ಪುತ್ತೂರಿನ ಪ್ರಸಿದ್ಧ ಚಿನ್ನಾಭರಣ ಮಳಿಗೆಗಳಲ್ಲಿ ಒಂದಾದ ಮುಳಿಯ ಜ್ಯುವೆಲ್ಸ್ ನಲ್ಲಿ ಚಿನ್ನದ ಹಬ್ಬ ಮುಳಿಯ ಚಿನ್ನೋತ್ಸವವು ದಿನಾಂಕ ಅಕ್ಟೋಬರ್ 25ರಿಂದ ನವಂಬರ್ 25ರವರೆಗೆ ಒಂದು ತಿಂಗಳ ಕಾಲ ನಡೆಯಲಿದೆ. ಮುಳಿಯ ಜ್ಯುವೆಲ್ಸ್‍ನ ಪುತ್ತೂರು, ಬೆಳ್ತಂಗಡಿ, ಮಡಿಕೇರಿ, ಗೋಣಿಕೊಪ್ಪಲ್ ಮತ್ತು ಬೆಂಗಳೂರಿನ ಮಳಿಗೆಗಳಲ್ಲಿ ಈ ಅವಧಿಯಲ್ಲಿ ಆಯೋಜನೆಗೊಳ್ಳಲಿದೆ
ಈ ಚಿನ್ನೋತ್ಸವದ ಸಂದರ್ಭದಲ್ಲಿ ವಿಶೇಷ ವಿನ್ಯಾಸಗಳ, ಅಪೂರ್ವ ಸಂಗ್ರಹದ ಆಭರಣಗಳು ಪ್ರದರ್ಶನ ಮತ್ತು ಮಾರಾಟಕ್ಕಿವೆ. ವಜ್ರ, ಬೆಳ್ಳಿ, ಆ್ಯಂಟಿಕ್, ಕರಿಮಣಿ, ಚೈನು, ಪಾರಂಪರಿಕ ಆಭರಣಗಳು, ಪೆಂಡೆಂಟ್, ವಜ್ರಾಭರಣಗಳು, ಗಿಳಿಯೋಲೆ, ಮಲ್ಲಿಗೆ ಮೊಗ್ಗು ಸರ ಹೀಗೆ ಆಭರಣಗಳ ಮಹಾಪೂರ ಮುಳಿಯ ಜ್ಯುವೆಲ್ಸ್‍ನ ಎಲ್ಲ ಮಳಿಗೆಗಳಲ್ಲಿಯೂ ಕಂಗೊಳಿಸಲಿವೆ.
ಕಾರು ಗೆಲ್ಲುವ ಅವಕಾಶ
ಮುಳಿಯ 75 ಪರಂಪರೆಯ ಆಚರಣೆಯ ಪ್ರಯುಕ್ತ ಬಂಪರ್ ಬಹುಮಾನ ಕಾರು ಮಾರುತಿ ಎಸ್-ಪ್ರೆಸ್ಸೋ ಹಾಗೂ ಇನ್ನಿತರ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶ ಈ ಚಿನ್ನೋತ್ಸವದಲ್ಲಿದೆ.

ಚಿನ್ನ ಯಾವತ್ತೂ ಗ್ರಾಹಕನ ಕೈ ಬಿಟ್ಟಿಲ್ಲ : ಕೇಶವ ಪ್ರಸಾದ್ ಮುಳಿಯ
ಚಿನ್ನ ಎಂದೆಂದಿಗೂ ಗ್ರಾಹಕರಿಗೆ ಲಾಭ-ಸಂತೋಷ ತಂದಿದೆ. ಆದ್ದರಿಂದ “ಚಿನ್ನ ಯಾವತ್ತೂ ಕೈ ಬಿಡುವುದಿಲ್ಲ” ಎಂಬ ನಂಬಿಕೆ ನಮ್ಮಲ್ಲಿದೆ. 1919ರಲ್ಲಿ ಅಂದರೆ 100 ವರ್ಷಗಳ ಹಿಂದೆ, ಚಿನ್ನದ ಬೆಲೆ 1 ಗ್ರಾಂಗೆ ಅಂದಾಜು ರೂ.1 ಇತ್ತು. 75 ವರ್ಷಗಳ ಹಿಂದೆ ಮುಳಿಯ ಸಂಸ್ಥೆ ಆರಂಭವಾಗಿದ್ದು ಆಗ ಗ್ರಾಂ ಒಂದಕ್ಕೆ ರೂ.20/- ಇತ್ತು. ಈಗ ಅಂದರೆ 2021ರಲ್ಲಿ ರೂ ಬೆಲೆ ರೂ.4,400/- ಆಸುಪಾಸಿನಲ್ಲಿದೆ. ಹೀಗೆ ಚಿನ್ನ ಗ್ರಾಹಕನಿಗೂ ಲಾಭದಾಯಕವಾಗಿಯೂ , ಅತ್ಯುತ್ತಮ ಹೂಡಿಕೆಯಾಗಿಯೂ ಪರಿಣಮಿಸಿದೆ ಎಂದು ಕೇಶವ ಪ್ರಸಾದ್ ಮುಳಿಯರವರು ವಿವರಿಸಿದರು.
ಈ ಚಿನ್ನೋತ್ಸವದಲ್ಲಿ ಹಲವಾರು ವೆರೈಟಿಗಳು ಆಯ್ಕೆಗೆ ಲಭ್ಯವಿದ್ದು, ಗ್ರಾಹಕರು ತಮ್ಮ ಆಯ್ಕೆಯ ಚಿನ್ನಾಭರಣವನ್ನು ಖರೀದಿಸಿ ಸಂಭ್ರಮಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.