Ad Widget

ಮಂಗಳೂರಿನ ವಿಲಾಸಿ ಪಬ್‌ ಮೇಲೆ ಇನ್ಸ್ಪೆಕ್ಟರ್ ಮಹೇಶ್‌ ಪ್ರಸಾದ್‌ ನೇತ್ರತ್ವದ ಸಿಸಿಬಿ ಪೊಲೀಸರ ದಾಳಿ

WhatsApp Image 2021-10-24 at 13.33.44
Ad Widget

Ad Widget

Ad Widget

ನಗರದ ಎಂ.ಜಿ.ರಸ್ತೆಯಲ್ಲಿರುವ ಓನೆಕ್ಸ್ ಪಬ್ ಮೇಲೆ  ಅ .24ರ  ರಾತ್ರಿ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ಈ ದಾಳಿ ನಡೆದಿದೆ ಎಂದು ಪೊಲೀಸರು ಹೇಳಿಕೊಂಡಿದ್ದಾರೆ.

Ad Widget

Ad Widget

Ad Widget

Ad Widget

 ಪಬ್‌ ಅನ್ನು ನಿಗದಿತ ಸಮಯವಾದ ರಾತ್ರಿ 11 ಗಂಟೆಯನ್ನು ಮೀರಿ ತೆರೆಯಲಾಗುತ್ತಿತ್ತು. ಧ್ವನಿವರ್ಧಕಗಳನ್ನು  ಜೋರಾಗಿ ಬಳಸಿ ಅಕ್ಕಪಕ್ಕದ  ಮನೆಯವರಿಗೆ  ಕಿರಿಕಿರಿ ಉಂಟು ಮಾಡಲಾಗುತ್ತಿತ್ತು. ಪಬ್ ನಿಂದ ಹೊರಬರುವವರು ಅಶ್ಲೀಲವಾಗಿ ವರ್ತಿಸುತ್ತಾರೆ, ಇದರಿಂದ  ಅಕ್ಕಪಕ್ಕದ ನಿವಾಸಿಗಳಿಗೆ, ಸುತ್ತಾಮುತ್ತಾ ಓಡಾಡುವ ವಿದ್ಯಾರ್ಥಿಗಳಿಗೆ ಮತ್ತು ಸಮೀಪದಲ್ಲೇ ಇರುವ ದೇವಸ್ಥಾನಗಳಿಗೆ ಭಕ್ತರು ಹೋಗಿ ಬರುವುದಕ್ಕೆ ಸಂಜೆಯಿಂದಲೇ ತೊಂದರೆಯಾಗುತ್ತಿದೆ ಎಂಬಿತ್ಯಾದಿ ದೂರುಗಳು ಸಾರ್ವಜನಿಕ ವಲಯದಲ್ಲಿ ಬಂದ ಹಿನ್ನಲೆಯಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಹಾಗೂ ಬರ್ಕೆ ಪೊಲೀಸ್ ಠಾಣೆಯ ಪೊಲೀಸರು ಕಾರ್ಯಚಾರಣೆ ನಡೆಸಿದ್ದಾರೆ ಎಂದು ವರದಿಯಾಗಿದೆ.

Ad Widget

Ad Widget

Ad Widget

Ad Widget

ಮಂಗಳೂರು ಸಿಸಿಬಿ ಇನ್ ಸ್ಪೆಕ್ಟರ್ ಮಹೇಶ್ ಪ್ರಸಾದ್ ಮತ್ತು ಬರ್ಕೆ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಜ್ಯೋತಿರ್ಲಿಂಗ ನೇತೃತ್ವದಲ್ಲಿ ದಾಳಿ ನಡೆದಿದ್ದೂ, ಪೊಲೀಸರು ಧ್ವನಿವರ್ಧಕ ಕಂಪ್ಯೂಟರ್‌ ಇತ್ಯಾದಿ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Ad Widget

Leave a Reply

Recent Posts

error: Content is protected !!
%d bloggers like this: