ಮಂಗಳೂರಿನ ಖ್ಯಾತ ವಕೀಲರಿಂದ ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ | ಕಛೇರಿಯಲ್ಲಿ ಯಾರೂ ಇಲ್ಲದ ಆ ರಾತ್ರಿ – ನಿಜಕ್ಕೂ ಆ ದಿನ ಆದದ್ದೇನು ? ಸಂತ್ರಸ್ತ ಯುವತಿ ವರ್ಷನ್

WhatsApp Image 2021-10-19 at 12.49.00 (2)
Ad Widget

Ad Widget

Ad Widget

ಮಂಗಳೂರು ಎಸಿಬಿ ಪ್ರಾಸಿಕ್ಯೂಟರ್, ನ್ಯಾಯವಾದಿ ರಾಜೇಶ್ ಅವರು ಹಲವು ಬಾರಿ ನನಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ, ಬೆದರಿಕೆ ಕೂಡ ಹಾಕಿದ್ದಾರೆ. ಕೊನೆಗೆ ಕಮಾಪಣಾ ಪತ್ರ ಬರೆಸಿ ನನ್ನಿಂದ ಬಲವಂತದ ಸಹಿ ಪಡೆದಿದ್ದಾರೆ. ಈ ವಿಚಾರದಲ್ಲಿ ನಾನು ದುಡ್ಡಿಗಾಗಿ ಬ್ಲ್ಯಾಕ್ ಮೇಲ್ ಮಾಡಿದ್ದೇನೆ. ಎಂದೆಲ್ಲಾ ಹೇಳುತ್ತಿರುವುದು ಸುಳ್ಳು ಎಂದು ಸಂತ್ರಸ್ತ ವಿದ್ಯಾರ್ಥಿನಿ ಸ್ಪಷ್ಟಪಡಿಸಿದ್ದಾರೆ.

Ad Widget

 ಕನ್ನಡದ ಟಿವಿ ವಾಹಿನಿ ಜೊತೆ ಮಾತನಾಡಿದ ಸಂತ್ರಸ್ತ ವಿದ್ಯಾರ್ಥಿನಿ, ತಾನು ಆ. 18ರಿಂದ ವಕೀಲ ರಾಜೇಶ್ ಅವರ ಕಚೇರಿಯಲ್ಲಿ  ಇಂಟರ್‌ ಶಿಪ್‌ ಮಾಡಲು ಶುರು ಮಾಡಿದ್ದೆ. ರಾಜೇಶ್ ಅವರು ನಾನು ಕಚೇರಿಗೆ ಕೆಲಸಕ್ಕೆ ಸೇರಿದ ಕೆಲವು ದಿನಗಳಲ್ಲೇ ನನಗೆ ಮೆಸೇಜ್ ಮಾಡಲು ಆರಂಭಿಸಿದ್ದರು. ವಾಟ್ಸಪ್ ಮೆಸೇಜ್‌ನಲ್ಲಿ ಸೆಲ್ಪಿ ಕೇಳಿದ್ದರು. ನನ್ನ ಡ್ರೆಸ್, ನನ್ನ ಸೌಂದರ್ಯದ ಬಗ್ಗೆ ಕಮೆಂಟ್ ಮಾಡಿ ನಾನು ನಿನಗೆ ಅಪ್ಪನಂತೆ ಎಂದೆಲ್ಲಾ ಹೇಳುತ್ತಿದ್ದರು ಎಂದಿದ್ದಾರೆ.

Ad Widget

Ad Widget

ಕಚೇರಿಯ ಸಿ.ಸಿ. ಟಿವಿಯಲ್ಲಿದ್ದ ನನ್ನ ಫೋಟೋ ಕ್ರಾಪ್ ಮಾಡಿ ನನ್ನ ಮೊಬೈಲ್‌ಗೆ ರಾಜೇಶ್ ಕಳುಹಿಸಿದ್ದರು. ಕಚೇರಿ ಸಿಸಿ ಟಿವಿಯಲ್ಲಿದ್ದ ನನ್ನ ಚಲನವಲನ ವಿಡಿಯೋಗಳನ್ನು ಮೊಬೈಲ್‌ಗೆ ಕಳುಹಿಸಿದ್ದರು. ಯಾವಾಗಲೂ ಸೈಲ್ ಮಾಡುತ್ತಾ ಇದ್ದರೆ ಚೆನ್ನಾಗಿ ಕಾಣುತ್ತೀಯ ಎಂದೆಲ್ಲ ಕಾಮೆಂಟ್ ಮಾಡುತ್ತಿದ್ದರು ಎಂದಿದ್ದಾರೆ.

Ad Widget

ಸೆ. 25ರಂದು ಬೆಳಗ್ಗೆ 10 ಗಂಟೆಗೆ ಕಚೇರಿಗೆ ಹೋಗಿದ್ದೆ. ಮಧ್ಯಾಹ್ನದವರೆಗೂ ಕಚೇರಿಯಲ್ಲಿ ಕೆಲಸ ಮಾಡಿದ್ದೆ. ಮಧ್ಯಾಹ್ನ 2 ಗಂಟೆಗೆ ತನ್ನ ಚೇಂಬರ್‌ಗೆ ರಾಜೇಶ್ ಕರೆಸಿದ್ದರು. ಆ ವೇಳೆ ಚೇಂಬರ್‌ನಲ್ಲೇ ನನ್ನನ್ನು ಅಪ್ಪಿಕೊಂಡಿದ್ದಾರೆ. ಅಂದೇ ಸಂಜೆ 7 ಗಂಟೆಗೆ ಮತ್ತೆ ಚೇಂಬರ್‌ಗೆ ರಾಜೇಶ್ ಕರೆದಿದ್ದಾರೆ. ಈ ವೇಳೆ ನನ್ನನ್ನ ತಬ್ಬಿ ಹಿಡಿದು ತೊಡೆಯ ಮೇಲೆ ಕೂರಿಸಿಕೊಂಡು ಲೈಂಗಿಕ ಕಿರುಕುಳ ನೀಡಿದ್ದಾರೆ. ಅಲ್ಲಿಂದ ತಪ್ಪಿಸಿಕೊಂಡು ಹೊರ ಹೋಗುವಾಗ ನನಗೆ ಬೆದರಿಕೆ ಹಾಕಿದ್ದಾರೆ. ಇಲ್ಲಿಂದ ಹೋದರೆ, ಹೊರಗೆ ಗೊತ್ತಾದರೆ ಸಾಯಿಸ್ತೀನಿ ಎಂದಿದ್ದಾರೆ.

Ad Widget

Ad Widget

ನಂತರವೂ ನನಗೆ ಹಲವು ಬಾರಿ ಕೊಲೆ ಬೆದರಿಕೆ ಹಾಕಿದ್ದಾರೆ. ಈ ಘಟನೆ ಬಳಿಕ ನನಗೆ ಕರೆ ಮಾಡಿ ಕ್ಷಮೆ ಕೇಳಿ ನಾನಾ ರೀತಿ ಭಿನ್ನವಿಸಿದ್ದಾರೆ. ಪ್ರಕರಣ ಮುಚ್ಚಿ ಹಾಕಲು ಬೇರೊಬ್ಬ ವ್ಯಕ್ತಿಯನ್ನು ಸಂಧಾನಕ್ಕೆ ಕರೆದಿದ್ದಾರೆ. ನಿನ್ನ ಭವಿಷ್ಯ ಹಾಳಾಗುತ್ತದೆ ಎಂದೆಲ್ಲ ನನಗೆ ಬೆದರಿಸಿದ್ದಾರೆ. ಈ ವಿಚಾರದಲ್ಲಿ ನನ್ನ ಒಬ್ಬ ಗೆಳೆಯನೇ ಸಂಧಾನ ಮಾಡಲು ಬಂದಿದ್ದ ಎಂದು ಸಂತ್ರಸ್ತ ವಿದ್ಯಾರ್ಥಿನಿ ಹೇಳಿದ್ದಾಳೆ.  

ನ್ಯಾಯವಾದಿ ರಾಜೇಶ್ ವಿರುದ್ಧದ ಆರೋಪದ ಎಫ್ಐಆರ್ ಹಾಗೂ ದೂರುಗಳನ್ನು ಪರಿಶೀಲಿಸಿದ ಬಳಿಕ ಬಾರ್ ಕೌನ್ಸಿಲ್ ಅಧ್ಯಕ್ಷ ಶ್ರೀನಿವಾಸ ಬಾಬು ನೇತೃತ್ವದ ಸಮಿತಿ ಕರ್ನಾಟಕ ಸ್ಟೇಟ್ ಬಾರ್ ಕೌನ್ಸಿಲ್​​ ಸದಸ್ಯತ್ವದಿಂದ ಅಮಾನತು ಮಾಡಿದೆ.   ಅಲ್ಲದೆ ಅವರಿಗೆ ಎಸಿಬಿ ಎಸ್‌ಪಿಪಿಯಾಗಿ ಕಾರ್ಯನಿರ್ವಹಿಸದಿರಲು ಸೂಚನೆ ಕೊಡಲಾಗಿದೆ.ಎಸಿಬಿ ಪೊಲೀಸ್ ಅಧೀಕ್ಷಕರಿಂದ ಸೂಚನಾ ಪತ್ರ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಎಸಿಬಿ ಪ್ರಕರಣಗಳಲ್ಲಿ ಅಭಿಯೋಜನೆ ಮಾಡದಂತೆ ಅವರಿಗೆ ಸೂಚಿಸಲಾಗಿದೆ.

ಅಡಿಯೋ ವೈರಲ್‌ :

ಘಟನೆಯ ಬಳಿಕ ಸಂತ್ರಸ್ತೆಗೆ ರಾಜೇಶ್ ಕರೆ ಮಾಡಿದ್ದಾರೆ ಎನ್ನಲಾದ ಆಡಿಯೋವೊಂದು ​ ವೈರಲ್ ಆಗಿದೆ. ಅದರಲ್ಲಿ ಗೊತ್ತಿಲ್ಲದೆ ತನ್ನಿಂದ ತಪ್ಪಾಗಿದೆ. ಇನ್ನು ಮುಂದೆ ಆ ರೀತಿ ಆಗದಂತೆ ನೋಡಿಕೊಳ್ಳುತ್ತೇನೆ, ದಯವಿಟ್ಟು ಕಚೇರಿಗೆ ಬಾ ಎಂದು ಆತ ಗೋಗರೆದಿದ್ದಾನೆ.ಸಂತ್ರಸ್ತೆಯು “ನಿಮಗೆ ಪತ್ನಿ ಇಲ್ಲವೇ, ನಿಮಗೆ ವಯಸ್ಸಾಗಿದೆ. ನಿಮ್ಮ ಮಗಳನ್ನು ಇದೇ ಭಾವನೆಯಿಂದ ನೋಡುತ್ತೀರ?. ಇಲ್ಲಿ ತನಗೆ ಯಾರೂ ಇಲ್ಲ ಎಂದುಕೊಂಡು ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಿದ್ದೀರಿ. ನೀವು ಶ್ರೀಮಂತರು ಏನು ಬೇಕಾದರೂ ಮಾಡುತ್ತೀರಿ. ಅದನ್ನೆಲ್ಲ ನೋಡಿಕೊಂಡ ಸುಮ್ಮನಿರಲು ಸಾಧ್ಯವಾಗುವುದಿಲ್ಲ. ಇನ್ನು ಮುಂದೆ ನನ್ನ ನಂಬರ್​ಗೆ ಕರೆ ಮಾಡಬೇಡಿ” ಎಂದು ಯುವತಿ ಆಕ್ರೋಶ ಹೊರಹಾಕಿದ್ದಾರೆ.

ವೈರಲ್‌ ಆಡಿಯೋ ಇಲ್ಲಿದೆ

ಇದನ್ನೂ ಓದಿ : ಮಂಗಳೂರು: ಕಾನೂನು ವಿದ್ಯಾರ್ಥಿನಿಗೆ ಖ್ಯಾತ ವಕೀಲ ರಾಜೇಶ್ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ – ಮಹಿಳೆ ಸಹಿತ ಒಟ್ಟು ನಾಲ್ವರ ವಿರುದ್ದ ಪ್ರಕರಣ ದಾಖಲು

ಇದನ್ನೂ ಓದಿ : ಮಂಗಳೂರಿನ ಖ್ಯಾತ ವಕೀಲರಿಂದ ಕಾನೂನು ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ |ಪಿಎಸೈ ಸಹಿತ ಇಬ್ಬರು ಪೊಲೀಸರು ಸಸ್ಪೆಂಡ್ – ಒರ್ವ ಮಹಿಳೆ ಬಂಧನ; ರಾಜೇಶ್‌ ಭಟ್ ಗೆ ಪುತ್ತೂರಿನಲ್ಲಿ ಆಶ್ರಯ ?

Leave a Reply

Recent Posts

error: Content is protected !!
%d bloggers like this: