ಕಾರ್ಯಕ್ರಮಗಳು
ಉಪ್ಪಿನಂಗಡಿ : 50 ವರ್ಷಗಳಿಂದ ಆಸ್ತಿ ದಾಖಲೆ ಇಲ್ಲದೆ ವಾಸಿಸುತ್ತಿದ್ದ ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಿದ ಅಶೋಕ್ ಕುಮಾರ್ ರೈ – ಅಭಿನಂದಿಸಿದ ಫಲಾನುಭವಿಗಳು

ಪುತ್ತೂರು : ತಾಲೂಕಿನ ಉಪ್ಪಿನಂಗಡಿ ಗ್ರಾಮದ ಕದಿಕ್ಕಾರು ಎಂಬಲ್ಲಿ ಸುಮಾರು 50 ವರ್ಷ ಕ್ಕಿಂತಲೂ ಮೇಲ್ಪಟ್ಟು ಶ್ರೀ ಕ್ಷೇತ್ರ ಧರ್ಮಸ್ಥಳದ ಜಾಗದಲ್ಲಿ ಸುಮಾರು 18 ಪರಿಶಿಷ್ಟಜಾತಿಯ ಕುಟುಂಬಗಳು ವಾಸಿಸುತ್ತಿದ್ದಾರೆ.
ಈ ಜಾಗವು ಧರ್ಮಸ್ಥಳಕ್ಕೆ ಸೇರಿರುವುದರಿಂದ ಇವರಿಗೆ ಯಾವುದೇ ಸರಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದರು.
ಈ ಸಮಸ್ಯೆಯನ್ನು ಈ ಹಿಂದೆಯೇ ಹಲವು ಜನರಲ್ಲಿ ತಿಳಿಸಿದರೂ ಯಾವೂದೇ ಪ್ರಯೋಜನ ಆಗದೇ ಜಾಗವನ್ನು ರೆಕಾರ್ಡ್ ಮಾಡಲು ಪ್ರಯತ್ನಿಸಿ ಅರ್ಧದಲ್ಲಿ ಕೈ ಬಿಟ್ಟಿರುತ್ತಾರೆ .
ಸ್ಥಳೀಯರು ಈ ಸಮಸ್ಯೆಯನ್ನು ಅಶೋಕ್ ಕುಮಾರ್ ರೈ ಕೋಡಿಂಬಾಡಿ ಯವರಲ್ಲೂ ಮನವಿ ಮಾಡಿಕೊಂಡಾಗ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಆ ಕುಟುಂಬಗಳು ವಿಶ್ವಾಸ ತುಂಬಿದ್ದರು.

ಆದರಂತೆ ಸುಮಾರು 4 ವರ್ಷದಿಂದ ಸತತ ಪ್ರಯತ್ನದಿಂದ ಧರ್ಮಸ್ಥಳದ ಧರ್ಮಾಧಿಕಾರಿ ಹೆಗ್ಗಡೆಯವರಲ್ಲಿ ವಿಚಾರವನ್ನು ತಿಳಿಸಿದಾಗ ಜಾಗವನ್ನು ದಾನಪತ್ರ ಮಾಡು ನೀಡುವುದಾಗಿ ತಿಳಿಸಿದರು.
ಜಾಗದ ದಾಖಲೆ ಪತ್ರ ಮಾಡಲು ಬೇಕಾದ ವ್ಯವಸ್ಥೆಯ ಪೂರ್ತಿ ಜವಾಬ್ದಾರಿಯನ್ನು ಹೊತ್ತ ಅಶೋಕ್ ಕುಮಾರ್ ರೈ ಇದೀಗ
ಜಾಗದ ರೆಕಾರ್ಡ್ ಮಾಡಿಕೊಡವಲ್ಲಿ ಯಶಸ್ವಿಯಾಗಿದ್ದಾರೆ.
ಆ ಜಾಗದ ದಾಖಲೆಗಳನ್ನು ಕುಟುಂಬಗಳಿಗೆ ವಿತರಿಸುವ ಕಾರ್ಯಕ್ರಮವು ರೈ ಎಸ್ಟೇಟ್ ಎಜುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ನ ದರ್ಬೆಯ ಕಛೇರಿಯಲ್ಲಿ ನಡೆಯಿತು.
ದಾಖಲೆಗಳನ್ನು ವಿತರಿಸಿ , ಇಂತಹ ಬಡವರಿಗೆ ಸಹಾಯ ಮಾಡುವುದರಿಂದ ನನಗೆ ಧನ್ಯತಭಾವ ಸಿಕ್ಕಿದೆ ಮತ್ತು ಇನ್ನು ಮುಂದೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಂಡು ಅಭಿವೃದ್ಧಿ ಹೊಂದಿರಿ ಎಂದು ತಿಳಿಸಿದರು. ದಾಖಲೆಗಳನ್ನು ಪಡೆದುಕೊಂಡ ಫಲಾನುಭವಿ ಮಹಾಲಿಂಗರವರು ತಮ್ಮ ಮನದಾಳದ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಕದಿಕ್ಕಾರು ಜಾಗದ ದಾಖಲೆಗಳನ್ನು ಪಡಕೊಂಡ 18 ಕುಟುಂಬದವರು ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರನ್ನು ಶಾಲು ಹೊದಿಸಿ ಫಲಪುಷ್ಪ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ವೇದಿಕೆಯಲ್ಲಿ ಫಲಾನಿಭವಿ ಮಹಾಲಿಂಗ ಮತ್ತು ರವಿ ಉಪಸ್ಥಿತಿತರಿದ್ದರು. ರೈ ಎಸ್ಟೇಟ್ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ಸಿಬ್ಬಂದಿ ಲಿಂಗಪ್ಪ ಕುದ್ಮಾನು ಕಾರ್ಯಕ್ರಮ ನಿರೂಪಣೆ ಮಾಡಿ ಸ್ವಾಗತಸಿ ವಂದಿಸಿದರು. ಪ್ರವೀಣ್ ಕುಮಾರ್ ಗುರುಂಪುನಾರ್ ಸಹಕರಿಸಿದರು.
ಸಾಮಾಜಿಕ ಮಾಧ್ಯಮ
ಹವ್ಯಕ ವಿಶೇಷ ಪ್ರಶಸ್ತಿಗಳ ಪಟ್ಟಿ ಪ್ರಕಟ : ಯಕ್ಷಗಾನ ಹಿರಿಯ ಕಲಾವಿದ ಪೆರುವೋಡಿ ನಾರಾಯಣ್ ಭಟ್ ಗೆ ಹವ್ಯಕ ವಿಭೂಷಣ ಪ್ರಶಸ್ತಿ

ಬೆಂಗಳೂರು, ಮಾ 28 : ಅಖಿಲ ಹವ್ಯಕ ಮಹಾಸಭೆಯು ನೀಡುವ ವಾರ್ಷಿಕ ಹವ್ಯಕ ವಿಶೇಷ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಲಾಗಿದೆ.
ಏಪ್ರಿಲ್ 2 ಭಾನುವಾರ ನಡೆಯುವ 80 ನೇಯ ವರ್ಷದ ಹವ್ಯಕ ಸಂಸ್ಥಾಪನೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಮಲ್ಲೇಶ್ವರದಲ್ಲಿರುವ ಹವ್ಯಕ ಭವನದಲ್ಲಿ ಭಾನುವಾರ ಸಂಜೆ 04 ಗಂಟೆಗೆ ನಡೆಯುವ ಸಂಸ್ಥಾಪನೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ತೆಂಕುತಿಟ್ಟು ಯಕ್ಷಗಾನ ಕ್ಷೇತ್ರದ ಸಾಧಕ ಪೆರುವೋಡಿ ನಾರಾಯಣ ಭಟ್ (ಹಾಸ್ಯ ಕಲಾವಿದ) ರನ್ನು ಹವ್ಯಕ ವಿಭೂಷಣ ಪ್ರಶಸ್ತಿ ಗೆ ಆಯ್ಕೆ ಮಾಡಲಾಗಿದೆ.
ಖ್ಯಾತ ಇತಿಹಾಸಕಾರರು ಮತ್ತು ಶಿಕ್ಷಣ ತಜ್ಞರಾದ ಡಾ| ಲಕ್ಷ್ಮೀಶ್ ಸೋಂದಾ, ಹಾಗೂ ಸಂಗೀತ ಕ್ಷೇತ್ರದ ಜಿ. ಎಸ್. ಹೆಗಡೆ ಸಪ್ತಕ ಹವ್ಯಕ ಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ವೈದ್ಯಕೀಯ & ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ಕಿಶನ್ ಭಾಗವತ್, ಭೂ ಸೇನೆಯ ಲೆ.ಕ.ವಿವೇಕ್ ಸಾಯ, ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಕು. ಅರ್ಪಿತಾ. ವಿ. ಎಂ, ರನ್ನು ಹವ್ಯಕ ಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಹವ್ಯಕ ಅಧ್ಯಯನ ಕೇಂದ್ರದ ವಿಶ್ರಾಂತ ನಿರ್ದೇಶಕರು
ನಾರಾಯಣ ಶಾನುಭೋಗ್ ರನ್ನು ಹವ್ಯಕ ಸೇವಾಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಆರೋಗ್ಯ
ಮೋದಿ ಸರ್ಕಾರದಿಂದ ಮತ್ತೊಂದು ದೊಡ್ಡ ಆರೋಗ್ಯ ಕ್ರಾಂತಿ !!! 1.5 ಲಕ್ಷ ಆರೋಗ್ಯ ಕೇಂದ್ರದ ಮಾದರಿ ಸಿದ್ದಪಡಿಸಿದ ಕೇಂದ್ರ ಸರ್ಕಾರ

ನವದೆಹಲಿ, ಮಾ 8 : ರಕ್ತದೊತ್ತಡ, ಸಕ್ಕರೆ ಮತ್ತು ಹೃದ್ರೋಗದಂತಹ ಗಂಭೀರ ಕಾಯಿಲೆಗಳನ್ನು ತಕ್ಷಣವೇ ಗುರುತಿಸಲು ದೇಶದಲ್ಲಿ ವಿಶಿಷ್ಟ ಆರೋಗ್ಯ ಮಾದರಿಯನ್ನ ಸಿದ್ಧಪಡಿಸಲಾಗುತ್ತಿದೆ. ಇದಕ್ಕಾಗಿ ದೇಶಾದ್ಯಂತ 1.5 ಲಕ್ಷ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಇದಕ್ಕಾಗಿ ಮೋದಿ ನೇತೃತ್ವದ ಮೋದಿ ಸರ್ಕಾರದಿಂದ ವಿವಿಧ ರಾಜ್ಯಗಳ ಜಿಲ್ಲೆಗಳು, ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ ಮನೆಗಳಿಂದ ಕೆಲವು ಹೆಜ್ಜೆ ದೂರದಲ್ಲಿರುವ 1.5 ಲಕ್ಷ ಆರೋಗ್ಯ ಕೇಂದ್ರಗಳ ರಚಿಸುವ ಮೂಲಕ ಈ ಮಾದರಿಯನ್ನು ಸಿದ್ಧಪಡಿಸಲಾಗುತ್ತಿದೆ.
ಈ ಮೂಲಕ ದೇಶದಲ್ಲಿ ಆರೋಗ್ಯ ಕ್ರಾಂತಿಯನ್ನೇ ಮಾಡಲು ಹೊರಟಿದೆ. ದೇಶದ ಜನರಿಗೆ ಉತ್ತಮ ರೀತಿಯ ಅರೋಗ್ಯಕ್ಕಾಗಿ ಚಿಕಿತ್ಸೆಗಾಗಿ ಭಾರೀ ಬದಲಾವಣೆಯನ್ನೇ ತರಲು ಬಹು ದೊಡ್ಡ ಮಾದರಿಯನ್ನು ಸಿದ್ದಪಡಿಸಿದೆ.
ಪ್ರಧಾನಿ ನರೇಂದ್ರ ಮೋದಿಯವರ ಈ ದೊಡ್ಡ ದೃಷ್ಟಿಕೋನವನ್ನ ಈಡೇರಿಸಲು ಕೇಂದ್ರ ಆರೋಗ್ಯ ಸಚಿವಾಲಯವು ತನ್ನ ಸಂಪೂರ್ಣ ಸಿದ್ಧತೆಗಳನ್ನು ಪ್ರಾರಂಭಿಸಿದೆ. ಇದಲ್ಲದೆ, ದೇಶದಲ್ಲಿ ಡ್ರೋನ್ ಗಳಿಂದ ಔಷಧಿ ಸರಬರಾಜು ಮತ್ತು ಪರೀಕ್ಷಾ ಸೇವೆಗಳಿಗೆ ಪ್ರಮುಖ ಸಿದ್ಧತೆಗಳು ಪ್ರಾರಂಭವಾಗಿವೆ.
ಯೋಜನೆಯ ಮೊದಲ ಹಂತದಲ್ಲಿ, ದೇಶದಲ್ಲಿ ಸುಮಾರು 1.5 ಲಕ್ಷಕ್ಕೂ ಹೆಚ್ಚು ಆರೋಗ್ಯ ಕೇಂದ್ರಗಳನ್ನ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಕೇಂದ್ರ ಸಚಿವಾಲಯಕ್ಕೆ ಸಂಬಂಧಿಸಿದ ಅಧಿಕಾರಿಗಳು ಹೇಳಿದ್ದಾರೆ. ಇದು ಜನರ ಮನೆಗಳಿಗೆ ಬಹಳ ಹತ್ತಿರದಲ್ಲಿರಲಿದೆ. ಈ ಆರೋಗ್ಯ ಕೇಂದ್ರಗಳನ್ನು ರಕ್ತದೊತ್ತಡ, ಮಧುಮೇಹ ಮತ್ತು ಹೃದ್ರೋಗದಂತಹ ರೋಗಗಳನ್ನ ತಕ್ಷಣವೇ ತನಿಖೆ ಮಾಡಬಹುದು ಮತ್ತು ಕ್ಲಪ್ತ ಸಮಯಕ್ಕೆ ತ್ವರಿತಗತಿಯಲ್ಲಿ ಚಿಕಿತ್ಸೆ ನೀಡಬಹುದಾಗಿದೆ.
ಮೋದಿ ಸರ್ಕಾರ ಈ ಮೊದಲು ಆಯುಷ್ಮಾನ್ ಯೋಜನೆಯನ್ನು ಜಾರಿಗೆ ತಂದಿತ್ತು. ಬಳಿಕ ಜನೌಷಧಿ ಎನ್ನುವ ಮೆಡಿಕಲ್ ನ್ನು ಸ್ಥಾಪಿಸಿ ಜನರಿಗೆ ಅತ್ಯಂತ ಅಗ್ಗದಲ್ಲಿ ಔಷಧಗಳು ಸಿಗುವಂತೆ ಮಾಡಿದ್ದರು. ಇದಾದ ಬಳಿಕ ದೇಶದಲ್ಲಿ ಮತ್ತೊಂದು ಆರೋಗ್ಯ ಕ್ರಾಂತಿ ನಡೆಸಲು ಸಜ್ಜಾಗಿದೆ. ಈ ಯೋಜನೆಯು ದೇಶದ ಜನತೆಯ ಪಾಲಿಗೆ ಹೆಚ್ಚಿನ ವರದಾನವಾಗಲಿದೆ.
ಕಾರ್ಯಕ್ರಮಗಳು
ಗಣ ರಾಜ್ಯೋತ್ಸವದ ಪ್ರಯುಕ್ತ ́ಮುಳಿಯ ರಾಷ್ಟ್ರ ಸಿಂಚನ’ Online ನೃತ್ಯ ಸ್ಪರ್ಧೆ

ಪುತ್ತೂರು: ಗಣರಾಜ್ಯೋತ್ಸವದ ಪ್ರಯುಕ್ತ ಪುತ್ತೂರಿನ ಮುಳಿಯ ಜ್ಯುವೆಲ್ಸ್ ವಿನೂತನ ಕಾರ್ಯಕ್ರಮವೊಂದನ್ನು ಪ್ರಸ್ತುತಪಡಿಸುತ್ತಿದೆ. “ಮುಳಿಯ ರಾಷ್ಟ್ರ ಸಿಂಚನ’ ಆನ್ಲೈನ್ ನೃತ್ಯ ಸ್ಪರ್ಧೆಯನ್ನು ಜನವರಿ 28ರಂದು ಮಧ್ಯಾಹ್ನ 2:00 ಗಂಟೆಗೆ ಮತ್ತು 29ರಂದು ಬೆಳಗ್ಗೆ 10:30ಕ್ಕೆ ಆಯೋಜಿಸಿದೆ.
