ಮಂಗಳೂರು, ಅಕ್ಟೋಬರ್ 20: ರಾಷ್ಟ್ರೀಯ ತಾಂತ್ರಿಕ ಸಂಸ್ಥೆ ಕರ್ನಾಟಕ, ಸುರತ್ಕಲ್ನಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಸಹಾಯಕ ಪ್ರಾಧ್ಯಾಪಕ(ಗ್ರೇಡ್-2), ಸಹಾಯಕ ಪ್ರಾಧ್ಯಾಪಕ(ಗ್ರೇಡ್-1) ಹುದ್ದೆಗಳಿಗೆ ಈ ನೇಮಕಾತಿ ಹೊರಡಿಸಲಾಗಿದೆ.
ಬಿಇ, ಬಿ.ಟೆಕ್, ಎಂಬಿಎ, ಎಂ.ಟೆಕ್ ಪೂರ್ಣಗೊಳಿಸಿದ ಅಭ್ಯರ್ಥಿಗಳು ಖಾಲಿ ಇರುವ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಒಟ್ಟು 23 ಹುದ್ದೆಗಳು ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 05, 2021ರಿಂದ ನವೆಂಬರ್ 10, 2021ರವರೆಗೆ ಆನ್ಲೈನ್ ಮೂಲಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಯ ಮಾಹಿತಿ, ಅಗತ್ಯ ವಿದ್ಯಾರ್ಹತೆ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಹಾಗೂ ಅರ್ಜಿ ಸಲ್ಲಿಸುವ ವಿಧಾನವನ್ನು ಈ ಕೆಳಗೆ ನೀಡಲಾಗಿದೆ
ಸಂಸ್ಥೆ: ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ- ಕರ್ನಾಟಕ, ಸುರತ್ಕಲ್
ಹುದ್ದೆಯ ಹೆಸರು: ಸಹಾಯಕ ಪ್ರಾಧ್ಯಾಪಕ(ಗ್ರೇಡ್-2), ಸಹಾಯಕ ಪ್ರಾಧ್ಯಾಪಕ(ಗ್ರೇಡ್-1)
ಒಟ್ಟು ಹುದ್ದೆಗಳು: 23
ವಿದ್ಯಾರ್ಹತೆ: ಬಿಇ, ಬಿ.ಟೆಕ್, ಎಂಬಿಎ, ಎಂಟೆಕ್, ಎಂಇ, ಪಿಎಚ್ಡಿ
ಕೆಲಸದ ಸ್ಥಳ: ಸುರತ್ಕಲ್, ಮಂಗಳೂರು
ಅರ್ಜಿ ಸಲ್ಲಿಸುವುದು: ಆನ್ಲೈನ್
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 05/10/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10/11/2021
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: ನವೆಂಬರ್ 3, 2021
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್ 5, 2021
ಅರ್ಜಿ ಶುಲ್ಕ: ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕ ಇರುವುದಿಲ್ಲ. ಆದರೆ ಪ್ರಕ್ರಿಯೆ ಶುಲ್ಕವಾಗಿ 100 ರೂ. ಇರುತ್ತದೆ. (ಹಿಂದಿರುಗಿಸಲಾಗುವುದಿಲ್ಲ)

ವಿದ್ಯಾರ್ಹತೆ :
ಹೊಸದಾಗಿ ಪ್ರವೇಶ ಪಡೆದವರೆಲ್ಲೂ ಪಿಎಚ್ಡಿ ಹೊಂದಿರಬೇಕು. ಸಂಬಂಧಿತ/ ತತ್ಸಮಾನ ವಿಭಾಗದಲ್ಲಿ ಮತ್ತು ಹಿಂದಿನ ಪದವಿಗಳಲ್ಲಿ ಪ್ರಥಮ ದರ್ಜೆಯನ್ನು ಹೊಂದಿರಬೇಕು.
