Ad Widget

ಪುತ್ತೂರು: ಬಡಗನ್ನೂರಿನ ದಲಿತ ಬಾಲಕಿಯ ಅತ್ಯಾಚಾರ ಹಾಗೂ ಆಕೆ ಮಗುವಿಗೆ ಜನ್ಮ ನೀಡಿದ ಪ್ರಕರಣ : ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತ

Court-Order-1
Ad Widget

Ad Widget

ಪುತ್ತೂರು ತಾಲೂಕಿನ ಬಡಗನ್ನೂರಿನ ದಲಿತ ಬಾಲಕಿಯ ಅತ್ಯಾಚಾರ ಹಾಗೂ ಆಕೆ ಮಗುವಿಗೆ ಜನ್ಮ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ  ವ್ಯಕ್ತಿಯೊಬ್ಬರು ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪುತ್ತೂರು ನ್ಯಾಯಾಲಯ ಅ 22 ರಂದು ತಿರಸ್ಕರಿಸಿದೆ.

Ad Widget

Ad Widget

Ad Widget

Ad Widget

 ಪುತ್ತೂರು ತಾಲೂಕಿನ ಸುಳ್ಯಪದವು ಸಮೀಪದ ಪಡವನ್ನೂರು ಗ್ರಾಮದ ಕುದ್ಕಾಡಿ ನಾರಾಯಣ ರೈ (73)ಯವರು ಜಾಮೀನು ಕೋರಿ ತನ್ನ ವಕೀಲರ ಮೂಲಕ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು ವಿಚಾರಣೆ ನಡೆಸಿದ ಪುತ್ತೂರು 5 ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.

Ad Widget

Ad Widget

Ad Widget

Ad Widget

ಸಂತ್ರಸ್ತ ಬಾಲಕಿ (17) ತನ್ನ ಮೇಲೆ ನಿರಂತರ ಅತ್ಯಾಚಾರ ನಡೆದ ಬಗ್ಗೆ  ದೂರು ನೀಡಿದ್ದು ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಠಾಣಾ ಅ.ಕ್ರ ಸಂಖ್ಯೆ : 80/21 ರಂತೆ ಪ್ರಕರಣ ದಾಖಲಾಗಿತ್ತು.  ಐಪಿಸಿ ಸೆಕ್ಷನ್‌ 376(2), 506, ಪೊಕ್ಸೋ ಹಾಗೂ ದಲಿತ ದೌರ್ಜನ್ಯ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.  ಈ ಪ್ರಕರಣದಡಿ ಒರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆಯೂ ಸೆ. 5 ರಂದು ಮಗುವಿಗೆ ಜನ್ಮ ನೀಡಿದ್ದಳು.

ಸಂತ್ರಸ್ತೆಯೂ ನ್ಯಾಯಾಲಯದಲ್ಲಿ ನೀಡಿದ ಹೇಳಿಕೆಯಲ್ಲಿ ನಾರಾಯಣ ರೈ ಯವರ ಹೆಸರನ್ನು ಉಲ್ಲೇಖಿಸಿದ ಹಿನ್ನಲೆಯಲ್ಲಿ ಅವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು ಎಂದು ಹೇಳಲಾಗುತ್ತಿದೆ.

Ad Widget

Ad Widget

ದಲಿತ ಬಾಲಕಿಯ ಅತ್ಯಾಚಾರದ ಈ ಪ್ರಕರಣವೂ ಪುತ್ತೂರಿನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.  ಈ ಪ್ರಕರಣದಲ್ಲಿ ನೈಜ ಆರೋಪಿಯನ್ನು ಪೊಲೀಸರು ಬಂಧಿಸಿಲ್ಲ ಎಂದು ಆರೋಪಿಸಿ ಜಿಲ್ಲಾ ದಲಿತ ಸಮನ್ವಯ ಸಮಿತಿಯಿಂದ ಪುತ್ತೂರಿನ ದರ್ಭೆಯಲ್ಲಿ ಪ್ರತಿಭಟನೆ ಸಭೆಯನ್ನು ಅ 22ರಂದು ಆಯೋಜಿಸಲಾಗಿತ್ತು. ಪೊಲೀಸರು ಬಂಧಿಸಿರುವ ಆರೋಪಿಯೂ ಸಂತ್ರಸ್ತೆಯ ಸಂಬಂಧಿಯಾಗಿದ್ದೂ ನೈಜ ಆರೋಪಿಯನ್ನು ರಕ್ಷಿಸುವ ಸಲುವಾಗಿ ಆತನನ್ನು ಸಂಪ್ಯ ಪೊಲೀಸರು ಬಂಧಿಸಿದ್ದಾರೆ ಎಂದು ಪ್ರತಿಭಟನಾ ಸಭೆಯಲ್ಲಿ ಆರೋಪಿಸಿದ್ದರು.

Ad Widget

Leave a Reply

Recent Posts

error: Content is protected !!
%d bloggers like this: