70ರ ಹರೆಯದ ವೃದ್ದನೊಬ್ಬ ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಪ್ರಕರಣ ಇದಾಗಿದ್ದು ಆರೋಪಿಯನ್ನು ರಕ್ಷಿಸದೇ ಬಿಜೆಪಿ ಹಾಗೂ ಅರ್‌ಎಸ್‌ಎಸ್ ಬಂಧಿಸಲು ಸಹಕರಿಸಬೇಕು
ಪುತ್ತೂರು : ಅ 21: ಪುತ್ತೂರು ತಾಲೂಕಿನ ಬಡಗನ್ನೂರು ಎಂಬಲ್ಲಿ ದಲಿತ ಸಮುದಾಯಕ್ಕೆ ಸೇರಿದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದ್ದು ಆಕೆ ಗರ್ಭಿಣಿಯಾಗಿ ಒಂದೂವರೆ ತಿಂಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದು ಈ ಪ್ರಕರಣ ತನಿಖೆ ಸಮರ್ಪಕವಾಗಿ ನಡೆಯುತ್ತಿಲ್ಲ. ಪ್ರಭಾವಶಾಲಿ ಆರೋಪಿಯೊಬ್ಬನನ್ನು ರಕ್ಷಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಮತ್ತು ವೈದ್ಯಾಧಿಕಾರಿಗಳು ನೈಜತೆಯನ್ನು ಮರೆಮಾಚುತ್ತಿದ್ದಾರೆ. ಇದರಿಂದ ಸಂತ್ರಸ್ತ ಬಾಲಕಿ ಅನ್ಯಾಯಕ್ಕೆ ಒಳಗಾಗಿದ್ದಾಳೆ. ಅವಳಿಗೆ ನ್ಯಾಯ ದೊರಕಿಸಿಕೊಡಲು ಹಾಗೂ ಅವಳ ನೋವಿಗೆ ಸ್ಪಂದಿಸುವಲ್ಲಿ ಜಿಲ್ಲೆಯ ಅಡಳಿತ ಪಕ್ಷದ ಜನಪ್ರತಿನಿಧಿಗಳು, ವಿಪಕ್ಷ ಕಾಂಗ್ರೇಸ್ ಪಕ್ಷ ಹಾಗೂ ಜಿಲ್ಲೆಯ ಉನ್ನತ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಮೊಗೇರ ಸಂಘದ ರಾಜ್ಯಾಧ್ಯಕ್ಷ ವಿಶ್ವನಾಥ ಬೆಂಗಳೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಗುರುವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ “ಸಂತ್ರಸ್ತೆಯೂ ತನ್ನ ದೂರಿನಲ್ಲಿ ಬಡಗನ್ನೂರು ಗ್ರಾಮದ ತೋಟದ ಯಜಮಾನ ಕುದ್ಕಾಡಿ ನಾರಾಯಣ ರೈಯವರ ಹೆಸರನ್ನು ಉಲ್ಲೇಖಿಸಿದ್ದು ಆದರೇ ಪೊಲೀಸ್ ಇಲಾಖೆ ನೈಜ ಆರೋಪಿಯನ್ನು ಈ ತನಕ ಬಂಧಿಸಿಲ್ಲ. ಪೊಲೀಸ್ ಇಲಾಖೆ ಮತ್ತು ವೈದ್ಯಾಧಿಕಾರಿಗಳು ನೈಜತೆಯನ್ನು ಮರೆಮಾಚಿದ್ದಾರೆ. ಆರೋಪಿಯನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ರಾಜ್ಯ ಮಟ್ಟದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಪ್ರಕರಣ ತಿರುಚಲಾಗಿದೆ
