ಮಂಗಳೂರು: ಲಾಡ್ಜ್ ವೊಂದರಲ್ಲಿ ತಂಗಿದ್ದ ಭಿನ್ನ ಕೋಮಿಗೆ ಸೇರಿದ ಯುವಕ ಮತ್ತು ಯುವತಿಯನ್ನು ಬಜರಂಗದಳ ಸಂಘಟನೆಯ ಕಾರ್ಯಕರ್ತರು ಪೊಲೀಸರಿಗೊಪ್ಪಿಸಿರುವ ಘಟನೆ ಮಂಗಳೂರಿನಲ್ಲಿ ನಡೆದ ಬಗ್ಗೆ ವರದಿಯಾಗಿದೆ
ಮಂಗಳೂರಿನ ಹೊಟೇಲ್ ವೊಂದರಲ್ಲಿ ಜೋಡಿಯೊಂದು ತಂಗಿದೆ ಎಂಬ ಮಾಹಿತಿ ಪಡೆದ ಬಜರಂಗದಳದ ಕಾರ್ಯಕರ್ತರು ಅಲ್ಲಿಗೆ ಭೇಟಿ ನೀಡಿ ಅಲ್ಲಿದ್ದ ಯುವಕ ಮತ್ತು ಯುವತಿಯನ್ನು ವಿಚಾರಿಸಿದ್ದಾರೆ. ಈ ವೇಳೆ ಯುವತಿ ಹಿಂದೂ ಸಮುದಾಯದವಳು ಹಾಗೂ ಯುವಕ ಅನ್ಯ ಕೋಮಿನವ ಎನ್ನುವ ವಿಚಾರ ಬಹಿರಂಗವಾಗಿದೆ.
ಈ ವೇಳೆ ಅವರಿಬ್ಬರನ್ನು ತರಾಟೆಗೆ ತೆಗೆದುಕೊಂಡ ಸಂಘಟನೆಯ ಕಾರ್ಯಕರ್ತರು ಅವರಿಗೆ ಎಚ್ಚರಿಕೆ ನೀಡಿದಾಗಿಯೂ ಬಳಿಕ ಮಂಗಳೂರಿನ ಬಂದರು ಪೊಲೀಸ್ ಠಾಣೆಗೆ ಕರೆದೊಯಿದ್ದಿರುವುದಾಗಿಯೂ ತಿಳಿದು ಬಂದಿದೆ.

ಯುವಕ ಹಾವೇರಿ ಜಿಲ್ಲೆಯವನೆಂದು ಯುವತಿ ವಿಜಯಪುರ ಜಿಲ್ಲೆಯವಳೆಂದು ಅವರಿಬ್ಬರು ಪರಸ್ಪರ ಸಾಮಾಜಿಕ ಜಾಲಾತಾಣವೊಂದರ ಮೂಲಕ ಪರಿಚಿತರಾಗಿದ್ದಾರೆಂದು ಹೇಳಲಾಗಿದೆ.
