ಪುತ್ತೂರು : ಅ 21 : ಕೆಎಸ್ ಅರ್ ಟಿಸಿ ಪುತ್ತೂರು ಘಟಕದಿಂದ ಸಂಜೆಯಿಂದ ರಾತ್ರಿ ನಡುವಿನ ಜನ ದಟ್ಟನೆಯ ವೇಳೆಯಲ್ಲಿ ನಿಗದಿತ ವಾಗಿ ಸಂಚಾರ ನಡೆಸುವ ಕೆಲ ಬಸ್ಸುಗಳ ನ್ನು ಆ ಬಸ್ಸಿನ ಪ್ರಯಾಣಿಕರಿಗೆ ಯಾವುದೇ ಪೂರ್ವ ಸೂಚನೆ ನೀಡದೆ ಇದ್ದಕ್ಕಿದ್ದಂತೆ ರದ್ದು ಪಡಿಸಿ ಪ್ರಯಾಣಿಕ ರಿಗೆ ತೊಂದರೆ ಉಂಟು ಮಾಡುತ್ತಿರುವ ಘಟನೆಗಳು ಕಳೆದೊಂದು ತಿಂಗಳಿನಿಂದ ನಿರಂತರವಾಗಿ ನಡೆಯುತ್ತಿರುವ ಬಗ್ಗೆ ವರದಿಯಾಗಿದೆ.
ಇದರಿಂದ ಆ ಬಸ್ಸುಗಳನ್ನೆ ಅವಲಂಬಿಸಿರುವ ನೂರಾರು ಉದ್ಯೋಗಿಗಳು ವಿದ್ಯಾರ್ಥಿಗಳು ಕಾರ್ಮಿಕರು ಇತ್ಯಾದಿ ನಿತ್ಯ ಪ್ರಯಾಣಿಕರಿಗೆ ಹಾಗೂ ಇತರೆ ಪ್ರಯಾಣಿಕರಿಗೆ ಬಾರೀ ತೊಂದರೆ ಹಾಗೂ ಅರ್ಥಿಕ ನಷ್ಡಕ್ಕೂ ಕಾರಣವಾಗುತ್ತಿದೆ.
ಎರಡನೇ ಲಾಕ್ ಡೌನ್ ತೆರವುಗೊಂಡು ಕೆಎಸ್ ಆರ್ ಟಿಸಿ ಬಸ್ಸು ಸಂಚಾರ ಆರಂಭಗೊಂಡ ಬಳಿಕ ಈ ಸಮಸ್ಯೆ ತಲೆದೋರಿದು, ಕಳೆದೊಂದು ತಿಂಗಳಿನಿಂದ ಇದು ಮಿತಿಮೀರಿದೆ ಎಂದು ಪ್ರಯಾಣಿಕರು ಅಳಲು ವ್ಯಕ್ತಪಡಿಸಿದ್ದಾರೆ.
ಈ ರೀತಿಯ ಬಸ್ಸು ಸಂಚಾರ ಅಚಾನಕ್ ರದ್ದುಗೊಳ್ಳುವ ಪ್ರಕರಣಕ್ಕೆ ಇತ್ತಿಚಿನ ತಾಜ ಉದಾಹರಣೆ ಅ.19ರಂದು ಪುತ್ತೂರು – ಸುಳ್ಯ ರೂಟಿನ ಎರಡು ಸಂಜೆ ವೇಳೆ ಪ್ರಯಾಣಿಸಬೇಕಾದ ಬಸ್ಸುಗಳು ರದ್ದುಗೊಂಡಿರುವುದು. ಸುಳ್ಯಕ್ಕೆ ಸಂಜೆ 7.15, 7.45, 8.15 ಹಾಗೂ 8.40 ಹೀಗೆ ಒಟ್ಟು ನಾಲ್ಕು ಬಸ್ಸುಗಳು ನಿಯಮಿತವಾಗಿ ಓಡಾಟ ನಡೆಸುತ್ತವೆ. ಇವುಗಳ ಪೈಕಿ ಅ. 19ರಂದು 7.45 ಹಾಗೂ 8.15ರ ಎರಡು ಬಸ್ಸುಗಳನ್ನು ಯಾವುದೇ ಸೂಚನೆ ನೀಡದೆ ರದ್ದು ಪಡಿಸಿದ್ದಾರೆ. ಈ ಬಸ್ಸಿಗಾಗಿ ಹಲವಾರು ಪ್ರಯಾಣಿಕರು ಗಂಟೆಗಳ. ಕಾಲ ಕಾದಿದ್ದಾರೆ ಎಂದು ಈ ರೂಟಿನ ಬಸ್ಸಿನ ನಿತ್ಯ ಪ್ರಯಾಣಿಕ ಭರತೇಶ್ ಅಮ್ಚಿನಡ್ಕರವರು ತಿಳಿಸಿದ್ದಾರೆ.
ಪುತ್ತೂರಿನಲ್ಲಿ ಹಲವು ಖ್ಯಾತ ಎಲೆಕ್ಟ್ರಾನಿಕ್ಸ್ , ಜುವೆಲ್ಲರಿ, ಬಟ್ಟೆ ಮಳಿಗೆಗಳು, ಆಸ್ಪತ್ರೆಗಳು ಹಾಗೂ ಇನ್ನೂ ಹಲವು ಉದ್ಯೋಗದಾತ ಸಂಸ್ಥೆಗಳು ಕಾರ್ಯಾ ನಿರ್ವಹಿಸುತ್ತವೆ.ಇದರಲ್ಲಿ ಮಹಿಳೆಯರು, ಯುವತಿಯರ ಸಹಿತ ನೂರಾರು ಜನರು ದುಡಿಯುತ್ತಿದ್ದು ಅದರಲ್ಲಿ ಬಹುತೇಕರು ಗ್ರಾಮೀಣ ಭಾಗದವರು.