ಆರೋಪಿ ನಾರಾಯಣ ರೈ ಆರ್‌ಎಸ್‌ಎಸ್ ಕಾರ್ಯಕರ್ತ ಹಾಗೂ ಬಿಜೆಪಿ ಮುಖಂಡರಾಗಿರುವ ಕಾರಣ ಪ್ರಕರಣವನ್ನು ತಿರುಚಲಾಗಿದೆ. ಹೀಗಾಗಿಯೇ ಪೊಲೀಸರು ಸಂತ್ರಸ್ತ ಬಾಲಕಿಯ ಸಹೋದರನನ್ನೇ ಆರೋಪಿ ಎಂದು ಬಿಂಬಿಸಿ ಬಂಧಿಸಿದ್ದಾರೆ. ಆರ್‌ಎಸ್‌ಎಸ್ ನ ಒಳ್ಳೆ ಕೆಲಸಗಳ ಬಗ್ಗೆ ನನಗೆ ಸದಾಭಿಪ್ರಾಯವಿದೆ. ಆದರೇ ಆರೋಪಿಗಳ ಬೆಂಬಲಕ್ಕೆ ಅದು ನಿಲ್ಲಬಾರದು. ಬಿಜೆಪಿಗೆ ನೈಜ ಜನಪರವಾದ ಕಾಳಜಿಯಿದ್ದಲ್ಲಿ ತಕ್ಷಣವೇ ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಅಗ್ರಹಿಸಿದರು
“70 ವರ್ಷ ದಾಟಿದ ವೃದ್ದ ಅಪ್ರಾಪ್ತೆಯನ್ನು ಲೈಂಗಿಕವಾಗಿ ಬಳಸಿಕೊಂಡಂತಹ ಅತ್ಯಂತ ಗಂಭೀರ ಪ್ರಕರಣದಲ್ಲೂ ಪುತ್ತೂರು ಶಾಸಕ ಸಂಜೀವ ಮಠಂದೂರು, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಕಲ್ಯಾಣ ಇಲಾಖೆ, ಮಾನವ ಹಕ್ಕುಗಳ ಕಾರ್ಯಕರ್ತರು, ಸ್ಥಳೀಯ ಪಂಚಾಯತ್ ಹಾಗೂ ಜಿಲ್ಲಾ ಉಸ್ತುವರಿ ಸಚಿವರು ಕೂಡಾ ಹೇಳಿಕೆ ನೀಡಿಲ್ಲ, ಬಾಲಕಿಗೆ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿಲ್ಲ ಅಥಾವ ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನೀಡಿಲ್ಲ ಅಲ್ಲದೆ ಅಡಳಿತರೂಢ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ಬಾಲಕಿಗೆ ನ್ಯಾಯ ದೊರಕಿಸಿಕೊಡಲು ಮುಂದಾಗಿಲ್ಲ. ಇಂತಹ ಕಷ್ಟಕಾಲದಲ್ಲೂ ಇವರು ನೆರವಿಗೆ ಬರುತ್ತಿಲ್ಲ ಎಂದಾದರೇ ಅವರ ಅಗತ್ಯವೇನು ?” ಎಂದು ಅವರು ಹೇಳಿದರು.
“ಈ ಪ್ರಕರಣದಲ್ಲಿ ಸಂತ್ರಸ್ತೆಯ ಜಾತಿಯನ್ನು ನೋಡದೆ ಆಕೆ ದಲಿತ ಸಮುದಾಯದವಳು ಎಂದು ಪರಿಗಣಿಸದೇ ಎಲ್ಲ ಸಮುದಾಯದ ಸಂಘಟನೆಗಳು ಮುಖಂಡರುಗಳು ಬಾಲಕಿಗೆ ನ್ಯಾಯ ದೊರಕಿಸಿಕೊಡಲು ಶ್ರಮಿಸಬೇಕು. ಅಲ್ಲದೇ ಆರೋಪಿ ನಾರಾಯಣ ರೈ ಹಾಗೂ ಆ ಮಗುವಿನ ಡಿಎನ್‌ಎ ಟೆಸ್ಟ್ ಕಡ್ಡಾಯವಾಗಿ ಮಾಡಬೇಕು” ಎಂದು ಅವರು ಒತ್ತಾಯಿಸಿದರು.
ಸದ್ಯ ಆ ಬಾಲಕಿ ತಂದೆಯಿಲ್ಲದ ಆ ಒಂದೂವರೆ ತಿಂಗಳ ಸಣ್ಣ ಮಗುವಿನ ಜತೆ ಮಳೆಗೆ ನೀರು ಸೋರುವ ಮನೆಯಲ್ಲಿ ವಾಸವಾಗಿದ್ದಾಳೆ. ಆಕೆಯ ಪರಿಸ್ಥಿತಿಯನ್ನು ನೋಡುವಾಗ ಎಂಥಾವರಿಗೂ ನೋವು ಆಗುತ್ತಾದೆ, ಮರುಕ ಉಂಟಾಗುತ್ತಾದೆ. ಹಾಗಾಗಿ ಎಲ್ಲರೂ ಆಕೆಗೆ ನ್ಯಾಯ ಒದಗಿಸಲು ನೆರವಾಗಬೇಕೆಂದು ಅವರು ಮನವಿ ಮಾಡಿದರು.

ದಲಿತ ಸಂಘಟನೆಗಳ ಸಮನ್ವಯ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಆನಂದ ಬೆಳ್ಳಾರೆ ಮಿತ್ತಬೈಲು, ಮುಖಂಡರಾದ ರಮೇಶ್ ಕೋಟ್ಯಾನ್, ಜಯಪ್ರಕಾಶ್ ಕನ್ಯಾಡಿ, ಅಶೋಕ್ ಕೊಂಚಾಡಿ, ಸೀತಾರಾಮ ಕೊಂಚಾಡಿ ಉಪಸ್ಥಿತರಿದ್ದರು.