ಮೂಲ ಪದವಿಗಳು :
ಇಂಜಿನಿಯರಿಂಗ್ ವಿಭಾಗಗಳಲ್ಲಿ ಅಧ್ಯಾಪಕ ಹುದ್ದೆಗಳಿಗೆ: B.E./ B.Tech. ಅಥವಾ ಯಾವುದೇ ಸಮಾನ ಪದವಿ ಮತ್ತು M.E./ M.Tech ಅಥವಾ ಸಂಬಂಧಿತ ವಿಭಾಗದಲ್ಲಿ ಯಾವುದೇ ಸಮಾನ ಪದವಿ ಪಡೆದಿರಬೇಕು. ಬಿಇ/ ಬಿಟೆಕ್ ನಂತರ ನೇರವಾಗಿ ಪಿಎಚ್ಡಿ ಪದವಿ ಪಡೆದಿರಬೇಕು. ಇತರ ಮಾನದಂಡಗಳನ್ನು ಪೂರೈಸಿದರೆ ಪ್ರತಿಷ್ಠಿತ ಸಂಸ್ಥೆಗಳು/ ವಿಶ್ವವಿದ್ಯಾಲಯಗಳಿಂದ ಪರಿಗಣಿಸಲಾಗುತ್ತದೆ.
ಗಣಿತದಲ್ಲಿ ಅಧ್ಯಾಪಕ ಹುದ್ದೆಗಳಿಗೆ:
ಸಂಬಂಧಿತ ವಿಭಾಗದಲ್ಲಿ ಎಂ.ಎಸ್ಸಿ ಪೂರ್ಣಗೊಳಿಸಿರಬೇಕು.
ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ನಲ್ಲಿ ಅಧ್ಯಾಪಕ ಹುದ್ದೆಗಳಿಗೆ:
ಸಂಬಂಧಿತ ವಿಭಾಗದಲ್ಲಿ ಎಂ.ಎ/ ಎಂ.ಎಸ್ಸಿ/ ಎಂ.ಕಾಂ/ ಎಂಬಿಎ/ ಎಂ.ಟೆಕ್ ಪಡೆದಿರಬೇಕು.
ಆಯ್ಕೆ ಪ್ರಕ್ರಿಯೆ: ಶಾರ್ಟ್ ಲಿಸ್ಟಿಂಗ್, ದಾಖಲಾತಿ ಪರಿಶೀಲನೆ, ಆನ್ಲೈನ್ ಸಂದರ್ಶನ
NIT ಕರ್ನಾಟಕದ ನೇಮಕಾತಿ ಅನುಸಾರ ಸಹಾಯಕ ಪ್ರಾಧ್ಯಾಪಕ-ಗ್ರೇಡ್ 1 ಮತ್ತು 2 ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಅಕ್ಟೋಬರ್ 5ರಿಂದ ನವೆಂಬರ್ 10ರವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೂ ಮುನ್ನ ಈ ಕೆಳಕಂಡ ಹಂತಗಳನ್ನು ಅನುಸರಿಸಿ.
ಮೊದಲಿಗೆ NIT ಕರ್ನಾಟಕದ ಅಧಿಕೃತ ವೆಬ್ಸೈಟ್ http://www.nitk.ac.in ಗೆ ಭೇಟಿ ನೀಡಬೇಕು. ಅಲ್ಲಿ ಕಾಣ ಸಿಗುವ “Recruitment/ Career/ Advertisement menu” ಲಿಂಕ್ ಮೇಲೆ ಕ್ಲಿಕ್ ಮಾಡಿ. ಸಹಾಯಕ ಪ್ರಾಧ್ಯಾಪಕ(ಗ್ರೇಡ್-2), ಸಹಾಯಕ ಪ್ರಾಧ್ಯಾಪಕ(ಗ್ರೇಡ್-1) ಹುದ್ದೆಗಳ ನೋಟಿಫಿಕೇಶನ್ನ್ನು ಹುಡುಕಿ, ಅದರ ಮೇಲೆ ಕ್ಲಿಕ್ ಮಾಡಿ. ಅಧಿಕೃತ ನೋಟಿಫಿಕೇಶನ್ನ ಲಿಂಕ್ನ್ನು ಡೌನ್ಲೋಡ್ ಮಾಡಿಕೊಳ್ಳಿ. ನೋಟಿಫಿಕೇಶನ್ನಲ್ಲಿ ನೀಡಲಾಗಿರುವ ಎಲ್ಲಾ ಸೂಚನೆಗಳನ್ನು ಸರಿಯಾಗಿ ಓದಿ.
ಕೆಳಗೆ ನೀಡಲಾಗಿರುವ Official Online Apply/ Registration ಲಿಂಕ್ ಮೇಲೆ ಕ್ಲಿಕ್ ಮಾಡಿ. ಅಗತ್ಯ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ.