ಪುತ್ತೂರು : ಇಲ್ಲಿನ ಉದ್ಯಮಿಯೊಬ್ಬರು ವ್ಯಕ್ತಿಯೊಬ್ಬರಿಂದ ಸಾಲವಾಗಿ ಪಡೆದ ಹಣ ಹಿಂತಿರುಗಿಸದೇ, ಅದರ ಬದಲು ನೀಡಿದ ಬ್ಯಾಂಕ್ ಚೆಕ್ ಕೂಡ ಅಮಾನ್ಯಗೊಂಡ ಪ್ರಕರಣದಲ್ಲಿ ಪುತ್ತೂರಿನ ನ್ಯಾಯಾಲಯವೂ ಉದ್ಯಮಿಗೆ 6 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ, ಉದ್ಯಮಿಯೂ ದಂಡ ಪಾವತಿಸಲು ವಿಫಲನಾದಲ್ಲಿ ಮೂರು ತಿಂಗಳು ಜೈಲು ಶಿಕ್ಷೆ ಅನುಭವಿಸುವಂತೆ ತೀರ್ಪಿನಲ್ಲಿ ಆದೇಶಿಸಲಾಗಿದೆ.
ಪುತ್ತೂರಿನ ಬೈಪಾಸ್ ರಸ್ತೆಯ ಹಿ೦ದೂಸ್ತಾನ್ ಪೆಟ್ರೋಲ್ ಪಂಪ್ ಮಾಲಕರಾದ ಸಿ.ಬಿ.ದಯಾನಂದ ಸ್ವಾಮಿ ಶಿಕ್ಷೆಗೊಳಗಾದವರು. ಪುತ್ತೂರಿನ ಪಡೀಲ್ ನಿವಾಸಿ ಪದ್ಮನಾಭ ನಾಯಕ್ ರವರ ಪುತ್ರನಾದ ಪ್ರಜ್ವಲ್ ಪಿ. ಎನ್. ಪ್ರಕರಣದ ದೂರುದಾರರಾಗಿದ್ದಾರೆ.
ಪ್ರಜ್ವಲ್ ಬಳಿಯಿಂದ ದಯಾನಂದ ಸ್ವಾಮಿಯವರು 5 ಲಕ್ಷ ರೂಪಾಯಿಗಳನ್ನು 2016ರ ಅ.2 ರಂದು ಪಡೆದಿದ್ದರು. ಇದರ ಮರುಪಾವತಿಯ ಬಾಬ್ತು ಕಾರ್ಪೊರೇಶನ್ ಬ್ಯಾಂಕ್ ಬೊಳ್ವಾರ್ ಶಾಖೆಯ ಚೆಕನ್ನು ನೀಡಿದ್ದರು. ಆದರೇ ಆ ಚೆಕ್ ಹೊಂದಿದ ಖಾತೆಯಲ್ಲಿ ಸಾಕಷ್ಟು ಹಣವಿಲ್ಲ ಎಂಬ ಷರಾದೊಂದಿಗೆ ಚೆಕ್ ಅಮಾನ್ಯಗೊಂಡಿತ್ತು . ಈ ಬಗ್ಗೆ ಪ್ರಜ್ವಲ್ ರವರು ಪುತ್ತೂರಿನ 2 ನೇ ಹೆಚ್ಚುವರಿ ಸಿವಿಲ್ ಜಡ್ಡ ಮತ್ತು ಜೆ.ಎಮ್.ಎಸ್.ಸಿ ನ್ಯಾಯಾಲಯದಲ್ಲಿ ನೆಗೋಶಿಯೇಬಲ್ ಇನ್ನುಮೆಂಟ್ ಕಾಯ್ದೆಯಡಿಯಲ್ಲಿ ಕೇಸು ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ
ನ್ಯಾಯಾಲಯವೂ ಇತ್ತೀಚೆಗೆ ತೀರ್ಪು ಪ್ರಕಟಿಸಿದ್ದು ದಯಾನಂದ ಸ್ವಾಮಿ ಯವರು ರೂ 6 ಲಕ್ಷ ದಂಡ ಪಾವತಿಸುವಂತೆ ತಿಳಿಸಿದ್ದು, ಅವರು ದಂಡ ಪಾವತಿಸಲು ವಿಫಲನಾದರೇ 3 ತಿಂಗಳ ಕಾರಾಗ್ರಹ ಶಿಕ್ಷೆ ಹೊಂದುವಂತೆ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. ದಂಡದ ಮೊತ್ತದಲ್ಲಿ ರೂ. 5,95,000/ ವನ್ನು ದೂರುದಾರ ಪ್ರಜ್ವಲ್ʼಗೆ ನೀಡುವಂತೆಯೂ ರೂ.5,000/ ವನ್ನು ಮೊಕ್ಕದ್ದಮೆ ಖರ್ಚನ್ನಾಗಿ ಪಾವತಿಸುವಂತೆಯೂ ತನ್ನ ಆದೇಶದಲ್ಲಿ ತಿಳಿಸಿರುತ್ತಾರೆ.

ದೂರುದಾರರ ಪರ ಹಿರಿಯ ನ್ಯಾಯವಾದಿ ಎ.ದಿನಕರ ರೈ, ಅರುಣಾ ದಿನಕರ ರೈ, ಲೇಖಶ್ರೀ ಮತ್ತು ಪ್ರಿಯಾ ವಾದಿಸಿದ್ದರು.