Ad Widget

ಬೆಳಿಗ್ಗೆ ಜೈಲಿನಲ್ಲಿರುವ ಮಗನ ಬೇಟಿ ಮಾಡಿದ ಶಾರುಖ್‌ ಖಾನ್ – ಮಧ್ಯಾಹ್ನ ಬಾಲಿವುಡ್‌ ಬಾದ್‌ ಶಾಹನ ಮನೆಗೆ ಎನ್ಸಿಬಿ ಅಧಿಕಾರಿಗಳ ದಾಳಿ | ಅರ್ಯನ್‌ ಗೆಳತಿ ಉದಯೋನ್ಮುಖ ನಟಿ ಅನನ್ಯ ಪಾಂಡೆಗೂ ಸಮನ್ಸ್

sharukhananya
Ad Widget

Ad Widget

Ad Widget

ಮುಂಬೈ: ವಿಲಾಸಿ ಹಡಗಿನಲ್ಲಿ  ಡ್ರಗ್ಸ್​ ಪಾರ್ಟಿ ಮಾಡಿದ ಆರೋಪದಲ್ಲಿ ಮಗ ಬಂಧಿತನಾದ ಕೆಲ ದಿನಗಳ ಬಳಿಕ ಇದೀಗ  ಬಾಲಿವುಡ್​ ನಟ ಶಾರುಖ್​ ಖಾನ್​  ನಿವಾಸದ ಮೇಲೂ ಎನ್​ಸಿಬಿ ಅಧಿಕಾರಿಗಳು ದಾಳಿ  ನಡೆಸಿದ್ದಾರೆ. ಉದಯೋನ್ಮುಖ  ನಟಿ ಅನನ್ಯ ಪಾಂಡೆ ನಿವಾಸದ ಮೇಲೂ ದಾಳಿ ಮಾಡಿದ್ದು, ಇಂದು ಮಧ್ಯಾಹ್ನ2 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಆಕೆಗೆ ಸಮನ್ಸ್​ ಜಾರಿ ಮಾಡಿದೆ.

Ad Widget

Ad Widget

Ad Widget

Ad Widget

ಅಕ್ಟೋಬರ್ 2 ರಂದು ಕಾರ್ಡೆಲಿಯ ಕ್ರೂಸ್​ ಶಿಪ್​ನಲ್ಲಿ ಪಾರ್ಟಿ ನಡೆಯುತ್ತಿದ್ದ ವೇಳೆ ಮಾದಕ ದ್ರವ್ಯ ನಿಗ್ರಹ ಪಡೆ  ದಾಳಿ ನಡೆಸಿ ಶಾರೂಖ್‌ ಪುತ್ರ ಅರ್ಯನ್‌ ಖಾನ್‌ ಸಹಿತ 8 ಮಂದಿಯನ್ನು ಅದೀಕಾರಿಗಳು ಬಂಧಿಸಿದ್ದರು. ಸದ್ಯ ಆರ್ಯನ್‌ ಖಾನ್​ನನ್ನು   ಮುಂಬೈನ ಅರ್ಥರ್​ ರೋಡ್​ ಜೈಲಿನಲ್ಲಿಡಲಿದಾಗಿದೆ.

Ad Widget

Ad Widget

Ad Widget

Ad Widget

ಮಗನ ಬಂಧನವಾದ 19 ದಿನಗಳ ಬಳಿಕ ಇದೇ ಮೊದಲ ಬಾರಿಗೆ  ಇಂದು(ಗುರುವಾರ) ಬೆಳಗ್ಗೆ ಜೈಲಿನಲ್ಲಿ ಶಾರುಖ್​ ಖಾನ್ ಅರ್ಯನ್‌ ಖಾನ್‌ ​ ಭೇಟಿ ಮಾಡಿದ್ದರು. ಇದರ ಬೆನ್ನಲ್ಲೇ ಶಾರುಖ್​ ನಿವಾಸ ‘ಮನ್ನತ್’ ಮೇಲೆ ಎನ್​ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

 ಇನ್ನೂ  ಅನನ್ಯ ಪಾಂಡೆ ಮನೆಗೆ ತೆರಳಿದ ಎನ್​ಸಿಬಿ ಅಧಿಕಾರಿಗಳು ಮಧ್ಯಾಹ್ನ 2 ಗಂಟೆಗೆ ಮುನ್ನ ಎನ್​ಸಿಬಿ ಮುಂದೆ ಹಾಜರಾಗಬೇಕೆಂದು ಆಕೆಗೆ ಸಮನ್ಸ್​ ನೀಡಿದ್ದಾರೆ. ಆರ್ಯನ್​ ಖಾನ್​ ವಾಟ್ಸಾಪ್​ ಚ್ಯಾಟ್​ನಲ್ಲಿ ಅನನ್ಯಾರೊಂದಿಗೆ ಡ್ರಗ್ಸ್​ ಬಗ್ಗೆ ಮಾತನಾಡಿರುವುದು ಕಂಡುಬಂದಿರುವ ಹಿನ್ನೆಲೆಯಲ್ಲಿ ಆಕೆಯ ಮೊಬೈಲ್​ ಫೋನನ್ನೂ ಎನ್​ಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

Ad Widget

Ad Widget
Ad Widget

Leave a Reply

Recent Posts

error: Content is protected !!
%d bloggers like this: