ಮಂಗಳೂರು : ಅ 23: ಸೈಕಲನ್ನು ಕದ್ದು, ಅದನ್ನು ಪೊಲೀಸರೆದುರೇ ಸ್ಕೂಟರ್ ನಲ್ಲಿ ಕೊಂಡೊಯ್ದ ಘಟನೆ ಶನಿವಾರ ಸಂಜೆ 6 ಗಂಟೆಯ ಸುಮಾರಿಗೆ ನಗರದ ಸ್ಟೇಟ್ ಬ್ಯಾಂಕ್ ಪರಿಸರದಲ್ಲಿ ನಡೆದಿದೆ.
ಬಾಲಕನೊಬ್ಬ ಬೆಲೆಬಾಳುವ ಸೈಕಲನ್ನು ಅಂಗಡಿಯ ಎದುರು ನಿಲ್ಲಿಸಿ ಒಳಗೆ ಹೋದ ಕೂಡಲೇ ಇಬ್ಬರು ವ್ಯಕ್ತಿಗಳು ಅದನ್ನೆತ್ತಿಕೊಂಡು ಸ್ಕೂಟರ್ ನಲ್ಲಿಟ್ಟು ಪರಾರಿಯಾಗಲು ಯತ್ನಿಸಿದರು. ಇದನ್ನು ಇತರರು ನೋಡಿ ಕಳ್ಳರನ್ನು ಬೆನ್ನೆತ್ತಿ ಬರುವಷ್ಟರಲ್ಲಿ ರಸ್ತೆಯ ವಿರುದ್ದ ದಿಕ್ಕಿನಲ್ಲೆ ವೇಗವಾಗಿ ಚಲಾಯಿಸಿ ತಪ್ಪಿಸಿಕೊಂಡರು.ಲೇಡಿಗೋಶನ್ ಸಮೀಪದ ರಸ್ತೆ ಕಡೆಯಿಂದ ರಾವ್ ಅಂಡ್ ರಾವ್ ಸರ್ಕಲ್ ರಸ್ತೆಯಾಗಿ ವಿರುದ್ದ ದಿಕ್ಕಿನಲ್ಲಿಯೇ ಕಳ್ಳರು ಸ್ಕೂಟರ್ ನಲ್ಲಿ ಹೋದರು.

ಇದೇ ಸಮಯ ಎದುರು ಕಡೆಯಿಂದ ಸಂಚಾರ ಪೊಲೀಸರ ವಾಹನ ಬರುತ್ತಿತ್ತು. ಆದರೆ ಸಂಚಾರ ಪೊಲೀಸರು ಹಿಂಬಾಲಿಸಿಕೊಂಡು ಹೋದರು. ಆದರೆ ಸಾರ್ವಜನಿಕರು ಪೊಲೀಸರು ನೋಡುತ್ತಿದ್ದಂತೆಯೇ ಪರಾರಿಯಾದರು. ಘಟನೆಯಲ್ಲಿ ಪೊಲೀಸರ ವೈಪಲ್ಯ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.