Ad Widget

Big Breaking : ದೇಶವ್ಯಾಪಿ ಸುದ್ದಿಯಾಗಿದ್ದ ನಕ್ಸಲ್ ಸಂಪರ್ಕ ಪ್ರಕರಣದ ತೀರ್ಪು ಪ್ರಕಟ – ಬೆಳ್ತಂಗಡಿಯ ವಿಠಲ ಮಲೆಕುಡಿಯ ಹಾಗೂ ಲಿಂಗಣ್ಣ ಮಲೆಕುಡಿಯ ನಿರ್ದೋಷಿ

Ad Widget

Ad Widget

Ad Widget

ನಕ್ಸಲ್ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿ ಬಂಧಿತರಾಗಿ ಬಳಿಕ ಜಾಮೀನನಲ್ಲಿ ಬಿಡುಗಡೆಗೊಂಡಿದ್ದ ಬೆಳ್ತಂಗಡಿಯ ವಿಠಲ ಮಲೆಕುಡಿಯ ಹಾಗೂ ಅವರ ತಂದೆ ಲಿಂಗಣ್ಣ ಮಲೆಕುಡಿಯರನ್ನು ನಿರ್ದೋಷಿ ಎಂದು ಅ 21 ರಂದು ಮಂಗಳೂರಿನ ಮೂರನೇ ಹೆಚ್ಚುವರಿ ನ್ಯಾಯಾಲಯವು ತೀರ್ಪು ನೀಡಿದೆ. ಪ್ರಕರಣ ದಾಖಲಾದ 9 ವರ್ಷಗಳ ನಂತರ ದಕ ಜಿಲ್ಲಾ ನ್ಯಾಯಾಲಯ ಈ ತೀರ್ಪು ಪ್ರಕಟಿಸಿದೆ. ಪ್ರಕರಣ ದಾಖಲಾದ ಸಂದರ್ಭ ವಿಠಲ ರವರು ಕುದುರೆಮುಖ ಉದ್ಯಾನವನ ಮೂಲ ನಿವಾಸಿಗಳ ಪರ ಹೋರಾಟ ನಡೆಸುತ್ತಿದ್ದರು.

Ad Widget

Ad Widget

Ad Widget

Ad Widget

ಮಂಗಳೂರು ವಿವಿಯಲ್ಲಿ ಎಂಸಿಜೆ ವಿದ್ಯಾರ್ಥಿಯಾಗಿದ್ದ, ಡಿವೈಎಫ್ಐ ಕಾರ್ಯಕರ್ತ,ಆದಿವಾಸಿ ಹಕ್ಕುಗಳ ಸಮಿತಿಯ ರಾಜ್ಯ ಘಟಕದ ಸದಸ್ಯರಾಗಿದ್ದ  ವಿಠಲ ಮಲೆ ಕುಡಿಯ ಬಂಧನ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಅಂದಿನ ರಾಜ್ಯ ಬಿಜೆಪಿ ಸರಕಾರ ಉದ್ದೇಶಪೂರ್ವಕವಾಗಿ ಅವರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿದೆ ಎಂಬ ಆರೋಪ ಆಗ ಕೇಳಿ ಬಂದಿತ್ತು

Ad Widget

Ad Widget

Ad Widget

Ad Widget

    ಬೆಳ್ತಂಗಡಿ ತಾಲೂಕಿನ ಕುತ್ಲೂರು ನಿವಾಸಿ ವಿಠಲ ಮಲೆಕುಡಿಯರನ್ನು 2012ರ ಮಾ. 3ರಂದು ನಕ್ಸಲ್ ನಿಗ್ರಹದಳದ ಪೊಲೀಸರು ಬಂಧಿಸಿದ್ದರು.  ಆಗ  ಮಂಗಳೂರು ವಿವಿಯ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿದ್ದ ವಿಠಲರವರನ್ನು ಜೈಲಿನಿಂದ ಕೈಗೆ ಕೊಳ ತೋಡಿಸಿ ಪರೀಕ್ಷೆ ಬರೆಯಲು  ಹಾಜರುಪಡಿಸಿ, ಕೈಕೊಳ ತೊಟ್ಟು ಪರೀಕ್ಷೆ ಬರೆಯುವಂತೆ ಮಾಡಿದ್ದು ವ್ಯಾಪಕ  ಚರ್ಚೆ ಹುಟ್ಟು ಹಾಕಿತ್ತು. ಈ ಪ್ರಕರಣವನ್ನು ಸಿಪಿಐಎಂ ಪಕ್ಷ ಸವಾಲಾಗಿ ಸ್ವೀಕರಿಸಿ ಹೋರಾಟ ನಡೆಸಿತ್ತು.

 ಜು 15 2012ರಂದು  ವಿಠ್ಠಲ ಮಲೆ ಕುಡಿಯ ಮತ್ತು ತಂದೆ ಲಿಂಗಪ್ಪ ನವರಿಗೆ ನ್ಯಾಯಾಲಯ ಷರತ್ತು ಬದ್ದ ಜಾಮೀನು ನೀಡಿತ್ತು . ಆ ಬಳಿಕ ಸ್ಥಳೀಯ ಗ್ರಾ .ಪಂ ಚುಣಾವಣೆಯಲ್ಲಿ ಸ್ಫರ್ಧಿಸಿಯೂ ಗಮನ ಸೆಳೆದಿದ್ದರು.

Ad Widget

Ad Widget

 2015ರ  ಜನವರಿ ಕೊನೆಯಲ್ಲಿ ವಿಠಲ ಮಲೆಕುಡಿಯ ವಿರುದ್ಧ ರಾಜ್ಯ ಸರಕಾರದ ನಿರ್ದೇಶನದಂತೆ ಬಂಟ್ವಾಳ ಎಎಸ್ಪಿಯವರು ಬೆಳ್ತಂಗಡಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ದೋಷಾರೋಪ ಪಟ್ಟಿಯಲ್ಲಿ ವಿಠಲ ಮಲೆಕುಡಿಯ ಅವರನ್ನು 6ನೇ ಆರೋಪಿಯನ್ನಾಗಿ ಹಾಗೂ ಅವರ ತಂದೆ ಲಿಂಗಣ್ಣ ಮಲೆಕುಡಿಯ ಅವರನ್ನು 7ನೇ ಆರೋಪಿಯನ್ನಾಗಿ ಹೆಸರಿಸಲಾಗಿತ್ತು ಇದು ಮತ್ತೊಂದು ಹಂತದ ಹೋರಾಟಕ್ಕೆ ಕಾರಣವಾಗಿತ್ತು.

ಇದೀಗ ಪ್ರಕರಣದ ವಿಚಾರಣೆ ನಡೆಸಿದ   ನ್ಯಾಯಾಧೀಶ ಬಿ.ಬಿ. ಜಕಾತಿ ಅವರು ತಂದೆ ಹಾಗೂ ಮಗ ಇಬ್ಬರು ನಿರ್ದೋಷಿ ಎಂದು  ತೀರ್ಪು ನೀಡಿದ್ದಾರೆ.

Ad Widget

Leave a Reply

Recent Posts

Belthangady | ಕುತಂತ್ರಿ ಬುದ್ದಿ ಬಿಟ್ಟು ಚುನಾವಣೆಯನ್ನು ಚುನಾವಣೆಯ ರೀತಿ ಎದುರಿಸಿ – ಜನಾರ್ಧನ ಪೂಜಾರಿಗೆ ಹಿಂದೂ ವಿರೋಧಿಯೆಂದು ಅಪಪ್ರಚಾರ ಮಾಡಿದ ತಂಡವೇ ಬೆಳ್ತಂಗಡಿಯ ರಕ್ಷಿತ್ ಶಿವರಾಂ ಗೂ ಮಾಡುತ್ತಿದೆ : ಖಡಕ್ ಎಚ್ಚರಿಕೆ ಕೊಟ್ಟ ‘ನಮ ಬಿಲ್ಲವೆರ್’

error: Content is protected !!
%d bloggers like this: