ಪುತ್ತೂರು: ಅಕ್ಟೋಬರ್ 27 ರಂದು ಬೆಂಗಳೂರಿನ ಬಸವನಗುಡಿ ಅಕ್ವಾಟಿಕ್ ಸೆಂಟರ್‌ನಲ್ಲಿ ನಡೆಯಲಿರುವ ಪ್ರತಿಷ್ಠಿತ 74 ನೇ ಎಸ್‌ಎಫ್‌ಐ ಸೀನಿಯರ್ ನ್ಯಾಶನಲ್ ಅಕ್ವಾಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಸೇವಾ ಈಜು ತಂಡವನ್ನು ಪ್ರತಿನಿಧಿಸಲು ಭಾರತೀಯ ನೌಕಾಪಡೆಯ ಪುತ್ತೂರು ಈಜುಗಾರ ವೈಷ್ಣವ್ ಹೆಗ್ಡೆ ಆಯ್ಕೆಯಾಗಿದ್ದಾರೆ.
ವೈಷ್ಣವ್ ಹೆಗ್ಡೆ 50 ಮತ್ತು 100 ಮೀಟರ್ ಬ್ರೀಸ್ಟ್ರೋಕ್‌ನಲ್ಲಿ ಭಾಗವಹಿಸಲಿದ್ದಾರೆ.
ಭಾರತೀಯ ನೌಕಾಪಡೆಯ ಈಜುಪಟುವಾದ ವೈಷ್ಣವ್ ಹೆಗ್ಡೆ ಅವರು ಬಾಲವನದ ಪುತ್ತೂರು ಅಕ್ವಟಿಕ್ ಕ್ಲಬ್‌ನ ಸದಸ್ಯರಾಗಿದ್ದಾರೆ.

ವೈಷ್ಣವ್ , ಭಾರತ ಈಜು ತಂಡದ ಕೋಚ್ ಆಗಿರುವ ಪಾರ್ಥ ವಾರಣಾಶಿ, ತರಬೇತುದಾರ ನಿರೂಪ್, ರೋಹಿತ್, ದೀಕ್ಷಿತ್ ಅವರಿಂದ ಡಾ. ಶಿವರಾಮ ಕಾರಂತ ಬಾಲವನ ಈಜುಕೊಳ ಪುತ್ತೂರು ಮತ್ತು ಮಂಗಳೂರಿನ ಸೇಂಟ್ ಅಲೋಶಿಯಸ್ ಈಜುಕೊಳದಲ್ಲಿ ತರಬೇತಿ ಪಡೆದಿದ್ದಾರೆ.

ಈ ಸ್ಪರ್ಧೆಯಲ್ಲಿ 2020ರ ಒಲಿಂಪಿಕ್ಸ್ ಸ್ಪರ್ಧಿಗಳಾದ ಸಜನ್ ಪ್ರಕಾಶ್ ಮತ್ತು ಶ್ರೀಹರಿ ನಟರಾಜ್ ಸ್ಪರ್ಧಿಸಲಿದ್ದು. ನೌಕೆ , ಭೂಸೇನೆ, ವಾಯುಸೇನೆ, ಪೋಲೀಸ್ , ರೈಲ್ವೇ ಸಹಿತ ರಾಜ್ಯದ ತಂಡಗಳು ಭಾಗವಹಿಸಲಿವೆ.