ಪುತ್ತೂರು: ನಡೆದುಕೊಂಡು ಹೋಗುತ್ತಿದ್ದಾಗ ತಂಡವೊಂದು ನಮ್ಮ ಮೇಲೆ ಹಲ್ಲೆ ನಡೆಸಿದೆ ಎಂದು ಆರೋಪಿಸಿ ಇಬ್ಬರು ಪುತ್ತೂರಿನ ಸರಕಾರಿ ಆಸ್ಫತ್ರೆಯಲ್ಲಿ ದಾಖಲಾದ ಘಟನೆ ಅ 21 ರಂದು ಸಂಜೆ ನಡೆದಿದೆ.
ಪ್ರಥಮ ಪಿಯುಸಿ ವಿದ್ಯಾರ್ಥಿ ಮಹಮ್ಮದ್ ಜಿಯಾದ್ (16) ಹಾಗೂ ಮಹಮ್ಮದ್ ಇಜಾಜ್ ಆಸ್ಫತ್ರೆಗೆ ದಾಖಲಾದವರು. ಗಾಯಾಳುಗಳಿಬ್ಬರು ಸಾಲ್ಮರ ನಿವಾಸಿಗಳು ಎಂದು ತಿಳಿದು ಬಂದಿದೆ. ಪುತ್ತೂರಿನ ಕೊಂಬೆಟ್ಟು ಬಳಿ ಹಲ್ಲೆ ನಡೆಸಿದ್ದಾರೆಂದು ಗಾಯಾಳುಗಳು ತಿಳಿಸಿದ್ದು ಪುತ್ತೂರು ನಗರ ಠಾಣೆ ಪೊಲೀಸರು ಆಸ್ಪತ್ರೆಗೆ ಆಗಮಿಸಿ ಗಾಯಾಳುಗಳ ಹೇಳಿಕೆ ಪಡೆಯುತ್ತಿದ್ದಾರೆ.
ಕಾಲೇಜ್ ಬಿಟ್ಟ ಬಳಿಕ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ವಿದ್ಯಾರ್ಥಿಗೆ ವಾಹನವೊಂದು ತಾಗಿದ್ದು ಈ ವೇಳೆ ಮಾತಿನ ಚಕಮಕಿ ನಡೆದು ವಾಹನದಲ್ಲಿದ್ದವರು ವಿದ್ಯಾರ್ಥಿಗೆ ಹೊಡೆದಿದ್ದಾರೆ. ಇದನ್ನು ನೋಡಿ ಬಿಡಿಸಲು ಬಂದ ಇನ್ನೊಬ್ಬನಿಗೂ ಆ ತಂಡ ಹಲ್ಲೆ ನಡೆಸಿದೆ ಎಂದು ಗಾಯಾಳುಗಳು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.
