ಸುಳ್ಯ: ಚಲಿಸುತ್ತಿದ್ದ ಕಾರಿನಲ್ಲಿ ಇದ್ದಕ್ಕಿದ್ದಂತೆ ಹೊಗೆ ಕಾಣಿಸಿ ಬಳಿಕ ಬೆಂಕಿ ಹೊತ್ತಿಕೊಂಡು ಉರಿದ ಹಾಗೂ ಈ ವೇಳೆ ಕಾರಿನಲ್ಲಿ ಚಾಲಕನೂ ಲಾಕ್ ಆದ ಮತ್ತೂ ಕೊನೆ ಕ್ಷಣದಲ್ಲಿ ಅಶ್ಚರ್ಯಕರವಾಗಿ ಪಾರಾದ ಘಟನೆ ಸುಳ್ಯ ತಾಲೂಕಿನ ಅಜ್ಜಾವರ ಎಂಬಲ್ಲಿ ಅ 20 ರ ರಾತ್ರಿ ನಡೆದಿದೆ.
ಭುವನ್ ಅತ್ಯಾಡಿಯವರು ಚಲಾಯಿಸುತ್ತಿದ್ದ ಮಾರುತಿ ವ್ಯಾಗನರ್ ಕಾರು ಬೆಂಕಿಗೆ ಅಹುತಿಯಾದ ಕಾರು. ದುರ್ಘಟನೆಯೂ ಅಜ್ಜಾವರ ಗ್ರಾಮದ ಮಾವಿನಪಳ್ಳ ಎಂಬಲ್ಲಿ ಸಂಭವಿಸಿದೆ.
ನಿನ್ನೆ ರಾತ್ರಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಭುವನ್ ರವರು ಕಾರಿನಲ್ಲಿ ಹೊರಟು ಮಾವಿನಪಳ್ಳ ರಸ್ತೆ ತಲುಪಿದ ವೇಳೆ ಕಾರಿನ ಬೋನೆಟ್ ನಿಂದ ಹೊಗೆ ಬರಲಾರಂಭಿಸಿದೆ.

ಇದನ್ನು ಗಮನಿಸಿದ ಭುವನ್ ಕಾರನ್ನು ಬದಿಗೆ ನಿಲ್ಲಿಸಿದರು. ಈ ವೇಳೆ ಕಾರ್ ಏಕಾಏಕಿ ಲಾಕ್ ಆಗಿದೆ. ಕೆಲ ಸಮಯ ಕಳೆಯುವುದರೊಳಗಡೆ ಎದುರು ಬಾನೆಟ್ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಈ ವೇಳೆ ಅತಂಕಕ್ಕೆ ಒಳಗಾದ ಭುವನ್ ಹರ ಸಾಹಸ ಪಟ್ಟು ಡೋರ್ ತೆರೆದು ಕಾರಿನಿಂದ ಹೊರಗೆ ಇಳಿದಿದ್ದಾರೆ. ಬಳಿಕ ಅಲ್ಲೇ ರಸ್ತೆ ಬದಿಯಲ್ಲಿದ್ದ ಮನೆಯವರಿಗೆ ವಿಷಯ ತಿಳಿಸಿದ್ದಾರೆ.

ಅವರ ನೆರವಿನಿಂದ ಕಾರಿಗೆ ನೀರು ಸುರಿದು ಬೆಂಕಿಯನ್ನು ನಂದಿಸಿದ್ದಾರೆ. ಇದರಿಂದ ಕಾರು ಸಂಪೂರ್ಣ ಸುಟ್ಟು ಹೋಗುವುದು ತಪ್ಪಿದರೂ ಕಾರಿನ ಇಂಜಿನ್ ಸಂಪೂರ್ಣ ಸುಟ್ಟು ಹಾನಿಯಾಗಿದೆ ಎಂದು ತಿಳಿದು ಬಂದಿದೆ.
