ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಸತತ ಏರಿಕೆಯಾಗಿ ಕಳೆದ 18 ತಿಂಗಳಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 36 ರೂ. ಹಾಗೂ ಡೀಸೆಲ್ ಬೆಲೆ 26.58 ರೂಪಾಯಿ ಏರಿಕೆಯಾಗಿದೆ.
2020ರ ಮೇ ತಿಂಗಳಲ್ಲಿ ಉಭಯ ಇಂಧನಗಳ ಬೆಲೆಗಳು ದಾಖಲೆ ಮಟ್ಟಕ್ಕೆ ಏರಿಕೆಯಾಗಿತ್ತು. ಮಧ್ಯಪ್ರದೇಶದ ಗಡಿ ಜಿಲ್ಲೆಗಳಲ್ಲಿ ಶನಿವಾರ ಪೆಟ್ರೋಲ್ ಬೆಲೆ ಲೀಟರ್‌ಗೆ 119 ರೂ. ಹಾಗೂ ಡೀಸೆಲ್ ಬೆಲೆ 108 ರೂ. ಆಗಿತ್ತು.
ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಅನುಕ್ರಮವಾಗಿ 107.24 ಹಾಗೂ 95.97 ರೂ. ಆಗಿತ್ತು ಎಂದು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ತಿಳಿಸಿವೆ.
ಮಧ್ಯಪ್ರದೇಶದ ಗಡಿ ಭಾಗದಲ್ಲಿ ಪೆಟ್ರೋಲ್ ಲೀಟರ್‌ಗೆ 120 ರೂ. ತಲುಪಿ ಹೊಸ ದಾಖಲೆ ಬರೆದಿದೆ. ದೇಶದ ಬಹುತೇಕ ನಗರಗಳಲ್ಲಿ ಪೆಟ್ರೋಲ್ ದರ ನೂರು ರೂಪಾಯಿ ಗಡಿ ದಾಟಿದ್ದು ಡೀಸೆಲ್ ಬೆಲೆಯೂ ಹಲವು ರಾಜ್ಯಗಳಲ್ಲಿ ಶತಕದ ಗಡಿ ದಾಟಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯ ಏರಿಕೆಗೆ ಅನುಗುಣವಾಗಿ ಉಭಯ ಇಂಧನಗಳ ಬೆಲೆಗಳು ಏರುತ್ತಿವೆ. ಆದರೆ ಕೇಂದ್ರ ಸರ್ಕಾರ ಬ್ಯಾರಲ್ ಗೆ 19 ಡಾಲರ ನಲ್ಲಿ ಸಂಗ್ರಹಿಸಿಟ್ಟ ದೇಶದ 3 ಶೇಖರಣಗಾರದಿಂದ ಪೆಟ್ರೋಲ್, ಡಿಸೇಲ್ ಮಾರಟ ಪ್ರಾರಂಭಿಸಿದೆ.
ಮುಂಬೈಯಲ್ಲಿ ಪೆಟ್ರೋಲ್ 113.12 ರೂ. ಡೀಸೆಲ್ 104 ರೂಪಾಯಿಗೆ ಮಾರಾಟವಾಗಿದೆ. ಕೋಲ್ಕತಾದಲ್ಲಿ ಪೆಟ್ರೋಲ್ 107.78 ರೂ., ಡೀಸೆಲ್ 99.08 ರೂ, ಚೆನ್ನೈನಲ್ಲಿ ಅನುಕ್ರಮವಾಗಿ 104.22 ಹಾಗೂ 100.25 ರೂ. ಆಗಿತ್ತು.