ಇಲ್ಲಿನ ಬಹುತೇಕ ಸಂಸ್ಥೆಗಳ ಕೆಲಸದ ಅವಧಿ ಸಂಜೆ 7 ರಿಂದ 8 ಗಂಟೆ. ಪುತ್ತೂರು ಸುಳ್ಯ ರೂಟಿನ ಸೆಂಟ್ಯಾರ್ ಕೌಡಿಚ್ಚಾರು , ಕನಕ ಮಜಲು ಹೀಗೆ ನಾನಾಬಾಗದಿಂದ ಈ ಸಂಸ್ಥೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿದ್ದಾರೆ.ಇವರು ಓಡಾಟಕ್ಕೆ ಸರಕಾರಿ ಬಸ್ಸನ್ನೆ ಅವಲಂಬಿಸಿದ್ದಾರೆ.

ಆದರೇ ಪುತ್ತೂರಿನ ಕೆಎಸ್ ಅರ್ ಟಿಸಿ ಘಟಕವೂ ಅದೇ ವೇಳೆ ಹೊರಡುವ ಬಸ್ಸುಗಳನ್ನು ರದ್ದು ಮಾಡಿದೆ. ಇದರಿಂದ ಹಲವು ಮಹಿಳೆಯರು ಯುವತಿಯುರು ಸುರಕ್ಷತೆಯ ದೃಷ್ಟಿಯಿಂದ ಅಟೋ ರಿಕ್ಷಾಗಳನ್ನು ‘ಎಂಗೇಜ್’ ಮಾಡಿ ತಮ್ಮ ನಿತ್ಯ ಪ್ರಯಾಣದ ವೆಚ್ಚದ 5 ಪಟ್ಟು 10 ಪಟ್ಟು ಪಾವತಿಸಿ ಮನೆ ಸೇರಿಕೊಂಡಿದ್ದಾರೆ. ಉಳಿದ ಕೆಲವರು ಮನೆಯಿಂದ ವಾಹನ ತರಿಸಿ ಪ್ರಯಾಣಿಸಿದರೇ ಉಳಿದವರು ರಾತ್ರಿ 8.45ರ ವರೆಗೆ ಬಸ್ಸು ನಿಲ್ದಾಣದಲ್ಲಿ ಕಾದು ಬಳಿಕ ಘಟಕದ ವತಿಯಿಂದ ಬಿಟ್ಟ ಬಸ್ಸಿನಲ್ಲಿ ಪ್ರಯಾಣಿಸಿದ್ದಾರೆ ಎಂದು ಪ್ರಯಾಣಿಕ ಸುಳ್ಯದ ಸನತ್ ಆರೋಪಿಸಿದ್ದಾರೆ.

ಈ ರೀತಿ ಕಳೆದೊಂದು ತಿಂಗಳಿನಿಂದ ಹಲವು ಬಾರಿಯಾಗಿದ್ದು ಘಟಕದ ಟಿಸಿಯವರಲ್ಲಿ ಪ್ರಶ್ನಿಸಿದರೇ ಚಾಲಕರು ದಸಾರ ರಜೆ ನಿಮಿತ್ತ ಊರಿಗೆ ಹೋಗಿದ್ದಾರೆ , ಇತ್ಯಾದಿ ಉಢಾಪೆ ಉತ್ತರ ನೀಡುತ್ತಿದ್ದಾರೆ ಹೊರತು ಬಸ್ಸು ಇಲ್ಲ ಎನ್ನುವುದನ್ನು ಮೊದಲೇ ತಿಳಿಸುವ ಹಾಗೂ ಬಸ್ಸು ನಿಯಮಿತವಾಗಿ ಸಂಚಾರಿಸುವಂತೆ ಮಾಡಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ ಎಂದು ಹಲವು ಪ್ರಯಾಣಿಕರು ಆರೋಪಿಸಿದ್ದಾರೆ
ಕೆಎಸ್ಅರ್ ಟಿಸಿ ಸ್ಪಷ್ಟನೆ
ಕಳೆದ ಕೆಲ ದಿನಗಳಿಂದ ಸುಬ್ರಹ್ಮಣ್ಯ , ಧರ್ಮಸ್ಥಳ ಕ್ಕೆ ಬಸ್ಸಿಗೆ ಬೇಡಿಕೆ ಇತ್ತು. ಡಿಸೀಲ್ ಇತ್ಯಾದಿಗಳಿಗಾಗಿ ಕೆಎಸ್ ಅರ್ಟಿಸಿಯೂ ತನ್ನ ಆದಾಯವನ್ನು ನೋಡಿಕೊಳ್ಳ ಬೇಕಾದ ಜರೂರತ್ತು ಇದೆ. ಈ ಹಿನ್ನಲೆಯಲ್ಲಿ ಒಂದಷ್ಟು ಬಸ್ಸುಗಳನ್ನು ಆ ರೂಟಿಗೆ ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ ಉಳಿದ ಭಾಗದ ರೂಟ್ ಗಳ ಪ್ರಯಾಣಿಕರಿಗೆ ತೊಂದರೆಯಾದದ್ದು ನಿಜ . ಆದರೇ ಇನ್ನು ಆ ರೀತಿ ಸಮಸ್ಯೆಯಾಗುವುದಿಲ್ಲ
ಜಯಕರ್ ಶೆಟ್ಟಿ
ಪುತ್ತೂರು ಕೆಎಸ್ಅರ್ಟಿಸಿ ಟಿಸಿ