ಸೋಲೋ ಮತ್ತು ಗ್ರೂಪ್ ಎಂಬ ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಸಲಾಗುತ್ತಿದ್ದು, ಸೋಲೋ ವಿಭಾಗದಲ್ಲಿ ಮೊದಲ 100 ಸ್ಪರ್ಧಿಗಳಿಗೆ ಅವಕಾಶವಿದೆ. ಈ ವಿಭಾಗದಲ್ಲಿ ಸ್ಪರ್ಧಿಸುವ ವಿದ್ಯಾರ್ಥಿಗಳು 12ರಿಂದ 21 ವರ್ಷ ವಯೋಮಿತಿಯೊಳಗಿನವರಾಗಿರಬೇಕು. 21 ವರ್ಷಕ್ಕೆ ಮೇಲ್ಪಟ್ಟವರು ಸಾರ್ವಜನಿಕ ವಿಭಾಗದಲ್ಲಿ ಸ್ಪರ್ಧಿಸಬಹುದಾಗಿದೆ.
ಹೆಸರು ನೋಂದಾಯಿಸಿಕೊಳ್ಳಲು ಜನವರಿ 25 ಕೊನೆಯ ದಿನಾಂಕವಾಗಿರುತ್ತದೆ. ಗ್ರೂಪ್ ವಿಭಾಗದಲ್ಲಿ ಸ್ಪರ್ಧಿಸುವವರು ಗಮನಿಸಬೇಕಾದ ಅಂಶವೆಂದರೆ, ಮೊದಲ 35 ಗುಂಪುಗಳಿಗೆ ಮಾತ್ರ ಅವಕಾಶವಿರುತ್ತದೆ.
ನಿಯಮಗಳು ಇಂತಿವೆ:
ದೇಶಭಕ್ತಿ ಗೀತೆಗೆ ಅಥವಾ ಚಲನಚಿತ್ರದ ದೇಶಭಕ್ತಿ ಗೀತೆಗೆ ನೃತ್ಯ ಮಾಡಬಹುದು.
- ಒಬ್ಬ ಸ್ಪರ್ಧಿಗೆ 2-3 ನಿಮಿಷ ಮಾತ್ರ ಅವಕಾಶವಿರುತ್ತದೆ. ಗುಂಪಿಗೆ 4-5 ನಿಮಿಷದ ಕಾಲಾವಕಾಶ ನೀಡಲಾಗುವುದು.
- ಸ್ಪರ್ಧೆಯು ಝೂಮ್ ವೇದಿಕೆಯ ಮೂಲಕ ನಡೆಯುತ್ತದೆ.
- ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
ಹೆಸರು ನೋಂದಾಯಿಸಿಕೊಳ್ಳಲು ಮತ್ತು ಹೆಚ್ಚಿನ ಮಾಹಿತಿಗಾಗಿ 9353030916 ಸಂಪರ್ಕಿಸಲು ಕೋರಲಾಗಿದೆ.
ಸ್ಪರ್ಧೆಯ ಮೊದಲನೆಯ ದಿನ ಸಾಕಷ್ಟು ಮುಂಚಿತವಾಗಿಯೇ, ಕರೆಯ ಮೂಲಕ ಸ್ಪರ್ಧಿಗಳು ತಮ್ಮ ಮಾಹಿತಿಯನ್ನು ಮತ್ತು ನಿಯಮಗಳನ್ನು ಖಚಿತಪಡಿಸಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಕೋರಲಾಗಿದೆ.

-
ಅಪರಾಧ9 hours ago
ವಿಟ್ಲ : 80 ಪ್ರಕರಣಗಳ ಸರದಾರ ʼಇತ್ತೆ ಬರ್ಪೆ ಅಬೂಬ್ಬಕರ್ʼ ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು – ಅಷ್ಟಕ್ಕೂ ಈತ ಸಿಕ್ಕಿ ಬಿದ್ದದ್ದು ಹೇಗೆ ಗೊತ್ತಾ? ಇತ್ತೆ ಬರ್ಪೆ ಹೆಸರಿನ ಹಿಂದಿದೆ ಇಂಟ್ರೆಸ್ಟಿಂಗ್ ಕಹಾನಿ
-
ಬಿಗ್ ನ್ಯೂಸ್14 hours ago
ಹುತಾತ್ಮ ಯೋಧ ಕ್ಯಾ.ಪ್ರಾಂಜಲ್ ಕುಟುಂಬಕ್ಕೆ ಚೆಕ್ ವಿತರಣೆ : ಮೊತ್ತ ತಾಯಿ-ಪತ್ನಿಗೆ ಸಮಪಾಲು ಮಾಡಿದ ಸರ್ಕಾರ
-
ಕ್ರೀಡೆ13 hours ago
Bomb Threat ಪ್ರಿಯಕರ ಕೊಟ್ಟ ಐಡಿಯಾ ನಂಬಿ ಗಂಡನ ಜೈಲಿಗೆ ಕಳುಹಿಸಲು ಆತನ ಮೊಬೈಲ್ʼನಿಂದ ಹೆಂಡತಿ ಕಳುಹಿಸಿದಳು ಬೆದರಿಕೆ ಮೆಸೇಜ್ – ಆದರೇ ಮುಂದೇನಾಯಿತು ?
-
ಕ್ರೀಡೆ10 hours ago
Jay shah: ಜಯ್ ಶಾಗೆ ಸ್ಪೋರ್ಟ್ಸ್ ಬ್ಯುಸಿನೆಸ್ ಲೀಡರ್ ಆಫ್ ದಿ ಇಯರ್ ಪ್ರಶಸ್ತಿಯ ಗರಿ – ಬಿಸಿಸಿಐ ಕಾರ್ಯದರ್ಶಿಗೆ ಈ ಗೌರವ ಸಿಕ್ಕಿದ್ದು ಯಾಕೆ ಗೊತ್ತೆ ?
-
ರಾಜಕೀಯ11 hours ago
Harish Poonja Moved Privilege motion ತನ್ನ ಮೇಲೆ ಎಫ್ ಐ ಆರ್ ದಾಖಲಿಸಿದ ಅರಣ್ಯ ಅಧಿಕಾರಿಗಳ ವಿರುದ್ದ ಸದನದಲ್ಲಿ ಹಕ್ಕು ಚ್ಯುತಿ ಮಂಡಿಸಿದ ಹರೀಶ್ ಪೂಂಜಾ – ಏನಿದು ಪ್ರಕರಣ ? ಮುಂದೇನಾಯಿತು?
-
ಸಾಮಾಜಿಕ ಮಾಧ್ಯಮ18 hours ago
Dasara Elephant Arjun Dies ಅರ್ಜುನ ಸಾವಿನ ಸುತ್ತ ಹಲವು ಅನುಮಾನ – ಮಾವುತರೊಂದಿಗೆ ಮಾತನಾಡಿದ ಕಾವಾಡಿಗರ ವಿಡಿಯೋ ವೈರಲ್ – ಅದರಲ್ಲಿದೆ ಗುಂಡೇಟಿನ ವಿಚಾರ
-
ಸಿನೆಮಾ1 day ago
Animal Box Office collection ರಣ್ ಬೀರ್ – ರಶ್ಮಿಕಾ ಜೋಡಿ ಕಮಾಲ್ : ಅನಿಮಲ್ ಬಾಕ್ಸ್ ಆಫೀಸ್ನಲ್ಲಿ ಮಾಡಿದ ಕಲೆಕ್ಷನ್ ಎಷ್ಟು ಗೊತ್ತಾ?
-
ಚಿನ್ನ-ಬೆಳ್ಳಿ ದರ19 hours ago
Gold Rate Hike:ಆಭರಣ ಪ್ರಿಯರಿಗೆ ಶಾಕಿಂಗ್ ಸುದ್ದಿ : ಭಾರತದ ಮಾರುಕಟ್ಟೆಯಲ್ಲಿ ಚಿನ್ನದ ದರ ಸಾರ್ವಕಾಲಿಕ ಜಿಗಿತ – ಮುಂದಿನ ದಿನಗಳಲ್ಲಿ ರೇಟ್ ಹೇಗಿರಲಿದೆ?