ಡಿ.21 ರಿಂದ 26 : ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದದ ಬ್ರಹ್ಮಕಲಶೋತ್ಸವ | ಮನಮೋಹಕ ಸಾಂಸ್ಕ್ರತಿಕ ಕಾರ್ಯಕ್ರಮಗಳು, ದಸಾರ ಮಾದರಿ ಅಲಂಕಾರ, 5 ಲಕ್ಷಕ್ಕೂ ಅಧಿಕ ಮಂದಿಗೆ ಅನ್ನ ಸಂತರ್ಪಣೆ : ಅಶೋಕ್ ಕುಮಾರ್ ರೈ ಕೋಡಿಂಬಾಡಿ

IMG-20211025-WA0021
Ad Widget

Ad Widget

Ad Widget

ಎಂಟು ನೂರು ವರ್ಷಗಳಷ್ಟು ಪುರಾತನ ಐತಿಹ್ಯ ಹೊಂದಿರುವ ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟುವಿನ ಕಾರಣೀಕ ಪ್ರಸಿದ್ದ  ಶ್ರೀ ಮಹಿಷಮರ್ದಿನಿ ದೇವಸ್ಥಾನದದಲ್ಲಿ ಡಿ.21 ರಿಂದ 26 ರ ತನಕ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ. ಕೊರೊನಾ ಮಹಾಮಾರಿಯ ಹಿನ್ನಲೆಯಲ್ಲಿ ಕಳೆದೆರಡು ವರ್ಷಗಳಲ್ಲಿ ಎರಡು ಬಾರಿ ನಿಗದಿಯಾಗಿದ್ದ ಬ್ರಹ್ಮ ಕಲಶ ಮುಂದೂಡಲ್ಪಟ್ಟಿದ್ದು , ಈ ಬಾರಿ ಮತ್ತೆ ದೈವಜ್ನರ ನಿರ್ದೇಶನದಂತೆ ದಿನಾಂಕ ನಿಗದಿ ಮಾಡಲಾಗಿದ್ದು ಈ ಹಿಂದೆ ನಿರ್ಧರಿಸಿದಂತೆ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಮೇಳೈಸಿವಿಕೆಯೊಂದಿಗೆ ಈ ಹಿಂದೆ ನಿರ್ಧರಿಸಿದಂತೆ ವೈಭವೋಪೇತವಾಗಿ ಹಾಗೂ ವಿಜ್ರಂಭಣೆಯಿಂದ ನಡೆಸಲು ನಿರ್ಧರಿಸಲಾಗಿದೆ.

Ad Widget

ಭಾನುವಾರ ದೇವಳದ ಚಿನ್ಮಯಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ವಿಷಯವನ್ನು ಬ್ರಹ್ಮಕಲಶೋತ್ಸವ ಹಾಗೂ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ಕೋಡಿಂಬಾಡಿ ತಿಳಿಸಿದರು

Ad Widget

Ad Widget

Ad Widget

  ಆರು ದಿನಗಳ ಬ್ರಹ್ಮಕಲಶೋತ್ಸವದಲ್ಲಿ  ಪ್ರತಿದಿನ  ಸುಮಾರು 50 ಸಾವಿರ ಮಂದಿಯಂತೆ ಸುಮಾರು ಐದು ಲಕ್ಷ ಮಂದಿಗೆ ಅನ್ನಸಂತರ್ಪಣೆ ನೀಡುವ ಯೋಜನೆಯನ್ನು ಗ್ರಾಮಸ್ಥರು ಮಾಡಿದ್ದಾರೆ.  ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರವರ ಗೌರೌವಧ್ಯಕ್ಷತೆಯಲ್ಲಿ ಜರಗುವ ಬ್ರಹ್ಮಕಲಶೋತ್ಸವಕ್ಕೆ  ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಹಲವು ಸಚಿವರು, ಸಾಧಕರು  ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ.    ಬ್ರಹ್ಮಕಲಶೋತ್ಸವ ಜರುಗುವ ಆರು ದಿನವೂ ಈ ಹಿಂದೆ ನಿಶ್ಚಯಿಸಿದಂತೆ ಮನಮೋಹಕ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಬೆಳಗ್ಗೆ 9ರಿಂದ ರಾತ್ರಿ 11  ಗಂಟೆ ತನಕ ನಿರಂತರವಾಗಿ  ಈ ಕಾರ್ಯಕ್ರಮಗಳು  ಸಭಾಂಗಣದಲ್ಲಿ  ನಡೆಯುತ್ತಿರುತ್ತಾದೆ ಎಂದರು

Ad Widget

  ಬ್ರಹ್ಮಕಲಶೋತ್ಸವ ಜರುಗುವ ಆರು ದಿನಗಳ ಪೈಕಿ ಒಂದು ದಿನ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ  ಭಜನಾಮೃತ ಇದರಲ್ಲಿ ಭಾಗವಹಿಸಲು ನಿಶ್ಚಯಿಸಿದ್ದವು.  ಹಾಗಾಗಿ ಆ ಕಾರ್ಯಕ್ರಮವನ್ನು ಮತ್ತೆ ಜೋಡಿಸಿಕೊಳ್ಳುವ ಉದ್ದೇಶದಿಂದ   ಅ.26 ಮಂಗಳವಾರ ಭಜನಾ ತಂಡದ ಮುಖ್ಯಸ್ಥರ ಸಮ್ಮುಖದಲ್ಲಿ ಸಭೆ ನಡೆಸಿ ಚರ್ಚಿಸಲಾಗುವುದು ಎಂದು ಅವರು ಹೇಳಿದರು.

