ಮಂಗಳೂರು : ಅ 24 : ಬಾಲಕಿಯೊಬ್ಬಳ ಮೃತದೇಹ
ಮನೆ ಸಮೀಪದ ನದಿಯಲ್ಲಿ ಪತ್ತೆಯಾದ ಘಟನೆ ಅ 24 ರಂದು ಮಧ್ಯಾಹ್ನ. ಮಂಗಳೂರಿನ ಕುದ್ರೋಳಿ ಎಂಬಲ್ಲಿ ನಡೆದಿದೆ
ಕುದ್ರೋಳಿಯ ಹೈದರಲಿ ರಸ್ತೆಯ ನಿವಾಸಿ ಸಲಾಂ ಎಂಬವರ ಮಗಳು ಮುಫೀದಾ(11) ಮೃತ ದುರ್ದೈವಿ.
ಈಕೆ ರವಿವಾರ ಬೆಳಗ್ಗೆ ಏಕಾಏಕಿ ಮನೆಯಿಂದ ನಾಪತ್ತೆಯಾಗಿದ್ದಾಳೆ. ಎಷ್ಟು ಹೊತ್ತಾದರೂ ಕಾಣಿಸದ ಹಿನ್ನಲೆಯಲ್ಲಿ ಮನೆಯವರು ಸುತ್ತ ಮುತ್ತಾ ಹುಡುಕಾಟ ನಡೆಸಿದ್ದಾರೆ.
ತುಂಬಾ ಹೊತ್ತು ಹುಡುಕಾಡಿದರೂ ಪತ್ತೆಯಾಗದ ಹಿನ್ನಲೆಯಲ್ಲಿ ಮನೆ ಸಮೀಪದ ಅಂಗಡಿಯೊಂದರ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದ್ದಾರೆ.
ಆಗ ಮನೆಯಿಂದ ಸುಮಾರು 200 ಮೀ. ದೂರದಲ್ಲಿರುವ ನದಿ ಕಡೆಗೆ ಬಾಲಕಿ ಮುಫೀದಾ ತೆರಳುತ್ತಿರುವುದು ಕಂಡುಬಂದಿತ್ತು.
ಅದರಂತೆ ಸ್ಥಳೀಯರು ಕುದ್ರೋಳಿಯ ಕಾರ್ಖಾನೆ ಬಳಿಯ ನದಿಯಲ್ಲಿ ಶೋಧ ನಡೆಸಿದಾಗ ಮುಫೀದಾಳ ಮೃತದೇಹ ಪತ್ತೆಯಾಗಿದೆ.

ಈಕೆ ಸ್ವಲ್ಪ ಬುದ್ಧಿಮಾಂದ್ಯತೆ ಹೊಂದಿದ್ದಾಳೆ ಎನ್ನಲಾಗಿದೆ. ಬಂದರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.