Ad Widget

ಸುಳ್ಯ : ಆಸಿಯಾ – ಇಬ್ರಾಹಿಂ ಕಟ್ಟೆಕಾರ್ ಪ್ರಕರಣ | ಪತಿಯನ್ನು ಪಡೆಯುವ ̄2 ವರ್ಷಗಳ ಹೋರಾಟಕ್ಕೆ ತಿಲಾಂಜಲಿ ಘೋಷಿಸಿ ಇನ್ನೂ ನನಗೂ ಆತನಿಗೂ ಸಂಬಂಧವಿಲ್ಲವೆಂದ ಆಸಿಯಾ

WhatsApp Image 2021-10-22 at 13.43.11
Ad Widget

Ad Widget

Ad Widget

ಮಂಗಳೂರು: ಅ 22 : ರಾಜ್ಯದ್ಯಂತ ಚರ್ಚೆಗೆ ಗ್ರಾಸವಾಗಿದ್ದ ಸುಳ್ಯದ  ಇಬ್ರಾಹಿಂ ಕಟ್ಟೆಕಾರ್ ಹಾಗೂ ಆಸಿಯಾ ಬೀದಿ ರಂಪಾಟ ತಾರ್ಕಿಕ ಅಂತ್ಯ ಕಾಣುವತ್ತ ಹೊರಟಿದೆ. ಪತಿಯೊಂದಿಗೆ ವಾಸ ಮಾಡಲು ಕಳೆದ ಎರಡು ವರ್ಷಗಳಿಂದ ಹೋರಾಟ ನಡೆಸುತ್ತಿದ್ದ ಆಸಿಯಾ ಇದ್ದಕ್ಕಿದಂತೆ ತನ್ನ ಹೋರಾಟದಿಂದ ಹಿಂದೆ ಸರಿಯುವ ಮಾತುಗಳನ್ನು ಆಡಿದ್ದಾರೆ.

Ad Widget

Ad Widget

Ad Widget

Ad Widget

ಮಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತನ್ನನ್ನೂ ವಿವಾಹವಾಗಿದ್ದ  ಸುಳ್ಯದ ಇಬ್ರಾಹಿಂ ಕಟ್ಟೆಕಾರ್ ಅವರ ಮನ ಒಲಿಸಲು ಸಾಕಷ್ಟು ಪ್ರಯತ್ನ ಪಟ್ಟೆ. ಎರಡು ವರ್ಷ ಇದಕ್ಕಾಗಿ ಸಮಯ ವಿನಿಯೋಗಿಸಿದೆ. ಇನ್ನು ಅವರಿಗೂ ನನಗೂ ಯಾವುದೇ ಸಂಬಂಧ ಇಲ್ಲ. ನಾನು ಸ್ವತಂತ್ರವಾಗಿ ಜೀವನ ನಡೆಸಲು ನಿರ್ಧರಿಸಿದ್ದೇನೆ. ನಾನಿನ್ನು ಆಸಿಯಾ ಮಾತ್ರ ಎಂದು ತಿಳಿಸಿದ್ದಾರೆ

Ad Widget

Ad Widget

Ad Widget

Ad Widget

 ವಿವಿಧ ಹಿಂದು ಹಾಗು ಮುಸ್ಲಿಂ ಸಂಘಟನೆಗಳು, ಅಧಿಕಾರಿಗಳು, ಧಾರ್ಮಿಕ ಮುಖಂಡರು ನಮ್ಮನ್ನೂ ಒಂದು ಮಾಡಲು ಪ್ರಯತ್ನಿಸಿದರು. ಆದರೆ ಯಾವುದೇ ಪ್ರಯೋಜನ ಆಗಿಲ್ಲ.  ಹೀಗಾಗಿ ಹೋರಾಟದಿಂದ ಹಿಂದೆ ಸರಿದು ನನ್ನದೇ ಆದ ಸ್ವಂತ ಬದುಕು ಕಟ್ಟಿಕೊಳ್ಳುವುದಾಗಿ ಅವರು ತಿಳಿಸಿದರು

ಕೇರಳದ ಕಣ್ಣೂರಲ್ಲಿ ಕುಟುಂಬಸ್ಥರಿದ್ದು ನಾನು ಹಿಂದು ಧರ್ಮಕ್ಕೆ ಮರಳಿದರೆ ಸೇರಿಸಿಕೊಳ್ಳುವುದಾಗಿ ಹೇಳಿದರು. ಅದಕ್ಕೆ ನಾನು ಒಪ್ಪಿಲ್ಲ. ಸ್ವಲ್ಪ ಸಮಯ ಸುಳ್ಯದಲ್ಲಿದ್ದು ಮತ್ತೆ ಉದ್ಯೋಗಕ್ಕೆ ಸೇರಲು ನಿರ್ಧರಿಸಿದ್ದೇನೆ. ಸಮಾಜ ಸೇವೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಾಗಿ ಆಸಿಯಾ ಹೇಳಿದರು.

Ad Widget

Ad Widget

ಏನಿದು ಪ್ರಕರಣ ?

ಅಸಿಯಾ ಕೇರಳದ ಕಣ್ಣೂರಿನ  ಹಿಂದೂ  ಕುಟುಂಬವೊಂದರಲ್ಲಿ ಜನಿಸಿದ್ದು ಆಕೆಗೆ ಶಾಂತಿ ಜೂಬಿ ಎಂದು ಹೆಸರಿಡಲಾಗಿತ್ತು. ಹಿಂದೂ ಧರ್ಮಿಯರೊಬ್ಬರನ್ನು ಆಕೆ ಮದುವೆ ಕೂಡ ಆಗಿದ್ದರು. ಕೆಲ ವರ್ಷಗಳ ಹಿಂದೆ ಆಕೆಗೆ  ಸುಳ್ಯದ ಕಟ್ಟೆಕಾರ್‌ ಕುಟುಂಬದ ಇಬ್ರಾಹಿಂ ಎಂಬವರ ಪರಿಚಯ ಫೇಸ್​ಬುಕ್​ನಲ್ಲಿ ಆಗಿತ್ತೆನ್ನಲಾಗಿದೆ. “ಪರಿಚಯ ಪ್ರೀತಿಗೆ ತಿರುಗಿ  ಮೊದಲ ಪತಿಯನ್ನು ತೊರೆದು 2017ರಲ್ಲಿ ಮುಸ್ಲಿಂ ಸಂಪ್ರದಾಯದಂತೆ ಖಲೀಲ್ ರನ್ನು ನಿಖಾ ಆಗಿದ್ದೇನೆ  ಮದುವೆಗೂ ಮುನ್ನ ಇಸ್ಲಾಂಗೆ ಮತಾಂತರವಾಗಿ ಆಸಿಯಾ ಎಂದು ಹೆಸರು ಬದಲಿಸಿಕೊಂಡಿದೆ” ಎಂದು ಆಸಿಯಾ ಮಾಧ್ಯಮಗಳಿಗೆ ತಿಳಿಸಿದರು.

ಮದುವೆಯಾದ ಮೂರು ವರ್ಷಗಳ ನಂತರ ಇಬ್ರಾಹಿಂ ಏಕಾಏಕಿ ಮನೆಯಿಂದ ನಾಪತ್ತೆಯಾಗಿದ್ದು ಆಕೆ ಪತಿಯನ್ನು ಹುಡುಕಿಕೊಂಡು ಸುಳ್ಯ ಬಂದಿರುವುದಾಗಿಯೂ ಅಲ್ಲಿ  ಇಬ್ರಾಹಿಂ ಮನೆಯವರು  ತನ್ನನ್ನೂ ಮನೆಯಿಂದ ಹೊರಗೆ ಹಾಕಿದರು ಎಂದು ಆರೋಪಿಸಿ ಆಕೆ ಧರಣಿ ಹೋರಾಟ ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದು ಇದು ರಾಜ್ಯದ್ಯಂತ ಚರ್ಚೆಗೆ ಕಾರಣವಾಗಿತ್ತು.

Ad Widget

Leave a Reply

Recent Posts

ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಘೋಷಿಸಿರುವ 4 ಗ್ಯಾರಂಟಿ ಯೋಜನೆಗಳಿಗೆ ಸಿಗುತ್ತಿರುವ ಸ್ಪಂದನೆಯಿಂದ ಕಂಗೆಟ್ಟಿರುವ ಬಿಜೆಪಿ, ಉರಿ ನಂಜೇಗೌಡರಂತಹ ಕಾಲ್ಪನಿಕ ವಿಚಾರಗಳ ಮೂಲಕ ಜನರ ದಾರಿ ತಪ್ಪಿಸಲು ಯತ್ನಿಸುತ್ತಿದೆ : ಅಮಳ ರಾಮಚಂದ್ರ  

error: Content is protected !!
%d bloggers like this: