ಪಾಣಾಜೆ,ಅ.21: ಪಾಣಾಜೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ದಿನಾಂಕ 21-10-2021 ರಂದು ಗುರುವಾರ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಭಾರತಿ ಭಟ್ ಇವರ ಅಧ್ಯಕ್ಷತೆಯಲ್ಲಿ ಜರಗಿತು.
ಸಾರ್ವಜನಿಕ ಅರ್ಜಿಗಳು, ರಸ್ತೆ ಅಭಿವೃದ್ಧಿ, ಕುಡಿಯುವ ನೀರು ಹಾಗೂ ಸ್ವಚ್ಛತೆ, ನರೇಗಾ ಪ್ರಗತಿ (ಎರೆಹುಳು ತೊಟ್ಟಿ, ಪೌಷ್ಠಿಕ ಕೈ ತೋಟ, ಕಾಲೋನಿಗಳಲ್ಲಿ ಸೋಕ್ ಪಿಟ್ ರಚನೆ ಹಾಗೂ ರುದ್ರಭೂಮಿ ನಿರ್ಮಾಣ) ಗಳ ಕುರಿತು ಚರ್ಚೆ ನಡೆಸಲಾಯಿತು. ಕರ್ನಾಟಕ ಹಾಗೂ ಕೇರಳ ಗಡಿ ಭಾಗದ ರಸ್ತೆಯಾದ ಹಂಟ್ಯಾರ್- ಬೆಟ್ಟಂಪಾಡಿ -ಪಾಣಾಜೆ ಸ್ವರ್ಗ- ಪೆರ್ಲ ರಸ್ತೆಯು ಅಂತಾರಾಜ್ಯ ಸಂಪರ್ಕ ರಸ್ತೆಯಾಗಿದ್ದು ಇದನ್ನು ಕೇಂದ್ರ- ರಾಜ್ಯ ಸರಕಾರದ ವಿಶೇಷ ಯೋಜನೆಯಡಿಯಲ್ಲಿ ಮೇಲ್ದರ್ಜೆಗೆ ಏರಿಸಲು ಮಾನ್ಯ ಶಾಸಕರು ಹಾಗೂ ಸಂಸದರಿಗೆ ಮನವಿ ನೀಡುವ ಕುರಿತು ಅಧ್ಯಕ್ಷೆ ಶ್ರೀಮತಿ ಭಾರತಿ ಭಟ್ ಅವರು ಸಭೆಯಲ್ಲಿ ಪ್ರಸ್ತಾಪಿಸಿದರು.
ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿ ಹಾಗೂ ಕಲ್ಲಡ್ಕ- ವಿಟ್ಲ -ಚೆರ್ಕಳ ರಸ್ತೆಗೆ ಹತ್ತಿರದ ಲಿಂಕ್ ರಸ್ತೆಯಾಗಿ ಉಪಯೋಗಿಸಲು ಸಂಟ್ಯಾರ್ – ಪೆರ್ಲ ರಸ್ತೆಯು ಅನುಕೂಲಕರವಾಗಿರುವುದರಿಂದ ಇದನ್ನು ಮೇಲ್ದರ್ಜೆಗೆ ಏರಿಸಲು ಮನವಿ ನೀಡುವ ಕುರಿತು ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಸಾರ್ವಜನಿಕ ಶೌಚಾಲಯ, ಸಂತೆ ಮಾರುಕಟ್ಟೆ ಹಾಗೂ ವಾಹನ ಪಾರ್ಕಿಂಗ್ ವ್ಯವಸ್ಥೆಗೆ ಸ್ಥಳಾವಕಾಶಕ್ಕಾಗಿ ಲೋಕೋಪಯೋಗಿ ಇಲಾಖೆಗೆ ಮನವಿ ನೀಡುವ ಬಗ್ಗೆಯೂ ನಿರ್ಣಯ ಕೈಗೊಳ್ಳಲಾಯಿತು.
ಉಪಾಧ್ಯಕ್ಷ ಅಬೂಬಕ್ಕರ್ ಕೆ., ಸದಸ್ಯರಾದ ಸುಭಾಸ್ ರೈ ಚಂಬರಕಟ್ಟ, ಮೋಹನ್ ನಾಯ್ಕ, ಜಯಶ್ರೀ ದೇವಸ್ಯ, ಸುಲೋಚನಾ,ವಿಮಲಾ, ನಾರಾಯಣ ನಾಯಕ್ ಕೃಷ್ಣಪ್ಪ ಪೂಜಾರಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಂದ್ರಮತಿಯವರು ಉಪಸ್ಥಿತರಿದ್ದರು. ಸಿಬ್ಬಂದಿಗಳು ಸಹಕರಿಸಿದರು.
ಮಧ್ಯಾಹ್ನ ಮೂರು ಗಂಟೆಗೆ ಕುಡಿಯುವ ನೀರಿಗೆ ಸಂಬಂಧಪಟ್ಟ ಹಳೇ ಸಾಮಗ್ರಿಗಳು (ಪಂಪ್ ಪೈಪ್ ಇತ್ಯಾದಿ) ಹಾಗೂ ಇತರ ಹಳೇ ಸಾಮಗ್ರಿಗಳು ಮತ್ತು ಆರ್ಲಪದವು ಕೆಳಗಿನ ಬಸ್ಟಾಂಡ್ ಬಳಿಯಲ್ಲಿರುವ ಪಂಚಾಯತ್ ಅಧೀನದಲ್ಲಿರುವ ಕೊಠಡಿಯ ಏಲಂ ಪ್ರಕ್ರಿಯೆ ನಡೆಯಿತು.