ಪುತ್ತೂರು,ಅ25: ಪುತ್ತೂರು ಮುಖ್ಯರಸ್ತೆಯ ನೇಮಿರಾಜ ಕಟ್ಟಡದ ಮಾಲಕ ಅಪರಾಜಿತ ಜೈನ್ ಅವರು
ಅ.23 ರಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಸುಮಾರು 70 ವರ್ಷ ವಯಸಾಗಿತ್ತು.
ಆರು ಜೇಬಿನ ಪ್ಯಾಂಟ್ ಧರಿಸಿ ಜೇಬಿನಲ್ಲಿ ಸಾದಾ ಚಾಕೊಲೇಟ್ ತುಂಬಿಕೊಂಡು ತನ್ನ ಎದುರು ಸಿಕ್ಕ ಮಕ್ಕಳು ಹಿರಿಯರು ಎನ್ನುವ ಭೇದವಿಲ್ಲದೆ ಸಿಹಿ ಹಂಚುತ್ತಾ ಎಲ್ಲರ ಅಚ್ಚುಮೆಚ್ಚಿನವರಾಗಿದ್ದರು. ಒಂದುಕಾಲದ ತುಳು ರಂಗಭೂಮಿಯಲ್ಲಿ ನಟನಾಗಿ ಮಿಂಚಿಜಿದ್ದ ಅಪರಾಜಿತ್
ಉತ್ತಮ ಕ್ರೀಡಾಪಟುವೂ,. ಕ್ರೀಡಾ ಪ್ರೋತ್ಸಾಹಕರೂ ಆಗಿದ್ದರು.
ದಿ.ನೇಮಿರಾಜ್ ಜೈನ್ ರವರ ಪುತ್ರ ಅಪರಾಜಿತ ಜೈನ್
ಅವರು ಅವಿವಾಹಿತಾಗಿದ್ದರು. ಇತ್ತೀಚೆಗೆ ಅನಾರೋಗ್ಯದ ಕಾರಣಕ್ಕೆ ಪುತ್ತೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ
ದಾಖಲಾಗಿದ್ದರು. ಅ.23 ರಂದು ರಾತ್ರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮೃತರು ಸಹೋದರಿ, ಬಂಧುಗಳು ಮತ್ತು ಅಪಾರ ಸಂಖ್ಯೆಯ ಮಿತ್ರರನ್ನು ಅಗಲಿದ್ದಾರೆ.