Ad Widget

Ad Widget

ದಸಾರ ಮಾದರಿ ಅಲಂಕಾರ

ಬ್ರಹ್ಮಕಲಶೋತ್ಸವದ ಸಂದರ್ಭ ಕ್ಷೇತ್ರವನ್ನು ಸಂಪರ್ಕಿಸುವ ವಿವಿಧ  ಪ್ರಮುಖ ರಸ್ತೆಗಳನ್ನು ದಸಾರ ಮಾದರಿ ಅಲಂಕಾರ ಮಾಡಲು ನಿರ್ಧಿರಿಸಲಾಗಿದೆ. ಪೆರ್ನೆ, ಕೋಡಿಂಬಾಡಿ ಶಾಲೆ ಹಾಗೂ ಶಾಂತಿನಗರದಿಂದ ಕ್ಷೇತ್ರವನ್ನು ಸಂಪರ್ಕಿಸುವ ರಸ್ತೆಗಳನ್ನು ಗೂಡು ದೀಪಗಳಿಂದ ಅಲಂಕರಿಸಲು ನಿರ್ಧರಿಸಲಾಗಿದ್ದು ಇದಕ್ಕೆ ಸುಮಾರು 5 ಲ. ರೂ ವ್ಯಯಿಸಲಾಗುವುದು.  ಪುತ್ತೂರಿನ ಬೊಳುವಾರಿನಿಂದ   ಬಂಟಿಂಗ್ಸ್ ಗಳನ್ನು ದೇವಸ್ಥಾನದ ತನಕ ಅಳವಡಿಸುವ ಕಾರ್ಯ ಆಯಾ ಪ್ರದೇಶದ ಭಜನಾ ತಂಡ, ಸಂಘಟನೆಗಳವರ ಮುಂದಾಳತ್ವದಲಿ  ನಡೆಯಲಿದೆ. ಈ ಕುರಿತು ವಿನಂತಿಸಲಾಗುವುದು.

ಬಸ್ಸಿನ ವ್ಯವಸ್ಥೆ

ಬ್ರಹ್ಮಕಲಶೋತ್ಸವ ಸಂಭ್ರಮಕ್ಕೆ ರಾಜ್ಯದ ವಿವಿಧ ಕಡೆಗಳಿಂದ ಬರುವ ಭಕ್ತಾದಿಗಳಿಗೆ ಬಸ್ಸಿನ ವ್ಯವಸ್ಥೆ ಮಾಡುವಂತೆ ಈಗಾಗಲೇ ಸಾರಿಗೆ ಸಚಿವ ಶ್ರೀರಾಮುಲು ಅವರಲ್ಲಿ ವಿನಂತಿಸಲಾಗಿದೆ .  ತಾಲೂಕಿನ ಹಾಗೂ ಜಿಲ್ಲೆಯ ಪ್ರತಿ ಗ್ರಾಮ, ಪ್ರತಿ ಊರಿನಿಂದ, ರಾಜ್ಯದ ವಿವಿದೆಡೆಯಿಂದ  ಭಕ್ತರು ಮಹಿಷಮರ್ದಿನಿಯ ಬ್ರಹ್ಮಕಲಶೋತ್ಸವದ ಪಾವನ ಕಾರ್ಯದಲ್ಲಿ ಪಾಲ್ಗೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. ಬರುವ ಅತಿಥಿಗಳನ್ನು ಪ್ರೀತಿಪೂರ್ವಕವಾಗಿ ಅಮಂತ್ರಿಸಲು, ಈ ಸಂದರ್ಭ ನಡೆಯುವ ಅನ್ನಸಂತರ್ಪಣೆಯಾಗಲಿ, ಸಾಂಸ್ಕೃತಿಕ, ಸಭಾ ಕಾರ್ಯಗಳಾಗಲಿ ಎಲ್ಲವನ್ನೂ  ಬಹಳ ಅಚ್ಚುಕಟ್ಟಾಗಿ ಚೌಕಟ್ಟಿನಲ್ಲಿ ಮಾಡುವ ಕುರಿತು ಯೋಜನೆಗಳನ್ನು ಹಾಕಲಾಗಿದೆ ಎಂದು ಅವರು ತಿಳಿಸಿದರು.

Leave a Reply

Recent Posts

ದೇಶದಲ್ಲಿ ಹಿಂದೂಗಳ ಶಕ್ತಿ ಹೇಗಿರಬೇಕೆಂದರೆ ಸರ್ಕಾರ ಹಿಂದೂಗಳ ಹೇಳಿಕೆಯಂತೆ ನಡೆಯಬೇಕು..! : ದೇವಸ್ಥಾನಗಳನ್ನು ಸರಕಾರಿಕರಣಗೊಳಿಸಿದಂತೆ ಮಸೀದಿಗಳನ್ನು ಏಕೆ ಮಾಡುವುದಿಲ್ಲ..? ಮಂದಿರ ಸಂಸ್ಕೃತಿ ರಕ್ಷಣೆ ಸಭೆಯಲ್ಲಿ ಚರ್ಚೆ – ಮುಂಬೈಯ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿನ ಭ್ರಷ್ಟಾಚಾರ ಬೆಳಕಿಗೆ ತಂದಿರುವ ಸುಪ್ರಸಿದ್ಧ ಸರ್ಜನ್ ರ ಪುಸ್ತಕ ಬಿಡುಗಡೆ

error: Content is protected !!
%d bloggers like this: