬೇಕಿತ್ತು. ಅಲ್ಲಿ ಮೋಟಾರು ವಾಹನ ನಿರೀಕ್ಷಕರು ಪರಿವೀಕ್ಷಣೆ ಮಾಡಿದ ನಂತರವೇ ನೋಂದಣಿ ಮಾಡುವ ಪದ್ದತಿ ಜಾರಿಯಲ್ಲಿತ್ತು.

ಹೊಸ ವಾಹನದ ಎಲ್ಲ ವಿವರಗಳನ್ನು ಮೋಟಾರು ವಾಹನ ನಿರೀಕ್ಷರು ವಾಹನ್ – 4 ಪೋರ್ಟಲ್‌ನಲ್ಲಿ ಪರಿವೀಕ್ಷಣೆ ಮಾಡಿದ ನಂತರವೇ ನಮೂದಿಸಿ, ನೋಂದಣಿ ತೆರಿಗೆ ಮತ್ತು ನೋಂದಣಿ ಮಾಡುವ ಪದ್ಧತಿ ಜಾರಿಯಲ್ಲಿತ್ತು. ಇದೀಗ ಕೇಂದ್ರ ಮೋಟಾರು ವಾಹನ ನಿಯಮಾವಳಿಗೆ ತಿದ್ದುಪಡಿ ತಂದು, ಹೊಸ ವಾಹನಗಳ ನೋಂದಾಣಿಗೆ ಅರ್ ಟಿ ಓ ಅಧಿಕಾರಿಗಳ ಮುಂದೆ ಹಾಜರುಪಡಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